ಅರಸೀಕೆರೆ: ತಾಲ್ಲೂಕಿನಲ್ಲಿ ಶನಿವಾರ ಮಧ್ಯರಾತ್ರಿ ಗಾಳಿ ಸಹಿತ ಸುರಿದ ಮಳೆಯಿಂದಾಗಿ ವಿವಿಧೆಡೆ ತೆಂಗು, ಅಡಿಕೆ ಹಾಗೂ ಬಾಳೆ ಬೆಳೆ ನೆಲ ಕಚ್ಚಿದೆ.

ತಾಲ್ಲೂಕಿನ ಕಸಬಾ ಹೋಬಳಿ, ಜಾವಗಲ್, ಬಾಣಾವಾರ , ಕಣಕಟ್ಟೆ, ಗಂಡಸಿಯಲ್ಲಿ ಉತ್ತಮ ಮಳೆಯಾಗಿದೆ. ತಾಲ್ಲೂಕಿನ ಸಲುಪರಹಳ್ಳಿ ಗ್ರಾಮದ ನರಸಿಂಹಮೂರ್ತಿ ಅವರ ಜಮೀನಿನ ತೆಂಗು ಹಾಗೂ ಅಡಿಕೆ ಬೆಳೆಗೆ ಭಾಗಶ: ಹಾನಿಯಾಗಿದೆ. ಮುದ್ದನಹಳ್ಳಿ ಗ್ರಾಮದ ಗೌರಿಬಾಯಿ ಅವರ ಜಮೀನಿನಲ್ಲಿ ಸುಮಾರು 200 ಫಲ ಬಿಡುವ ಬಾಳೆ ಗಿಡ, ರಂಗಾಪುರ ಗ್ರಾಮದ ಲಕ್ಷ್ಮಮ್ಮ ಜಮೀನಿನಲ್ಲಿ ಬೆಳೆದಿದ್ದ 50 ಬಾಳೆ ಗಿಡಗಳಿಗೆ ಹಾನಿಯಾಗಿದೆ.

ಉಂಡಿಗನಾಳು ಗ್ರಾಮದ ನಿಂಗಮ್ಮ ಅವರ 2 ತೆಂಗಿನ ಮರ, ತಿಮ್ಮಾಲಪುರದ ರಾಜು ಹಾಗೂ ಯಡಿಯೂರಯ್ಯ ಅವರ ಜಮೀನಿನಲ್ಲಿ ಸುಮಾರು 30 ಅಡಿಕೆ ಮರ, 5 ತೆಂಗಿನ ಮರಗಳು ರಾತ್ರಿ ಸುರಿಧ ಮಳೆ ಗಾಳಿಗೆ ಧರೆಗೆ ಉರುಳಿವೆ.

ವರ್ಷಗಟ್ಟಲೆ ನೀರು– ಗೊಬ್ಬರ ನೀಡಿ ಬೆಳೆಸಿದ ಮರಗಳು ಫಸಲು ಸಿಗುವ ಸಮಯದಲ್ಲಿ ನೆಲಕ್ಕುರುಳಿದ್ದು ಬೆಳೆಗಾರರು ಪರಿತಪಿಸುವಂತಾಗಿದೆ.

ಸರ್ಕಾರ ಕೂಡಲೇ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ವಿಷಯ ತಿಳಿದ ತಹಶೀಲ್ದಾರ್ ಸಂತೋಷ್ಕುಮಾರ್ ಅವರು ಹಾನಿಗೊಳಗಾದ ಮಾಹಿತಿ ಪಡೆದು, ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಒದಗಿಸುವ ಭರವಸೆ ನೀಡಿದರು.

ಜಾವಗಲ್ನಲ್ಲಿ ವಿದ್ಯುತ್ ಕಂಬಗಳು ಧರೆಗೆ: ಜಾವಗಲ್ ಗ್ರಾಮದಲ್ಲಿ ಶುಕ್ರವಾರ ಮಧ್ಯರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಗ್ರಾಮದ ವಿವಿಧೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ರಸ್ತೆಗುರಳಿವೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು.

ಜಾವಗಲ್ ಗ್ರಾಮದಿಂದ ದೊಡ್ಡಘಟ್ಟ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬದುವಿನಲ್ಲಿ ಸಾಲಾಗಿ ಹಾಕಲಾಗಿರುವ ವಿದ್ಯುತ್ ಕಂಬಗಳ ಪೈಕಿ 3 ಕಂಬಗಳು ಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಹೊಸೂರು ಹಾಗೂ ದೊಡ್ಡಘಟ್ಟ ಗ್ರಾಮದಿಂದ ಜಾವಗಲ್ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿತು.

ನಾಗಲಾಪುರ ಕಟ್ಟೆಯಿಂದ ಗ್ರಾಮದ ದೊಡ್ಡ ಕೆರೆಗೆ ನೀರಿನ ಸಂಪರ್ಕ ಕಲ್ಪಿಸುವ ಕಾಲುವೆಗ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯ ಅಲ್ಪ ಭಾಗ 2ನೇ ಬಾರಿಗೆ ಕುಸಿದು ಬಿದ್ದ ಪರಿಣಾಮ ವಾಹನ ಸವಾರರು ಆತಂಕದಲ್ಲಿ ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಜಾವಗಲ್-ಬಾಣವಾರ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿದ್ದು ಇದರ ಜೊತೆಗೆ ನವಗ್ರಾಮ ಬಡಾವಣೆ ಸೇರಿದಂತೆ ವಿವಿಧ ಭಾಗಗಳಲ್ಲಿ ಒಟ್ಟು 15 ಕಂಬಗಳು ಮುರಿದು ಬಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ 4 ಮರಗಳು ಧರೆಗುರುಳಿ ಬಿದ್ದಿರುವುದು ಒಂದೆಡೆಯಾದರೆ, ಹೆಚ್ಚಿನ ಮಳೆಯಿಂದಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಳೆಯ ನೀರು ನಿಂತಿರುವ ದೃಶ್ಯಗಳು ಕಂಡುಬಂದವು.

ಗ್ರಾಮದ ಹೃದಯ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ದರ್ಗಾದ ಬಳಿ ನಿಲ್ಲಿಸಲಾಗಿದ್ದ ವಾಹನ ಒಂದರ ಮೇಲೆ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ವಾಹನದ ಬಹುಭಾಗ ಹಾನಿಗೊಳಗಾಗಿದೆ.

ಜಾವಗಲ್ ಗ್ರಾಮದಿಂದ ಹಳೇಬೀಡು ಮಾರ್ಗವಾಗಿ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ ಅಡ್ಡ ರಸ್ತೆಗಳ ಇಕ್ಕೆಲಗಳಲ್ಲಿ ಹಾಕಿರುವ ಹಲವು ಮರಗಳು ಹಾಗೂ ಮರದ ಕೊಂಬೆಗಳು ಮುರಿದು ರಸ್ತೆಗೆ ಬಿದ್ದಿದ್ದು, ಗ್ರಾಮ ಪಂಚಾಯಿತಿಯ ಸಿಬ್ಬಂದಿ ರಸ್ತೆಗೆ ಬಿದ್ದಿರುವ ಮರಗಳನ್ನು ಜೆಸಿಬಿ ಯಂತ್ರದ ಸಹಾಯದಿಂದ ತೆರವುಗೊಳಿಸಿದರು.

ನೇರ್ಲಿಗೆ ರಸ್ತೆಯ ಬಾಳೆಕಟ್ಟೆ ಪ್ರದೇಶ, ದೊಡ್ಡ ಕೋಡಿಹಳ್ಳಿ ರಸ್ತೆ, ಹಾರನಹಳ್ಳಿ ರಸ್ತೆ, ಕುಡಿಯುವ ನೀರಿನ ಟ್ಯಾಂಕ್, ಹಳೆಯ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ 15 ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಶನಿವಾರ ಮುಂಜಾನೆಯಿಂದಲೇ ಸೆಸ್ಕ್ ಸಿಬ್ಬಂದಿ ದುರಸ್ತಿ ಕಾರ್ಯ ಆರಂಭಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-36-1201377513

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.