ಹಳೇಬೀಡು: ಕಲ್ಲಳ್ಳಿ ಅರಣ್ಯ ಪ್ರದೇಶದ ಕಾಡಂಚಿನಲ್ಲಿರುವ ಅಮ್ಮನಬ್ಯಾಡರಹಳ್ಳಿಯಲ್ಲಿ ಕೊಲ್ಲಾಪುರದಮ್ಮ, ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ ಶನಿವಾರ ವೈಭವದಿಂದ ನೆರವೇರಿತು.

ಕೊಲ್ಲಾಪುರದಮ್ಮ, ಚಾಮುಂಡೇ ಶ್ವರಿ ಹಾಗೂ ಕೆಂಚರಾಯ ಸ್ವಾಮಿಯ ಗಣ ಮಕ್ಕಳು ವಾದ್ಯಗಳ ಲಯಕ್ಕೆ ತಕ್ಕಂತೆ ಕುಣಿದರು. ನೆರೆದಿದ್ದ ಭಕ್ತರು ಶಿಳ್ಳೆ ಹಾಕಿ, ಜಯ ಘೋಷ ಹಾಕುತ್ತ ಕುಣಿಯುತ್ತಿದ್ದ ಗಣ ಮಕ್ಕಳನ್ನು ಹುರಿದುಂಬಿಸಿದರು.

ವಿವಿಧ ಪೂಜಾ ವಿಧಾನ ನೆರವೇರಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನೆರೆದಿದ್ದ ಭಕ್ತರು ನೂಕುನುಗ್ಗಲಿನಲ್ಲಿ ರಥ ಎಳೆದರು. ಕೊಲ್ಲಾಪುರದಮ್ಮನವರಿಗೆ ಜೈ, ಚಾಮುಂಡೇಶ್ವರಿ ಅಮ್ಮನವರಿಗೆ ಜೈ, ಕೆಂಚರಾಯ ಸ್ವಾಮಿಗೆ ಜೈ ಎಂದು ಘೋಷಣೆ ಕೂಗಿದ ಜನರು ಭಕ್ತಿ ಲೋಕದಲ್ಲಿ ಮಿಂದೆದ್ದರು.

ದೇವಾಲಯದ ಸುತ್ತ ಚಲಿಸಿದ ರಥ ಸ್ವಸ್ಥಾನಕ್ಕೆ ಬಂದಾಗ ಜಮಾಯಿಸಿದ ಭಕ್ತರು ರಥದಲ್ಲಿ ಆರೋಹಣ ಮಾಡಿದ ದೇವತೆಗಳ ದರ್ಶನ ಪಡೆದರು. ವಿವಿಧ ಊರಿನಿಂದ ಆಗಮಿಸಿದ್ದ ಭಕ್ತರು ಹಣ್ಣು ಕಾಯಿ ಪೂಜೆ ಮಾಡಿಸಿದರು.

ಗ್ರಾಮದಲ್ಲಿ ಮೂರು ದಿನದಿಂದ ಜಾತ್ರೆ ನಡೆಯಿತು. 26ರಂದು ಮಳೆ, ಬೆಳೆ ಸಮರ್ಪಕವಾಗಿ ಬರಲಿ, ಜನರು ಸಂತೃಪ್ತಿಯಿಂದ ಬದುಕುವಂತಾಗಬೇಕು ಎಂದು ಪ್ರಾರ್ಥಿಸಿ ಸತ್ಯಮಲ್ಲೇಶ್ವರ ಸ್ವಾಮಿಯವರ ಪರ ನೆರವೇರಿಸಿ, ಜಾತ್ರೆ ಆರಂಭಿಸಲಾಯಿತು. ಅಂದು ರಥ ಶುದ್ಧೀಕರಿಸಿ ಅಭಿಷೇಕ ಪೂಜೆ ನೆರವೇರಿಸಲಾಯಿತು.

27ರಂದು ಶುಕ್ರವಾರ ರಥಕ್ಕೆ ಕಳಸ ಸ್ಥಾಪನೆ ನೆರವೇರಿಸಲಾಯಿತು. ನಂತರ ಘಳಿಗೆ ತೇರು ನಡೆಯಿತು. ಸುಮಂಗಲೆಯರು ಹಾಗೂ ಪುಟ್ಟ ಹೆಣ್ಣು ಮಕ್ಕಳು ಗುಗ್ಗಳಾರತಿ ನಡೆಸಿದರು. ವಿದ್ಯುತ್ ದೀಪಗಳ ಬೆಳಕಿನಲ್ಲಿ ಅಮ್ಮನವರ ಸಿಡಿ ಹಾಡಿಸಲಾಯಿತು.

ಮೂರು ದಿನದಿಂದ ಜಾತ್ರೆ ಸಂಭ್ರಮಿಸಿದ ಗ್ರಾಮಸ್ಥರು ಭಾನುವಾರ ಕೆಂಚರಾಯನ ಭಾನಕ್ಕೆ ಸಿದ್ಧತೆ ನಡೆಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-36-1654647048

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.