ಅರಸೀಕೆರೆ: ತಾಲ್ಲೂಕಿನ ಭೈರಾಂಬುದಿ ಗ್ರಾಮದ ಹೊಂಗ್ಯಮ್ಮ ದೇವಿಯವರ ರಥೋತ್ಸವವು ಶುಕ್ರವಾರ ಮುಂಜಾನೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಸುತ್ತಲಿನ 12 ಹಳ್ಳಿಗಳ ದೇವತೆ ಹಾಗೂ ಅಪಾರ ಭಕ್ತ ಸಮೂಹ ಹೊಂದಿರುವ ಹೊಂಗ್ಯಮ್ಮ ದೇವಿ ರಥೋತ್ಸವದ ಅಂಗವಾಗಿ, ಮೂಲಸ್ಥಾನ ಅಮ್ಮನವರಿಗೆ ಬಗೆ ಬಗೆಯ ಹೂಗಳಿಂದ ಅಲಂಕಾರ, ಮಲ್ಲಿಗಮ್ಮ ದೇವಿ, ಚೆಲುವರಾಯ ಸ್ವಾಮಿ, ದೂತರಾಯ ಸ್ವಾಮಿಗೆ ಮಾಡಿದ್ದ ಹೂವಿನ ಅಲಂಕಾರ ಗಮನ ಸೆಳೆಯಿತು.

ಅಲಂಕೃತ ರಥದಲ್ಲಿ ಮಂಗಳವಾದ್ಯದೊಂದಿಗೆ ಹೊಂಗ್ಯಮ್ಮ ದೇವಿ ಹಾಗೂ ಮಲ್ಲಿಗಮ್ಮ ದೇವಿಯವರನ್ನು ಆರೋಹಣ ಮಾಡಲಾಯಿತು. ಚೆಲುವರಾಯ ಸ್ವಾಮಿ ಹಾಗೂ ದೂತರಾಯ ಸ್ವಾಮಿ ರಥಕ್ಕೆ ಪೂಜೆ ಸಲ್ಲಿಸಿ ರಥದ ಗಾಲಿಗಳಿಗೆ ತೆಂಗಿನಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ನಂತರ ಸಹಸ್ರಾರು ಭಕ್ತರು ದೇವಿ ನಾಮಸ್ಮರಣೆಯೊಂದಿಗೆ ತೇರಿಗೆ ಬಾಳೆಹಣ್ಣು ಧವನ ಎಸೆದು, ತೇರನ್ನು ಎಳೆದು ಸಂಭ್ರಮಿಸಿದರು.

ಇದಕ್ಕೂ ಮುನ್ನ ಗುರುವಾರ ಬೆಳಿಗ್ಗೆ ಪುಣ್ಯಾರ್ಚನೆ, ಶಾಂತಿ ಹೋಮ ಹಾಗೂ ವೈಷ್ಣವ ಭಕ್ತಾದಿಗಳಿಂದ ಬ್ರಹ್ಮ ರಥೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ರಾತ್ರಿ ಮಲ್ಲಿಗೆಮ್ಮ ಕೆಂಡದ ಸೇವೆ ಹಾಗೂ ಸಿಡಿ ನೆರವೇರಿತು.

ರಾತ್ರಿಯಿಡೀ ನಡೆದ ಹಾಲುಸಿದ್ದೇಶ್ವರ ಸ್ವಾಮಿ, ಕುಂಭಳೇಶ್ವರ ಸ್ವಾಮಿ, ಮಲ್ಲಿಗೆಮ್ಮ ದೇವಿಯರ ಅಡ್ಡಪಲ್ಲಕ್ಕಿ ಉತ್ಸವ, ಚೆಲುವರಾಯ ಸ್ವಾಮಿ ಮುತ್ತಿನ ಪಲ್ಲಕ್ಕಿ ಉತ್ಸವ, ಹೊಂಗ್ಯಮ್ಮ ದೇವಿ, ದೂತರಾಯ ಸ್ವಾಮಿಯ ವಿವಿಧ ಬಗೆಯ ಉತ್ಸವಗಳು, ಅರೆ ವಾದ್ಯ ಸದ್ದು, ಕೊಂಬು ಕಹಳೆಯೊಂದಿಗೆ ವೈಭವದಿಂದ ನಡೆದವು. ಸಿಡಿಮದ್ದುಗಳ ಪ್ರದರ್ಶನವೂ ಆಕರ್ಷಕವಾಗಿತ್ತು.

ರಥೋತ್ಸವದಲ್ಲಿ ಚೆಲುವರಾಯ ಸ್ವಾಮಿ ಹಾಗೂ ದೂತರಾಯ ಸ್ವಾಮಿಯ ನೂತನ ಬಣ್ಣ, ಬಂಗಾರದ ವಡವೆಗಳು, ವಿಶೇಷ ಪುಷ್ಪಾಲಂಕಾರ ಹಾಗೂ ಕುಣಿತವು ಭಕ್ತರ ಕಣ್ಮನ ಸೆಳೆದವು. ದೇವಾಲಯ ಹಾಗೂ ಜಾತ್ರಾ ಮೈದಾನಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ಭೈರಾಂಬುದಿ ಗ್ರಾಮಸ್ಥರು ಸೇರಿದಂತೆ ಬೆಂಡೇಕೆರೆ, ಹಿರಿಯೂರು, ಸಂಕೋಡನಹಳ್ಳಿ, ಬಿಸಲೇಹಳ್ಳಿ, ಹಳೇಕಲ್ಲನಾಯ್ಕನಹಳ್ಳಿ, ಕಸ್ತೂರಿ ಕೊಪ್ಪಲು, ಚಿಕ್ಕೂರು, ಬೆಟ್ಟದಪುರ, ಕಾನ್ನಿಹಳ್ಳಿ, ಲಾಯಲಾಪುರ, ಹೊಸಕಲ್ಲನಾಯ್ಕನಹಳ್ಳಿ, ಮೂಡನಹಳ್ಳಿ, ರಟ್ಟೆನಹಳ್ಳಿ, ಹರಿಹರಪುರ ಹಾಗೂ ಸುತ್ತಲಿನ ಗ್ರಾಮಸ್ಥರು ಹಾಗೂ ಅಪಾರ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-36-721886076

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.