ಅರಸೀಕೆರೆ: ತಾಲ್ಲೂಕಿನ ಬಾಣಾವರ ಪಟ್ಟಣದಲ್ಲಿ ಮಂಗಳವಾರ ಕೋಟೆ ಶ್ರೀಅಭಯ ಹಸ್ತ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವದ ಅಂಗವಾಗಿ ಪಟ್ಟಣವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಮನೆಯ ಮುಂದೆ ರಂಗೋಲಿಗಳನ್ನು ಬಿಡಿಸಲಾಗಿತ್ತು. ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.

ಶನಿವಾರ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ಭಾನುವಾರ ಸಂಜೆ ದ್ವಜಾರೋಹಣ, ಹಂಸ ವಾಹನೋತ್ಸವ, ಮಯೂರ ವಾಹನೋತ್ಸವ, ಶೇಷ ವಾಹನೋತ್ಸವವನ್ನು ನೆರವೇರಿಸಲಾಯಿತು.

ಸೋಮವಾರ ಕಲ್ಯಾಣೋತ್ಸವ, ಮಂಗಳವಾರ ರಥದ ಕಳಸ ಸ್ಥಾಪನೆ, ರಥದ ಮುಂದೆ ಅಂಬು ಹೊಡೆಯುವುದು, ಪಾನಕದ ಗಾಡಿಗಳನ್ನು ಓಡಿಸಲಾಯಿತು. ಬಾಣಾವರ, ಸುತ್ತಮುತ್ತಲ ಹತ್ತಾರು ಹಳ್ಳಿಗಳ ಸಾವಿರಾರು ಭಕ್ತರು ಜೈ ಶ್ರೀರಾಮ್ ಘೋಷದೊಂದಿಗೆ ರಥವನ್ನು ಎಳೆದರು. ಪ್ರಸಾದ ವಿನಿಯೋಗ, ಮಜ್ಜಿಗೆ ಪಾನಕ ವಿತರಣೆ ನಡೆಯಿತು.

ದೇವಸ್ಥಾನ ಸಮಿತಿ ಗೌರವ ಅಧ್ಯಕ್ಷ ಬಿ.ಜಿ.ವೆಂಕಟೇಶ್ ಲಾಡ್, ಅಧ್ಯಕ್ಷ ಬಿ.ಸಿ.ಶ್ರೀನಿವಾಸ್, ಉಪಾಧ್ಯಕ್ಷ ಬಿ.ಆರ್.ಶ್ರೀಧರ್, ಕಾರ್ಯದರ್ಶಿ ದೀಪಕ್ ಹಿರೇಮಠ್, ಖಜಾಂಚಿ ಪಿ.ಜಿ.ಶ್ರೀಕಾಂತ್, ಸಹ ಕಾರ್ಯದರ್ಶಿ ಬಿ.ಎಸ್.ಶಶಿಕುಮಾರ್, ಅರ್ಚಕರಾದ ಬಿ.ಟಿ.ನಾಗೇಶ್, ಬಿ.ಟಿ ರಾಜು, ಬಿ. ಬಿ ಯಶವಂತ್, ಶ್ರೀನಿವಾಸ್, ಬಿ. ಎಲ್. ಬಸವರಾಜು, ಸೇರಿದಂತೆ ಪೂಜಾ ಕಾರ್ಯಗಳನ್ನು ನೆರವೇರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-36-1999854704

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.