ಆಲೂರು: ವಿದ್ಯೆ ಎಂಬುದು ಹುಲಿ ಹಾಲಿದ್ದಂತೆ, ಅದನ್ನು ಕುಡಿದವರು ಘರ್ಜಿಸಲೇಬೇಕು ಎಂಬ ಡಾ. ಅಂಬೇಡ್ಕರ್ ಅವರ ಸಂದೇಶವನ್ನು ವಿದ್ಯಾರ್ಥಿಗಳು ಪಾಲಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು. ಪಟ್ಟಣದ ಸರ್ಕಾರಿ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿಗಿದ್ದ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪಾಶ್ಚಿಮಾತ್ಯ ದೇಶಗಳಲ್ಲಿನ ಪರಿಸ್ಥಿತಿಯನ್ನು ಒಮ್ಮೆ ಅವಲೋಕಿಸಲು ನಡುಕವಾಗುತ್ತದೆ. ಆದರೆ ನಮ್ಮ ದೇಶದ ಪ್ರಧಾನ ಮಂತ್ರಿ, ದೇಶದಲ್ಲಿ ಯಾರಿಗೂ ತೊಂದರೆಯಾಗದಂತೆ ಆಂತರಿಕ, ಬಾಹ್ಯ ಸುರಕ್ಷತೆಯನ್ನು ಕಾಪಾಡಿದ್ದಾರೆ. ದೇಶದಲ್ಲಿ ಹುಟ್ಟಿರುವ ನಾವೆಲ್ಲ ಪುಣ್ಯವಂತರು ಎಂದರು. ಹಾಸನ ಎವಿಕೆ ಕಾಲೇಜು ಪ್ರಾಂಶುಪಾಲ ಡಾ. ಸಿ. ಚ. ಯತೀಶ್ವರ್ ಮಾತನಾಡಿ, ಶಿಕ್ಷಣ, ಜ್ಞಾನ ಎಂಬುದು ವ್ಯಕ್ತಿ, ಸಮಾಜ ಮತ್ತು ದೇಶದ ಅಡಿಪಾಯ. ಶಿಕ್ಷಣಕ್ಕೆ ಮಹತ್ವ ನೀಡದ ಸಮಾಜ ಪ್ರಗತಿಯತ್ತ ಸಾಗುವುದಿಲ್ಲ. ಭಾರತದ ಮೇಲೆ ದಾಳಿ ಮಾಡಿದವರು ಸಂಪತ್ತು ಹೊತ್ತೊಯ್ದರೇ ಹೊರತು, ಆಧ್ಯಾತ್ಮಿಕ ಸಂಪತನ್ನು ಹೊತ್ತೊಯ್ಯಲು ಸಾಧ್ಯವಾಗಲಿಲ್ಲ. ವೇದ, ಉಪನಿಷತ್ತು, ಭಗವದ್ಗೀತೆ, ರಾಮಾಯಣ, ಮಹಾಭಾರತ, ಭಾಗವತ ಜ್ಞಾನ ಭಂಡಾರವಾಗಿದೆ. ಜ್ಞಾನ ಭಂಡಾರ ಬೆಳೆದಂತೆ ವ್ಯಕ್ತಿತ್ವ ವಿಕಸನ ವೃದ್ಧಿಯಾಗುತ್ತದೆ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ, ದತ್ತಿದಾನಿ ಕೆ. ಎಸ್. ಮಂಜೇಗೌಡ ಮಾತನಾಡಿದರು. ಪ್ರಾಂಶುಪಾಲ ಟಿ. ಪಿ. ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಬಿಟ್ಟು, ದಿನಪತ್ರಿಕೆ ಓದಿ ಜ್ಞಾನ ವೃದ್ಧಿಸಲು ತಿಳಿಸಿದರು. ದತ್ತಿದಾನಿ ಶಾಂತಕೃಷ್ಣ, ಲಯನ್ಸ್ ಸಂಸ್ಥೆ ಅಧ್ಯಕ್ಷ ಬಿ. ಮಂಜೇಗೌಡ, ಬಿಜೆಪಿ ಮುಖಂಡ ಅಬ್ಬನ ಕೃಷ್ಣಮೂರ್ತಿ, ವಿವಿಧ ಸಮಿತಿ ಸಂಚಾಲಕ ಡೀನ್ ಕೆ. ಎಚ್. ರಮೇಶ್, ಪ್ರೊ. ನಟರಾಜ್, ಅತಿಥಿ ಉಪನ್ಯಾಸಕಿ ಸರಿತಾ, ಪ್ರೊ. ರಾಘವೇಂದ್ರ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-36-949774622

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.