ಅರಕಲಗೂಡು: ಎರಡು ದಶಕಗಳ ಕಾಲ ದೇಶ ಸೇವೆ ಸಲ್ಲಿಸಿ, ನಿವೃತ್ತರಾದ ಯೋಧ ಮಂಜುನಾಥ ಅವರಿಗೆ ತಾಲ್ಲೂಕಿನ ನೆಹರೂ ನಗರದಲ್ಲಿ ಭವ್ಯ ಸ್ವಾಗತ ಕೋರಲಾಯಿತು.

22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಮಂಜುನಾಥ, ಸೇವಾ ನಿವೃತ್ತಿ ನಂತರ ಹುಟ್ಟೂರಿಗೆ ಬಂದ ಸಂದರ್ಭದಲ್ಲಿ ಗ್ರಾಮಸ್ಥರು ಹೂಮಳೆ ಸುರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ‘ಜೈ ಜವಾನ್ ಜೈ ಕಿಸಾನ್’ ಘೋಷಣೆ ಕೂಗಿ ಯೋಧನ ಸೇವೆಯನ್ನು ಕೊಂಡಾಡಿದರು.

ಸೇನಾ ಸಮವಸ್ತ್ರದಲ್ಲೇ ಬಂದ ಮಂಜುನಾಥ ಅವರು, ಪಟ್ಟಣದ ಅನಕೃ ವೃತ್ತದಲ್ಲಿರುವ ಪ್ರತಿಮೆಗೆ ಕುಟುಂಬ ಸಮೇತರಾಗಿ ಮಾಲಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಮಂಜುನಾಥ, ‘2004ರ ಮಾರ್ಚ್ 17ರಂದು ಸೇನೆಗೆ ಸೇರಿದ್ದು, ಸಿಕಂದರಾಬಾದ್ನಲ್ಲಿ ತರಬೇತಿ ಪಡೆದ ಬಳಿಕ ಉತ್ತರಾಖಂಡದ 614 ಇಎಂಇ ಬೆಟಾಲಿಯನ್ನಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ್ದಾಗಿ ತಿಳಿಸಿದರು.

ನಂತರ ಜಮ್ಮು-ಕಾಶ್ಮೀರದ ಫೈವ್ ಆರ್.ಆರ್. ಬೆಟಾಲಿಯನ್ನಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ್ದು, ಪಂಜಾಬ್ನ 7010 ಎಂ. ಬೆಟಾಲಿಯನ್, ಪಶ್ಚಿಮ ಬಂಗಾಳದ 7033 ಇಎಂಇ ಬೆಟಾಲಿಯನ್ ಸೇರಿದಂತೆ ಉತ್ತರ ಪ್ರದೇಶ, ಬೆಂಗಳೂರು ಮತ್ತು ಅಸ್ಸಾಂ ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾಗಿ ವಿವರಿಸಿದರು.

‘ಸೇನೆಯಲ್ಲಿ ಸೇವೆ ಸಲ್ಲಿಸಿ ತವರಿಗೆ ಮರಳುವುದು ಮರುಹುಟ್ಟಿನ ಅನುಭವದಂತಿದೆ ಎಂದರು.

ಬಿಎಸ್ಪಿ ರಾಜ್ಯ ಮುಖಂಡ ಅತ್ನಿ ಹರೀಶ್ ಮಾತನಾಡಿ, ‘ಮಂಜುನಾಥ ಅವರ ಜೀವನ ಎಲ್ಲರಿಗೂ ಸ್ಫೂರ್ತಿಯಾಗಿದೆ’ ಎಂದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ತಾಲ್ಲೂಕು ಕಚೇರಿ ಆವರಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಮೆರವಣಿಗೆಯಲ್ಲಿ ಯೋಧನ ತಾಯಿ, ಪತ್ನಿ, ಪುತ್ರಿ ಸೇರಿದಂತೆ ಅಪಾರ ಸಂಖ್ಯೆಯ ಬಂಧುಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-36-1640141098

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.