ಅರಸೀಕೆರೆ: ನಗರದ ಗ್ರಾಮ ದೇವತೆಗಳಾದ ಕರಿಯಮ್ಮ ಹಾಗೂ ಮಲ್ಲಿಗೆಮ್ಮ ದೇವಿಯರ 57ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ದೊರೆತಿದೆ.

ಮೊದಲ ದಿನವಾದ ಸೋಮವಾರ ಮುಂಜಾನೆ ಊರ ಒಳಗಿನ ಮಲ್ಲಿಗೆಮ್ಮ ದೇವಸ್ಥಾನದಲ್ಲಿ ಅಮ್ಮನವರ ಮೂಲ ವಿಗ್ರಹಕ್ಕೆ ರುದ್ರಾಭಿಷೇಕ ಸೇರಿದಂತೆ ನಾನಾ ಅಭಿಷೇಕಗಳು, ಬಿಲ್ವಾರ್ಚನೆ ಒಳಗೊಂಡಂತೆ ವಿವಿಧ ಅರ್ಚನೆಗಳು ನಡೆದವು. ಮಹಾ ಮಂಗಳಾರತಿ ಬಳಿಕ ಪಾಯಸ, ಹೋಳಿಗೆ ಸೇರಿದಂತೆ ಮಲ್ಲಿಗೆಮ್ಮ ದೇವಿಗೆ ಪ್ರಿಯವಾದ ಸಿಹಿ ಪ್ರಸಾದಗಳನ್ನು ಶ್ರದ್ಧೆ ಭಕ್ತಿಯಿಂದ ಮಾಡಿಕೊಂಡು ಬಂದಿದ್ದ ಭಕ್ತರು ನೈವೇದ್ಯ ಮಾಡಿ, ನಂತರ ನೆರೆದಿದ್ದ ಭಕ್ತರಿಗೆ ವಿತರಿಸಿದರು.

ಉತ್ಸವ ಬಾನ ನೈವೇದ್ಯ: ಮಂಗಳವಾರ ಸಂಜೆ ಊರ ಒಳಗಿನ ಮಲ್ಲಿಗೆಮ್ಮ ದೇವಸ್ಥಾನದಿಂದ ಮೂಲಸ್ಥಾನದಲ್ಲಿ ನೆಲೆಸಿರುವ ಕೆಂಚರಾಯ, ದೂತರಾಯ ಹಾಗೂ ಚೆಲುವರಾಯಸ್ವಾಮಿ ಸಮೇತ ಮಲಿಗೆಮ್ಮ ಮತ್ತು ಕರಿಯಮ್ಮ ದೇವಿಯರ ಉತ್ಸವ ಜರುಗಲಿದೆ. ಉತ್ಸವ ಸಾಗುವ ಮಾರ್ಗ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಈಗಾಗಲೇ ವಿದ್ಯುತ್ ದೀಪಗಳ ಅಲಂಕಾರದಿಂದ ಝಗಮಗಿಸುತ್ತಿವೆ.

ಉತ್ಸವವು ರಾತ್ರಿ ಕರಿಯಮ್ಮ ದೇವಿಯ ಆಲಯ ತಲುಪುತ್ತಿದ್ದಂತೆಯೇ ಕರಿಯಮ್ಮ ದೇವಿ, ಕೆಂಚರಾಯಸ್ವಾಮಿ ಮತ್ತು ದೂತರಾಯ ಸ್ವಾಮಿ ಸೇರಿದಂತೆ ಪರಿವಾರ ದೇವತೆಗಳ ಉತ್ಸವ ನಡೆಯಲಿದೆ. ನಗರದ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಭಾಗವಹಿಸಲಿದ್ದು, ದೇವಾಲಯದ ಅಭಿವೃದ್ಧಿ ಸಮಿತಿ ಹಾಗೂ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಲಾಗಿದೆ.

ಮೇ 13ರಂದು ಗಂಗಸ್ನಾನ, ಮೇ 14 ರಂದು ಮಧ್ಯಾಹ್ನ ಗ್ರಾಮ ದೇವತೆಯರ ಮಹಾ ರಥೋತ್ಸವವು ಭಕ್ತರ ಶ್ರದ್ಧಾ ಭಕ್ತಿಯೊಂದಿಗೆ ವಿಜೃಂಭಣೆಯಿಂದ ನಡೆಸಲು ಸಮಿತಿ ಹಾಗೂ ಭಕ್ತವೃಂದ ಸನ್ನದ್ದವಾಗಿದೆ. ಮಹಾ ರಥೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಮಹೋತ್ಸವ ಆಚರಣೆ ಸಮಿತಿ ತಿಳಿಸಿದೆ.

ಸೋಮವಾರ ರಾತ್ರಿ ಕರಿಯಮ್ಮ ಮತ್ತು ಮಲ್ಲಿಗೆಮ್ಮ ಹಾಗೂ ಮೂರು ಕಳಸ ಮಠದ ಸಿದ್ದರಾಮೇಶ್ವರ ಸ್ವಾಮಿ ಸಮ್ಮುಖದಲ್ಲಿ ಕೆಂಗಲ್ ಸಿದ್ದೇಶ್ವರ ಸ್ವಾಮಿಗೆ 101 ಎಡೆ ಸೇವೆ ಸಲ್ಲಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-36-215187050

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.