ಅರಸೀಕೆರೆ: ತಾಲ್ಲೂಕಿನ ಯಾದಾಪುರದ ಬೆಟ್ಟದ ಮೇಲೆ ನೆಲೆಸಿರುವ ನಾಡಿನ ಲಕ್ಷಾಂತರ ಭಕ್ತರ ಆರಾಧ್ಯ ದೈವ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ಮಹಾ ರಥೋತ್ಸವವು ಶ್ರದ್ಧಾಭಕ್ತಿ ಹಾಗೂ ಹರ್ಷೋದ್ಗಾರದೊಂದಿಗೆ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ಬಸವನ ಉತ್ಸವ, ಪಲ್ಲಕ್ಕಿ ಉತ್ಸವ, ಬಿಲ್ವಪತ್ರೆ ಉತ್ಸವ ಹೀಗೆ ನಾನಾ ಉತ್ಸವಗಳು ದೇವಾಲಯದ ಸಂಪ್ರದಾಯದಂತೆ ಗುರುವಾರ ರಾತ್ರಿಯಿಡೀ ನಡೆದವು. ಶುಕ್ರವಾರ ಬಾನಂಗಳದಲ್ಲಿ ಸೂರ್ಯ ಉದಯಿಸುತ್ತಿದ್ದಂತೆಯೇ, ಶೃಂಗರಿಸಿದ್ದ ರಥ ಮಂಟಪದಲ್ಲಿ ಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಹಾಮಂಗಳಾರತಿ ಬೆಳಗಲಾಯಿತು. ಶುಭ ಗಳಿಗೆಗಾಗಿ ಕಾಯುತ್ತಿದ್ದ ಭಕ್ತರ ದಂಡು, ಸಿದ್ದೇಶ್ವರ ಸ್ವಾಮಿಯ ನಾಮ ಸ್ಮರಣೆ ಮಾಡುತ್ತ ರಥವನ್ನು ಎಳೆದು ಪುನೀತರಾದರು.

ಜಾತ್ರಾ ಮಹೋತ್ಸವದ ಅಂಗವಾಗಿ ಬೆಟ್ಟದ ಮೇಲೆ ಇರುವ ಸಿದ್ದೇಶ್ವರ ಸ್ವಾಮಿಯ ಪಾದಗಳಿಗೆ ನಾನಾ ರೀತಿಯ ಅಭಿಷೇಕ, ಅರ್ಚನೆಗಳು ನಡೆದವು. ವೇದಘೋಷಗಳೊಂದಿಗೆ ದೇವಾಲಯದ ಅರ್ಚಕರ ವೃಂದ ಪೂಜೆ ನೆರವೇರಿಸಿದರು. ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ಮಾಡಿದ್ದ ವಿಶೇಷ ಅಲಂಕಾರ ಕಣ್ಮನ ಸೆಳೆದವು.

ತಾಲ್ಲೂಕು, ಜಿಲ್ಲೆಯಿಂದ ಮಾತ್ರವಲ್ಲದೇ ನಾಡಿನ ನಾನಾ ಭಾಗಗಳಿಂದ ಬಂದಿದ್ದ ಲಕ್ಷಾಂತರ ಭಕ್ತರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವನ್ನು ಕಣ್ತುಂಬಿಕೊಂಡರು. ಭಕ್ತಿ ಭಾವದೊಂದಿಗೆ ಸಿದ್ದೇಶ್ವರ ಸ್ವಾಮಿಯ ನಾಮಸ್ಮರಣೆಯಲ್ಲಿ ಭಕ್ತರು ಮೈಮರೆತಿದ್ದರು.

ಜಾತ್ರಾ ಮಹೋತ್ಸವದಲ್ಲಿ ಮಂಗಳವಾದ್ಯ, ವೀರಗಾಸೆ, ವೀರಭದ್ರ ಕುಣಿತ, ನಂದಿ ಧ್ವಜ ಕುಣಿತ ಹೀಗೆ ಜಾನಪದ ಕಲಾತಂಡಗಳ ಕಲಾವಿದರು ಪ್ರದರ್ಶಿಸಿದ ಕಲಾ ಪ್ರದರ್ಶನ ಜಾತ್ರೆಯ ರಂಗನ್ನು ಮತ್ತಷ್ಟು ಹೆಚ್ಚಿಸಿತು.

ಲಕ್ಷಾಂತರ ಭಕ್ತರು ಸೇರುವ ಜಾತ್ರಾ ಮಹೋತ್ಸವದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಗರದಿಂದ 6 ಕಿ.ಮೀ. ದೂರದ ಯಾದಾಪುರ ಕ್ಷೇತ್ರಕ್ಕೆ ಹೋಗಿ ಬರಲು ಭಕ್ತರಿಗೆ ರಾಜ್ಯ ಸಾರಿಗೆ ಸಂಸ್ಥೆ ನಿರಂತರವಾಗಿ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟಿತ್ತು.

ಮನದ ಇಷ್ಟಾರ್ಥ ಈಡೇರಿಸುವಂತೆ ಹರಕೆ ಮಾಡಿಕೊಳ್ಳುವ ಭಕ್ತರು, ರಥೋತ್ಸವದಲ್ಲಿ ಪಾಲ್ಗೊಂಡು ಗುಗ್ಗಳ ತಲೆ ಮೇಲೆ ಹೊತ್ತರೆ, ಮತ್ತೆ ಕೆಲವು ಭಕ್ತರು ಕೆಂಡ ಹಾಯುವ ಮೂಲಕ ಹರಕೆ ತೀರಿಸಿದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-36-1675145650

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.