ಆಲೂರು: ಒಂದು ತಿಂಗಳಿನಿಂದ ಸುಡುಬಿಸಿಲು ಮತ್ತು ಆಗಾಗ್ಗೆ ಮೋಡ ಕವಿದ ವಾತಾವರಣವಿದ್ದ ತಾಲ್ಲೂಕಿನಲ್ಲಿ ಭಾನುವಾರ ಮಧ್ಯಾಹ್ನ ಸಿಡಿಲು ಗುಡುಗಿನ ಸದ್ದಿನೊಂದಿಗೆ ಮಳೆ ಸುರಿಯಿತು. ಸಂಜೆಯಾದರೂ ತುಂತುರು ಮಳೆಯಾಗುತ್ತಿತ್ತು.

ಗಾಳಿ ಮಳೆಗೆ ಆಲೂರು-ಬಿಕ್ಕೋಡು ಮುಖ್ಯ ರಸ್ತೆ ಡೀಪ್ಕಟಿಂಗ್ ಬಳಿ ಭಾರಿ ಗಾತ್ರದ ಮರ ರಸ್ತೆಗೆ ಅಡ್ಡ ಬಿದ್ದ ಪರಿಣಾಮ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಕೂದಲೆಳೆ ಅಂತರದಲ್ಲಿ ಮನೆ ಮೇಲೆ ಮರ ಬೀಳುವುದು ತಪ್ಪಿದೆ. ಕೂಡಲೆ ಸೆಸ್ಕ್ ಇಲಾಖೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಸ್ಥಳೀಯರ ನೆರವಿನಿಂದ ಮರ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.

ಪಾಳ್ಯ ಹೋಬಳಿ ವ್ಯಾಪ್ತಿಗೊಳಪಡುವ ಕಾಮತಿ, ತೊರಳ್ಳಿ, ನಾಕಲಗೂಡು, ಸಿದ್ದಾಪುರ, ಬಾವಸವಳ್ಳಿ, ಕಣತೂರು, ವಾಟೆಹೊಳೆ, ಜೇಕರವಳ್ಳಿ ಸೇರಿದಂತೆ ಸುಮಾರು 20-25 ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಸೋಮವಾರ ಬೆಳಿಗ್ಗೆ ವಿದ್ಯುತ್ ಸಂಪರ್ಕ ಸರಿಪಡಿಸಲಾಗುವುದು ಎಂದು ಸೆಸ್ಕ್ ಜೂನಿಯರ್ ಇಂಜಿನಿಯರ್ ಕುಮಾರ್ ತಿಳಿಸಿದರು. ಮಳೆಯಿಲ್ಲದೆ ಕಂಗಾಲಾಗಿದ್ದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಸೋಮವಾರ ಭೂಮಿ ಉಳುಮೆ ಮಾಡುವುದಿಲ್ಲ. ಮಂಗಳವಾರದಿಂದ ರೈತರು ಕೃಷಿ ಭೂಮಿ ಉಳುಮೆ ಮಾಡಲು ತಯಾರಿ ನಡೆಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-36-1658591327

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.