ಅರಕಲಗೂಡು: ಅಹಿಂಸೆಯೆ ಪರಮಧರ್ಮ ಎಂದು ಸಾರಿದ ಭಗವಾನ್ ಮಹಾವೀರರ ತತ್ವ, ಆದರ್ಶಗಳು ವಿಶ್ವಕ್ಕೆ ಮಾರ್ಗದರ್ಶಿಯಾಗಿವೆ ಎಂದು ತಹಶೀಲ್ದಾರ್ ಕೆ.ಸಿ. ಸೌಮ್ಯ ತಿಳಿಸಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮಹಾವೀರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಮನುಷ್ಯ, ಪ್ರಾಣಿ ಸೇರಿದಂತೆ ಜಗತ್ತಿನ ಯಾವುದೇ ಜೀವಿಯನ್ನೂ ನೋಯಿಸಬಾರದು ಎಂಬ ಇವರ ಆದರ್ಶ ಎಲ್ಲ ಕಾಲಕ್ಕೂ ಸಲ್ಲುವಂತಹದ್ದು, ಸಮಾಜದಲ್ಲಿ ನಡೆಯುತ್ತಿರುವ ಯುದ್ಧ, ಹಿಂಸಾಚಾರಗಳಿಂದ ವಿಶ್ವ ತಲ್ಲಣಿಸುತ್ತಿದ್ದು, ಮಹಾವೀರರ ತತ್ವಗಳು ಎಲ್ಲರ ಹೃದಯದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿ ಕಣ್ಣು ತೆರೆಸುವಂತಾಗಲಿ’ ಎಂದರು.

ಜೈನ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ ಜೈನ್, ಮಹಾವೀರ ಜೈನ್, ನವರತ್ನ ಜೈನ್ ಮಾತನಾಡಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಂದ್ರಕುಮಾರ್, ಸಿಡಿಪಿಒ ವೆಂಕಟೇಶ್, ಶಿರಸ್ತೆದಾರ್ ಸೋಮಶೇಖರ್, ಕಂದಾಯ ನಿರೀಕ್ಷಕ ಲೋಕೇಶ್, ಜೈನ ಸಮಾಜದ ಪ್ರಮುಖರಾದ ಇಂದ್ರಜೈನ್, ರಾಜೆಂದ್ರಜೈನ್, ಅಶಿಸ್, ಕಿಶನ್ ಲಾಲ್, ಭುರಾರಾಮ್, ಅಮುಲಕ್ ಚಂದ್, ಶ್ರವಣ್, ಸಂದೀಪ್ ಜೈನ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-36-2213239

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.