ಆಂಜನೇಯ ಸ್ವಾಮಿ ರಥೋತ್ಸವ

ಸೋಮವಾರ, ಮೇ 27, 2019
23 °C

ಆಂಜನೇಯ ಸ್ವಾಮಿ ರಥೋತ್ಸವ

Published:
Updated:
Prajavani

ಬಾಣಾವರ: ಹೋಬಳಿಯ ತೊಂಡಿಗನ ಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ರಥೋತ್ಸವ ನಡೆಯಿತು.

ಮೂಲ ವಿಗ್ರಹಕ್ಕೆ ಅಭಿಷೇಕ, ಹೋಮ, ಅಂಕುರಾರ್ಪಣೆ, ಧ್ವಜಾ ರೋಹಣ, ಪಲ್ಲಕ್ಕಿ ಉತ್ಸವ, ಸೀತಾ ರಾಮ ಕಲ್ಯಾಣ, ಕುಂಕು ಮಾರ್ಚನೆ ನಡೆದವು.

ಹೂವುಗಳಿಂದ ಅಲಂಕರಿಸಿದ್ದ ರಥದಲ್ಲಿ ಸ್ವಾಮಿಯ ವಿಗ್ರಹ ಪ್ರತಿಷ್ಠಾಪಿಸಿದ ಬಳಿಕ ಮೆರವಣಿಗೆ ಮಾಡಲಾಯಿತು. ಭಕ್ತರು ರಥಕ್ಕೆ ಬಾಳೆಹಣ್ಣು, ದವನ ಎಸೆದು ಭಕ್ತಿ ಮೆರೆದರು.

ತೊಂಡಗನಹಳ್ಳಿಯ ಪ್ರತಿ ಮನೆ ಮುಂದೆ ರಂಗೋಲಿ ಹಾಕಿ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ತೊಂಡಿಗನಹಳ್ಳಿ, ಕೆಂಗುರುಬರ ಹಟ್ಟಿ, ಹಂಗುರುಬರಹಟ್ಟಿ, ಕೋಡಿ ಹಳ್ಳಿ, ಹನುಮನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !