ಅರಕಲಗೂಡು: ‘ಕೃಷಿ ಮತ್ತು ಹೈನುಗಾರಿಕೆಯಲ್ಲಿ ತಂತ್ರಜ್ಞಾನ ಬಳಕೆಗೆ ಹೆಚ್ಚು ಒತ್ತು ನೀಡುವ ಮೂಲಕ ವೈಜ್ಞಾನಿಕವಾಗಿ ಸಮಗ್ರ ಬೆಳೆಗಳನ್ನು ಬೆಳೆದರೆ ಆರ್ಥಿಕವಾಗಿ ಲಾಭದಾಯಕ ಉದ್ಯಮವಾಗಿ ಪರಿವರ್ತಿಸಿಕೊಳ್ಳಬಹುದು’ ಎಂದು ಹಾಸನ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಂ.ಸಿ.ರಂಗಸ್ವಾಮಿ ಹೇಳಿದರು.

ತಾಲ್ಲೂಕಿನ ಮಗ್ಗೆ ಮನೆ ಹಸಿರು ಪ್ಲಾಂಟೇಷನ್ನಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಬೃಹತ್ ಕೃಷಿ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ವಿದ್ಯೆ ಕಲಿತು ಕಾರ್ಪೊರೇಟರ್ ಸಂಸ್ಥೆಗಳಲ್ಲಿ ಅವಿರತ ದುಡಿಯುವ ಬದಲು ಕೃಷಿಯಲ್ಲೇ ವೃತ್ತಿ ಬದುಕು ಕಂಡುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಕೃಷಿ ಮತ್ತು ಹೈನುಗಾರಿಕೆ ಲಾಭದಾಯಕ ಉದ್ಯಮವಾಗಿದೆ. ಇದನ್ನು ಅರಿತು ಕೆಲವರು ಬೇಸಾಯಕ್ಕೆ ಮರಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸಮಗ್ರ ಕೃಷಿ ಪದ್ಧತಿಯೊಂದಿಗೆ ಹೈನುಗಾರಿಕೆಯಲ್ಲಿ ಉನ್ನತಿ ಸಾಧಿಸಿ ಉತ್ತಮ ಮಾರುಕಟ್ಟೆ ವ್ಯವಸ್ಥೆ ವಿಸ್ತರಿಸಿಕೊಳ್ಳಬೇಕು. ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅಳವಡಿಸಿಕೊಳ್ಳುವುದು ಸೂಕ್ತ ಎಂದರು.

ಮೂಡಿಗೆರೆ ಕಾಫಿ ಮಂಡಳಿ ಅಧ್ಯಕ್ಷ ಎಂ.ಜಿ.ದಿನೇಶ್ ಮಾತನಾಡಿ, ‘ಭಾರತೀಯ ಕಾಫಿ ಬೆಳೆಗಾರರು ಉತ್ತಮ ಬೆಳೆ ಬೆಳೆಯುತ್ತಿದ್ದರೂ ಹಂತ ಹಂತವಾಗಿ ಕಾಫಿ ಗುಣಮಟ್ಟ ಕಾಪಾಡಿ ಉತ್ಕೃಷ್ಟತೆ ಹೆಚ್ಚಿಸಿಕೊಳ್ಳಬೇಕು. ಹವಾಮಾನ ಆಧಾರಿತ ಬೆಳೆ ಹಾಗೂ ಕಾಫಿ ತೋಟಗಳ ನಿರ್ವಹಣೆ ಮುಖ್ಯ. ಇದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ವೃದ್ಧಿಸಿ ಲಾಭ ಸಿಗಲಿದೆ. ಕೃಷಿಯಲ್ಲಿ ಹೊಸತನ ಕಂಡುಕೊಳ್ಳಬೇಕು’ ಎಂದರು.

ಕಾಫಿ ಅಸೋಸಿಯೇಷನ್ ಸಂಘದ ಸುಹಾಸ್ ಮಾತನಾಡಿ, ‘ಕಾಫಿಯಲ್ಲಿ ವಿಶೇಷತೆ ಉಳಿಸಿಕೊಳ್ಳಬೇಕು. ಶೆಡ್ನಲ್ಲಿ ಇಲ್ಲವೇ ನೆಲದಿಂದ ಮೂರಡಿ ಎತ್ತರದಲ್ಲಿ ಕಾಫಿ ಹಣ್ಣು ಒಣಗಿಸಬೇಕು. ಪ್ರತಿ ಹಂತದಲ್ಲೂ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕಾದರೆ ಹಲವು ರೀತಿಯಲ್ಲಿ ಉಪ ಕ್ರಮಗಳನ್ನು ಅನುಸರಿಸಬೇಕು’ ಎಂದು ಸಲಹೆ ನೀಡಿದರು.

ಹೈನುಗಾರಿಕೆ ಉದ್ಯಮಿ ಶಿರಿನ್ ರಂಗಸ್ವಾಮಿ ಮಾತನಾಡಿ, ‘ಕೃಷಿ ಜತೆಗೆ ಹಸುಗಳ ಸಾಕಾಣಿಕೆ ಮಾಡಿ ರೈತರು ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕಾಗಿ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಂಡುಕೊಂಡರೆ ಹೈನುಗಾರಿಕೆಯಲ್ಲಿ ಯಶಸ್ಸು ಸಾಧಿಸಿಲು ಸಾಧ್ಯವಾಗಲಿದೆ’ ಎಂದರು.

ಭಾರತೀಯ ತೋಟಗಾರಿಕೆ ಇಲಾಖೆ ನಿವೃತ್ತ ವಿಜ್ಞಾನಿ ನಾರಾಯಣಸ್ವಾಮಿ ಮಾತನಾಡಿ, ‘ಸಣ್ಣ ರೈತರಿಗೂ ಕೂಡ ತಂತ್ರಜ್ಞಾನ ಸೌಲಭ್ಯ ತಲುಪಿಸಿದರೆ ಕಡಿಮೆ ಜಮೀನಿನಲ್ಲಿ ಲಾಭಾಂಶ ಮಾಡಿಕೊಳ್ಳಬಹುದು’ ಎಂದು ಹೇಳಿದರು.

ತಹಸೀಲ್ದಾರ್ ಕೆ.ಸಿ.ಸೌಮ್ಯ ಮಾತನಾಡಿ, ಆಧುನಿಕತೆಗೆ ತಕ್ಕಂತೆ ರೈತರು ಆರ್ಥಿಕವಾಗಿ ಉನ್ನತಿ ಸಾಧಿಸಬೇಕಾದರೆ ಇಂತಹ ಮೇಳಗಳಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಪ್ರೊ.ಮಾಯಣ್ಣ ಮಾತನಾಡಿ ದರು. ಕಾಫಿ ಮಂಡಳಿಯ ಅಶೋಕ್ ಕುಮಾರ್, ಕಿರಣ್, ವೇಣುಗೋಪಾಲ್, ಕೃಷಿಕ ಸಮಾಜದ ಗಂಗಾಧರ್, ಅಶ್ವಥ್ ಕುಮಾರೇಗೌಡ, ಮಲ್ಲೇಶ್, ಚಂದ್ರು, ಎಚ್.ಮಂಜುನಾಥ್ ಇದ್ದರು.

ಎಐ ಆಧಾರಿತ ಹಾಗೂ ವಿವಿಧ ಕೃಷಿ ಸಂಬಂಧಿತ ವಸ್ತು ಪ್ರದರ್ಶನ ಮಳಿಗೆಗಳು ಗಮನ ಸೆಳೆದವು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕೃಷಿಕರು ಜೀವಾಮೃತ, ಇಸ್ರೇಲ್ ಮಾದರಿ ಹೈನುಗಾರಿಕೆ, ಸಮಗ್ರ ಹಸಿರು ಕೃಷಿ ಪ್ಲಾಂಟೆಷನ್ ವೀಕ್ಷಿಸಿ ಮಾಹಿತಿ ಪಡೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-36-2064842497

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.