ಅರಸೀಕೆರೆ: ದಶಕಗಳಿಂದ ಸ್ವಂತ ಸೂರು ಹೊಂದಿಸಿಕೊಳ್ಳಬೇಕೆಂಬ ಕನಸು ಕಾಣುತ್ತಿದ್ದ ನಿರಾಶ್ರಿತರು ಹಾಗೂ ಬಡವರ ಕನಸು ಸಾಕಾರಗೊಂಡಿದೆ.

ಸೋಮವಾರ ನಗರ ವ್ಯಾಪ್ತಿಯ ವಸತಿರಹಿತ ಫಲಾನುಭವಿಗಳಿಗೆ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ನೂತನ ಮನೆಗಳ ಕೀ ವಿತರಿಸುವ ಮೂಲಕ ಶುಭ ಹಾರೈಸಿದರು.

‘ಹೌಸಿಂಗ್ ಫಾರ್ ಆಲ್’ ಯೋಜನೆಯಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜೊತೆಗೆ ಫಲಾನುಭವಿಯಿಂದ ₹1 ಲಕ್ಷ ಸ್ವೀಕರಿಸಿ, ನಗರದ ಸುಬ್ರಹ್ಮಣ್ಯ ಬೆಟ್ಟದ ತಪ್ಪಲಿನಲ್ಲಿ 1,181 ಮನೆಗಳನ್ನು ನಿರ್ಮಿಸುತ್ತಿದ್ದು, ಈ ಪೈಕಿ ಮೊದಲ ಹಂತದಲ್ಲಿ ಕಾಮಗಾರಿ ಪೂರ್ಣಗೊಂಡಿರುವ 350 ಮನೆಗಳಲ್ಲಿ, 231 ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆಗಳನ್ನು ಶಾಸಕರು ಹಂಚಿಕೆ ಮಾಡಿದರು.

ನಂತರ ಅವರು ಮಾತನಾಡಿ, ‘ನಗರಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಕೆಲವು ಕುಟುಂಬಗಳು ನಗರದಲ್ಲಿ ಮನೆ ನಿರ್ಮಿಸಿಕೊಳ್ಳಬೇಕೆಂಬ ಕನಸು ನನಸಾಗದೇ ದಿನ ದೂಡುತ್ತಾ ಬಂದಿದ್ದರು. ಇಂತಹ ನಿರಾಶ್ರಿತರಿಗೆ ಸ್ವಂತ ಸೂರು ಕಲ್ಪಿಸಿಕೊಡಬೇಕೆಂಬ ಮಹದಾಸೆಯಿಂದ ನಾನು ಹೌಸಿಂಗ್ ಫಾರ್ ಆಲ್ ಯೋಜನೆಯನ್ನು ಕ್ಷೇತ್ರಕ್ಕೆ ಮಂಜೂರು ಮಾಡಿಸಿಕೊಂಡು ಬಂದಿದ್ದು, ಸುಬ್ರಹ್ಮಣ್ಯ ಬೆಟ್ಟದ ತಪ್ಪಲಿನ ಜಾಗ ನಿಗದಿ ಪಡಿಸಲಾಯಿತು’ ಎಂದರು.

ರಾಜ್ಯ ಸರ್ಕಾರದಿಂದ ₹2.50 ಲಕ್ಷ, ಕೇಂದ್ರದಿಂದ ₹1.50 ಲಕ್ಷ ಹಾಗೂ ಫಲಾನುಭವಿಯಿಂದ ₹1 ಲಕ್ಷ ಪಡೆದು ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡಲಾಗಿದೆ ಎಂದರು..

ಫಲಾನುಭವಿಗಳೇ ತಮ್ಮ ಮನೆಗಳನ್ನು ತಾವೇ ಲಾಟರಿ ಮೂಲಕ ಆಯ್ದುಕೊಂಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ಮಾಜಿ ಸದಸ್ಯರಾದ ಜಿ.ಟಿ. ಗಣೇಶ್, ದರ್ಶನ್, ಯುವರಾಜ್, ಮೇಲುಗಿರಿಗೌಡ, ಆಶ್ರಯ ಸಮಿತಿ ಸದಸ್ಯರಾದ ಶ್ರೀನಿವಾಸ್, ಮಹಮದ್ ಪಾಷ, ಅಣ್ಣಾದೊರೆ ಮೊದಲಾದವರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-36-870671427

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.