ಅರಕಲಗೂಡು: ರಂಗಕಲೆ ಉಳಿಸುವಲ್ಲಿ ಸಂಘ, ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ ಎಂದು ನಿವೃತ್ತ ಪಿಎಸ್ಐ ನಿಡಗೆರೆ ನಾಗರಾಜ್ ಹೇಳಿದರು.

ತಾಲ್ಲೂಕಿನ ಗರೀಘಟ್ಟ ಗ್ರಾಮದಲ್ಲಿ ಈಚೆಗೆ ಬಸವೇಶ್ವರ ಕಲಾ ಮತ್ತು ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಲೆ ಮತ್ತು ಸಂಸ್ಕೃತಿ ಕಾರ್ಯಕ್ರಮಗಳು ಇತ್ತೀಚಿಗೆ ಕಡಿಮೆಯಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದ ಜನಪದ, ನಾಟಕ, ಕೋಲಾಟ ಕ್ರಮೇಣ ನಶಿಸುತ್ತಿದೆ. ರಂಗಭೂಮಿ ಕಲೆಯೂ ಮರೆಯಾಗುತ್ತಿದೆ. ಯುವಕರು ಕಲೆಯನ್ನು ಉಳಿಸುವ ಸಲುವಾಗಿ ಕಲಾ ಸಂಘ ಸ್ಥಾಪಿಸಿರುವುದು ಉತ್ತಮ ಕೆಲಸ. ಸಂಘದ ಮೂಲಕ ಗ್ರಾಮದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದರು.

ರಂಗನಿರ್ದೇಶಕ ಜಿ. ಜಿ. ಕೇಶವ ಮಾತನಾಡಿ, ಗ್ರಾಮದ ಯುವಕರು ಪೌರಾಣಿಕ ನಾಟಕ ಪ್ರದರ್ಶಿಸಲು 18 ಜನರ ಸಂಘವನ್ನು ರಚಿಸಿಕೊಂಡಿದ್ದಾರೆ. ಗ್ರಾಮಸ್ಥರು ಸಹಕಾರ ನೀಡಿದಲ್ಲಿ ಸರ್ಕಾರದ ವಿವಿಧ ಯೋಜನೆಗಳಲ್ಲಿ ಅನುದಾನ ಪಡೆಯಬಹುದು, ವಿವಿಧ ಅಭಿವೃದ್ಧಿ ಕಾರ್ಯಕ್ರಮ, ಅರೋಗ್ಯತಪಾಸಣೆ ಶಿಬಿರ, ಅರಿವು ಕಾರ್ಯಕ್ರಮ, ರಕ್ತದಾನ ಶಿಬಿರ, ನಾಟಕೋತ್ಸವ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆ ನಡೆಸುವ ಉದ್ದೇಶದಿಂದ ಸಂಘ ಸ್ಥಾಪನೆಯಾಗಿದ್ದು ಸದಸ್ಯರು ಪಾಳ್ಳಲು ಮನವಿ ಮಾಡಿದರು.

ರಂಗನಿರ್ದೇಶಕ ರಮೇಶ್ ಭಾಗವತ್, ಕದಂಬಸೇನೆ ಅಧ್ಯಕ್ಷ ರಾಜುಬೇಕರಿ, ನಿವೃತ್ತ ಅಂಚೆ ನೌಕರ ಸಣ್ಣಸ್ವಾಮಿ ಗೌಡ ಮಾತನಾಡಿದರು. ಸಂಘದ ಅಧ್ಯಕ್ಷ ಜಿ. ಎಲ್ ಹೇಮಂತ್ ಅಧ್ಯಕ್ಷತೆ ವಹಿಸಿದ್ದರು. ವಕೀಲ ಜಿ. ಜಿ. ರವಿ, ಕಾರ್ಯದರ್ಶಿ ಜಿ. ಆರ್. ಚಂದ್ರ, ಉಪಾಧ್ಯಕ್ಷರಾದ ವೀರಭದ್ರ, ಅಶೋಕ, ಗೌರವ ಅಧ್ಯಕ್ಷ ರಾಜೇಗೌಡ, ದೊಡ್ಡಮ್ಮದೇವಿ ಕಲಾ ಸಂಘದ ಖಜಾಂಚಿ ಬಾಬುಪ್ರಸಾದ್, ಗ್ರಾಪಂ ಮಾಜಿ ಸದಸ್ಯ ಜಯಣ್ಣ ಉಪಸ್ಥಿತರಿದ್ದರು . ರಂಗಗೀತೆ ಗಾಯನ , ರಂಗದೃಶ್ಯಾವಳಿ ಏರ್ಪಡಿಸಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-51-57417361

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.