ಆಲೂರು: ‘ವ್ಯಕ್ತಿಯ ಆರೋಗ್ಯ ಸಮತೋಲಿತ ಆಹಾರ ಮತ್ತು ಉತ್ತಮ ಆಲೋಚನೆಯಲ್ಲಿ ಅಡಗಿರುತ್ತದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಿಸಾರ್ಫಾತಿಮ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ಕ್ರಾಸ್ ಘಟಕ, ರೆಡ್ ರಿಬ್ಬನ್ ಕ್ಲಬ್ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಆರೋಗ್ಯ ದಿನಾಚರಣೆಯಲ್ಲಿ ‘ಆರೋಗ್ಯಕರ ಜೀವನಶೈಲಿ’ ವಿಷಯ ಕುರಿತು ಉಪನ್ಯಾಸ ನೀಡಿದರು.

‘ಆರೋಗ್ಯ ಎಂಬುದು ಪ್ರಪಂಚದಲ್ಲೇ ಅತ್ಯಂತ ಸುಂದರ ವಸ್ತು. ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ, ಕುಟುಂಬದಿಂದ ದೊರಕುವ ಪ್ರೀತಿ, ಸಮಾಜದಿಂದ ಗೌರವ ಪಡೆಯಲು ಸದಾ ಯತ್ನಿಸುತ್ತಿರಬೇಕು. ಹೆಣ್ಣು ಮಕ್ಕಳು ತಮಗಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಸ್.ಸತೀಶ್ ಮಾತನಾಡಿ, ‘ಇಂದು ಜೀವನಶೈಲಿ ಬದಲಾಗುತ್ತಿದೆ. ಪೌಷ್ಠಿಕ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಸ್ವಚ್ಛ ನೀರು ಕುಡಿಯುವುದು, ಉತ್ತಮ ಪರಿಸರ, ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ, ಸಾಕಷ್ಟು ನಿದ್ರೆ, ಒತ್ತಡ ನಿರ್ವಹಣೆ ಮೂಲಕ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಬಹುದು’ ಎಂದರು. ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಟಿ.ಪಿ.ಪುಟ್ಟರಾಜು ಮಾತನಾಡಿ, ‘ಆರೋಗ್ಯಕ್ಕಾಗಿ ಒಟ್ಟಾಗಿ, ವಿಜ್ಞಾನದ ಜೊತೆ ನಿಲ್ಲಿ’ ಎಂಬುದು ಈ ವರ್ಷದ ಆರೋಗ್ಯ ದಿನಾಚರಣೆ ಧ್ಯೇಯವಾಕ್ಯ. ಇದನ್ನು ಎಲ್ಲರೂ ಸಾಕಾರಗೊಳಿಸಬೇಕು’ ಎಂದರು.

ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಮೋಹನ್, ಮಂಜುನಾಥಸ್ವಾಮಿ, ಸಹ ಪ್ರಾಧ್ಯಾಪಕ ಕೆ.ಎನ್.ರಮೇಶ್, ಪಿ.ಕೆ.ರಾಘವೇಂದ್ರ, ಜೆ.ಜಿ.ನಟರಾಜ್, ಟಿ.ಕೆ.ಸರಿತಾ, ಸೌಮ್ಯ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-36-1647626420

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.