ಅರಸೀಕೆರೆ: ನಗರಸಭೆಯ 31ನೇ ವಾರ್ಡ್ ಮಾರುತಿನಗರದ ನಗರಸಭೆ ಮಾಜಿ ಸದಸ್ಯರಾದ ಸುಜಾತ ರಮೇಶ್ ಮತ್ತು ಸ್ನೇಹಿತರ ಬಳಗದ ವತಿಯಿಂದ ಸುಮಾರು ₹5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶೀಟ್ ಮನೆಯನ್ನು ಬಡ ಕುಟುಂಬದ ತನುಜಾ ಶಶಿಧರ್ ಎಂಬುವರಿಗೆ ಹಸ್ತಾಂತರಿಸಲಾಯಿತು.

ದಾನಿಗಳಾದ ಆರ್.ಅನಂತ ಇಂಟರ್ನ್ಯಾಷನಲ್ ಶಾಲೆಯ ಸಂಸ್ಥಾಪಕ ಹಾಗೂ ಒಕ್ಕಲಿಗ ಸಂಘದ ಅಧ್ಯಕ್ಷ ಆರ್.ಅನಂತ್ ಕುಮಾರ್ ಅವರ 70ನೇ ಜನ್ಮದಿನದ ಅಂಗವಾಗಿ ಉಚಿತ ಮನೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಸುಜಾತ ರಮೇಶ್ ಮಾತನಾಡಿ, ಅನಂತ್ ಕುಮಾರ್ ಅವರು ಸತತ 4 ವರ್ಷಗಳಿಂದ ಬಡ ಕುಟುಂಬದವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ನಮ್ಮ ಸುಜಾತ ರಮೇಶ್ ಗೆಳೆಯರ ಬಳಗದ ವತಿಯಿಂದ ನೀಡುವ ಮನೆಗೆ ಅತಿ ಹೆಚ್ಚಿನ ಸಹಾಯ ನೀಡುವ ಮೂಲಕ ನಮ್ಮ ಕೈ ಬಲಪಡಿಸಿದ್ದಾರೆ. ಇದರಿಂದ ಸಹಾಯ ಪಡೆದ ಕುಟುಂಬಗಳು ಸ್ವಂತ ಸೂರಿನಲ್ಲಿ ನೆಮ್ಮದಿಯಿಂದ ಬದುಕುತ್ತಿವೆ ಎಂದರು.

ಆದರ್ಶ ಲ್ಯಾಬ್ನಾ ಮುಖ್ಯಸ್ಥರಾದ ಜಗನ್ನಾಥ ರೈ ಮಾತನಾಡಿ, ಸಮಾಜಕ್ಕೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅನಂತ ಕುಮಾರ್ ಅವರ ಕೊಡುಗೆ ಅಪಾರವಾಗಿದೆ. ಸಾವಿರಾರು ವಿದ್ಯಾರ್ಥಿಗಳು ಹಾಗೂ ಹಲವಾರು ವ್ಯಕ್ತಿಗಳು ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದಾರೆ ಎಂದರು.

ಅನಂತ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅನಂತ್ ಕುಮಾರ್ ಮಾತನಾಡಿ, ಹುಟ್ಟಿದ ಮನುಷ್ಯರು ಹೇಗಿದ್ದರೂ ಬದುಕುತ್ತಾರೆ ಆದರೆ ಅವರ ಜತೆಗೆ ಸುತ್ತಮುತ್ತಲಿನ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅಂತಹ ಸಹಾಯರ್ಥ ಪ್ರೌವೃತಿಯನ್ನು ರೂಢಿಸಿಕೊಂಡಿರುವ ಸುಜಾತ ರಮೇಶ್ ಅವರ ಸಾಮಾಜಿಕ , ಶೈಕ್ಷಣಿಕ ಹಾಗೂ ಆರ್ಥಿಕ ಸಹಾಯಗಳು ನೂರಾರು ಕುಟುಂಬಗಳಿಗೆ ವರದಾನವಾಗಿದೆ ಎಂದರು. ನಗರ ಸಭೆ ಮಾಜಿ ಸದಸ್ಯರಾದ ಸುಜಾತ, ಮುಖಂಡರಾದ ಸಂತೋಷ, ನಯಾಜ್ ಅಹಮ್ಮದ್, ರಿಜ್ವಾನ್, ಕರವೇ ಅಧ್ಯಕ್ಷ ಕಿರಣ್ ಕುಮಾರ್, ತುಳಸಿ ದಾಸ್ ಮತ್ತಿತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-36-2083668132

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.