ಅರಕಲಗೂಡು: ಮನುಷ್ಯನ ಬದುಕಿಗೆ ಅತ್ಯಂತ ಅಗತ್ಯವಾದ ಬೆಂಕಿಯ ಬಗ್ಗೆ ನಿರ್ಲಕ್ಷ ವಹಿಸಿದರೆ ಮಾರಕವಾಗಿಯೂ ಪರಿಣಮಿಸುತ್ತದೆ ಎಂದು ಅಗ್ನಿಶಾಮಕ ಠಾಣೆ ಅಧಿಕಾರಿ ಎ. ವಿ. ಪರಮೇಶ್ವರ ಗೌಡ ತಿಳಿಸಿದರು.

ತಾಲ್ಲೂಕಿನ ಕತ್ತಿ ಮಲ್ಲೇನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಂಗಳವಾರ ಅಗ್ನಿ ಅವಘಡಗಳನ್ನು ತಡೆಗಟ್ಟುವ ಕುರಿತು ಪ್ರಾತ್ಯಕ್ಷಿತೆ ನೀಡಿ ಮಾತನಾಡಿದ ಅವರು, ಬೆಂಕಿಯ ಕುರಿತು ಹೆಚ್ಚಿನ ಎಚ್ಚರಿಕೆ ಮತ್ತು ಮುಂಜಾಗ್ರತೆ ಅಗತ್ಯ. ಬಿರು ಬೇಸಿಗೆಯ ದಿನಗಳಲ್ಲಿ ಇನ್ನಷ್ಟು ಜಾಗೃತಿ ಅಗತ್ಯ. ವ್ಯಕ್ತಿಯೊಬ್ಬ ಸೇದಿ ನಿರ್ಲಕ್ಷ್ಯದಿಂದ ಬಿಸಾಡಿದ ಬೀಡಿಯ ತುಂಡು ಹುಲ್ಲು ಮೆದೆಗೆ ಪಸರಿಸಿ ಕುಟುಂಬದ ಅನ್ನ, ಜಾನುವಾರುಗಳ ಮೇವು, ಬದುಕಿಗೆ ಆಸರೆಯಾದ ಮನೆ ಸೇರಿ ಜೀವವನ್ನು ಕ್ಷಣದಲ್ಲಿ ನಾಶಮಾಡಬಲ್ಲದು ಎಂದು ಎಚ್ಚರಿಸಿದರು.

ಕಾಲೇಜಿನ ಪ್ರಾಂಶುಪಾಲ ಎ. ಎಲ್ ಮಂಜುನಾಥ್, ಶಿಬಿರಾಧಿಕಾರಿ ಪ್ರಸನ್ನ, ಸಹ ಶಿಬಿರಾಧಿಕಾರಿಗಳಾದ ಎಸ್.ಅಶ್ವಿನಿ, ಆರ್.ಪಿ. ಸಂದೀಪ್, ಎಂ.ಎಸ್.ಧಶರಥ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-36-315148751

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.