ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಗಳಿಗೆ 14 ರಂದು ಉತ್ತರ:ಸೂರಜ್

Last Updated 6 ಡಿಸೆಂಬರ್ 2021, 16:34 IST
ಅಕ್ಷರ ಗಾತ್ರ

ಹಾಸನ: ‘1960 ದಶಕದಿಂದಲೂ ತಾತ, ತಂದೆ, ಚಿಕ್ಕಪ್ಪ ಹೀಗೆ ನಮ್ಮ ಕುಟುಂಬದ ವಿರುದ್ಧನಿರಂತರ ಅಪಪ್ರಚಾರ ಮಾಡಲಾಗುತ್ತಿದೆ. ಕೆಲವರಿಗೆ ಚುನಾವಣಾ ಸಂದರ್ಭದಲ್ಲಿ ಇದೊಂದೇಗುರಿ. ಯಾರು ಏನೇ ಮಾಡಿದರೂ, ಇದರಲ್ಲಿ ಯಶಸ್ಸು ಅಥವಾ ಆರೋಪ ಸಾಬೀತು ಮಾಡಲುಸಾಧ್ಯವಾಗಿದೆಯೇ’ ಎಂದು ಜೆಡಿಎಸ್‌ ಅಭ್ಯರ್ಥಿ ಡಾ. ಆರ್‌.ಸೂರಜ್‌ ಪ್ರಶ್ನಿಸಿದರು

‘ನಾಮಪತ್ರ ಕಾನೂನು ಬಾಹಿರವಾಗಿದೆ’ ಎಂದು ತಮ್ಮ ವಿರುದ್ಧ ಕುಂದೂರು ಗ್ರಾಮದ ಕೆ.ಎಲ್.ಹರೀಶ್‌ ಸಲ್ಲಿಸಿದ್ದ ರಿಟ್‌ ಅರ್ಜಿ ಹೈಕೋರ್ಟ್ ವಜಾಗೊಳಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಸೋಮವಾರ ಸಹ ಕೋರ್ಟ್ ಅರ್ಜಿದಾರರಿಗೆ ಛೀಮಾರಿ ಹಾಕಿ ರಿಟ್ ವಜಾ ಮಾಡಿದೆ. ಇವತ್ತು ಕುಟುಂಬ ರಾಜಕಾರಣ ಎಂಬುದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಾಸು ಹೊಕ್ಕಾಗಿದೆ. ಒಂದೇ ಕುಟುಂಬದ ಅಣ್ಣ-ತಮ್ಮ, ಅಪ್ಪ-ಮಗ ಇಲ್ಲವೆ ಸಂಬಂಧಿಗಳು ಸಕ್ರಿಯ ರಾಜಕೀಯದಲ್ಲಿದ್ದಾರೆ’ ಎಂದು ತಿರುಗೇಟು ನೀಡಿದರು.

‘ನನಗೆ ಮಾತನಾಡಲು ಬರುವುದಿಲ್ಲ ಎಂದು ಕೆಲವರು ಹೇಳಿದ್ದಾರೆ. ಆದರೆ, ಕಳೆದ ಐದಾರು ವರ್ಷಗಳಿಂದ ನಾನು ಗ್ರಾಮೀಣ ಭಾಗದ ಜನರ ನೋವು-ನಲಿವಿಗೆ ಸ್ಪಂದಿಸಿದ್ದೇನೆ. ಸೊಸೈಟಿ,ಗ್ರಾಮ ಪಂಚಾಯಿತಿ, ವಿಧಾನಸಭೆ, ಲೋಕಸಭೆ ಹೀಗೆ ಹಲವು ಚುನಾವಣೆಗಳಲ್ಲಿ ಕೆಲಸ ಮಾಡಿದ್ದೇನೆ. ಈ ಎಲ್ಲಾ ಆರೋಪಗಳಿಗೆ ಡಿ.14 ರಂದು ಉತ್ತರ ಸಿಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT