ಅರಸೀಕೆರೆ: ಸಾತ್ವಿಕ ದೈವಭಕ್ತಿ ಹಾಗೂ ತಮ್ಮ ಅವಿರತಶ್ರಮದಿಂದ ಧ್ಯಾನ ಮಾಡಿ ಭೂಮಿಗೆ ಗಂಗೆಯನ್ನು ತರಿಸಿದ ಮಹರ್ಷಿ ಭಗೀರಥ ಮಹರ್ಷಿ ಒಂದು ಜಾತಿ ವರ್ಗಕ್ಕೆ ಸೀಮಿತವಾದ ವ್ಯಕ್ತಿಯಾಗದೇ ಇಡೀ ಭರತ ಭೂಮಿಗೆ ನೀರು ಹರಿಸಿದ ಮಹಾಪುರುಷಯಾಗಿದ್ದಾರೆ ಎಂದು ತಹಶೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಹೇಳಿದರು.

ತಾಲ್ಲೂಕು ಆಡಳಿತ ,ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಸಮಾಜದ ವತಿಯಿಂದ ಭಗೀರಥ ಸಮುದಾಯ ಭವನದಲ್ಲಿ ಭಾನುವಾರ ನಡೆದ ಭಗೀರಥ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೂರು ಲೋಕಗಳಲ್ಲಿ ಭಗೀರಥರು ಕೇವಲ ಭೂಮಿಗೆ ಮಾತ್ರವಲ್ಲದೆ ಪಾತಾಳ, ಭೂಮಿ ಮತ್ತು ಆಕಾಶ ಎಂಬ ಮೂರು ಲೋಕಗಳಲ್ಲಿ ಗಂಗೆ ನೆಲೆಸುವಂತೆ ಮಾಡಿದರು. ಈ ಮೂಲಕ ಸಕಲ ಜೀವರಾಶಿಗಳಿಗೂ ಅನೂಕೂಲ ಮಾಡಿಕೊಟ್ಟರು. ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದಾದರೆ ಅಸಾಧ್ಯವಾದುದನ್ನು ಸಾಧ್ಯವಾಗಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂಬ ಪಾಠವನ್ನು ಭಗೀರಥರ ಜೀವನದಿಂದ ಕಲಿಯಬೇಕಾಗಿದೆ ಎಂದರು.

ಹೇಮಗಂಗೋತ್ರಿ ಕುಲಸಚಿವ ನಾಗರಾಜು ಮಾತನಾಡಿ, ಭಗೀರಥ ಮಹರ್ಷಿ ಬಹುದೊಡ್ಡ ಮಹಾರಾಜ. ಸಕಲ ವೈಭವಗಳಿದ್ದರೂ ಆತನ ತಂದೆ ಹಾಗೂ ಹಿರಿಯರ ಮಹದಾಸೆಯಂತೆ ವೈಭೋಗ ತೊರೆದು ಪ್ರತಿಜ್ಞೆಯೊಂದಿಗೆ ಕಠಿಣ ತಪ್ಪಸ್ಸು ಮಾಡಿ ನೀರು ತರಿಸಿದ ಸಕಲ ಜೀವಿಗಳ ದಾಹ ತಣಿಸಿದ ಮಹಾತ್ಮ . ಇವರ ಸಮುದಾಯದವರೂ ಸಂಘಟಿತರಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸಮುದಾಯದ ಮಕ್ಕಳು ವಿದ್ಯಾವಂತರಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

ಉಪ್ಪಾರ ಸಮಾಜದ ತಾಲ್ಲೂಕು ಅಧ್ಯಕ್ಷ ಕಾಟೀಕೆರೆ ಕುಮಾರ್ ಮಾತನಾಡಿ, ಸಮಾಜದಲ್ಲಿ ಇಂದಿಗೂ ಕಠಿಣ ಪರಿಶ್ರಮಕ್ಕೆ ಭಗೀರಥ ಯತ್ನ ಎಂದೇ ಉದಾಹರಣೆ ನೀಡಲಾಗುತ್ತದೆ. ಅಂತಹ ಮಹಾಪುರುಷರ ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಮುನ್ನಡೆಯೋಣ ಅದರಂತೆ ಮಕ್ಕಳು ಸತತ ಅಭ್ಯಾಸ ಪರಿಶ್ರಮದಿಂದ ಓದಿ ಸಮಾಜಕ್ಕೆ ಉತ್ತಮ ಹೆಸರು ಕೊಡಬೇಕು ಎಂದು ಹೇಳಿದರು.

ಮಾಜಿ ಮೇಯರ್ ಚಂದ್ರೇಗೌಡ, ಜಿಲ್ಲಾ ಉಪ್ಪಾರ ಸಂಘದ ನೀಲಪ್ಪ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಮಾತನಾಡಿದರು.

ಎಸ್ಎಸ್ಎಲ್ಸಿ ಹಾಗೂ ದ್ವೀತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮುಖಂಡರಾದ ಲಕ್ಷ್ಮೀಶ್ ಬಾಬು, ಬಾಬುರಾವ್ , ರಂಗಸ್ವಾಮಿ , ನಿರಂಜನ್, ಪುನೀತ್, ಚನ್ನಬಸಪ್ಪ, ಶಿವಣ್ಣ, ರಂಗಪ್ಪ, ನಾಗಪ್ಪ , ಸುರೇಶ್, ರೇಣುಕ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-36-715491066

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.