ಅರಸೀಕೆರೆ: ನಗರದಲ್ಲಿ ಇತ್ತೀಚೆಗೆ ನಡೆದ ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿದ ಶಾಸಕ ಕೆ.ಎಂ. ಶಿವಲಿಂಗೇಗೌಡ, ಅರಸೀಕೆರೆಂತಹ ಶಾಂತಿಪ್ರಿಯರ ನಗರದಲ್ಲಿ ಇಂತಹ ಘಟನೆಗಳು ನಡೆಯಬಾರದು ಎಂದು ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಸೀಕೆರೆಯಲ್ಲಿ ಹಿಂದೂ–ಮುಸ್ಲಿಂ ಸಮುದಾಯದ ಜನರು ಹಲವು ವರ್ಷಗಳಿಂದ ಸೌಹಾರ್ದ ಮತ್ತು ಏಕತೆಯಿಂದ ಬದುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಣ್ಣ ಮಾತಿನ ಚಕಮಕಿಯನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡು ನಗರದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಲು ಪ್ರಯತ್ನಿಸುವುದು ಅತ್ಯಂತ ದುಃಖದ ಸಂಗತಿ ಎಂದು ಹೇಳಿದರು.

ನಗರಸಭೆಯ ಮಾಜಿ ಅಧ್ಯಕ್ಷ ಸಮಿವುಲ್ಲಾ ಅವರ ಪುತ್ರನಿಗೆ ಸಂಬಂಧಿಸಿದಂತೆ ನಡೆದ ಘಟನೆಯಲ್ಲಿ, ಆರಂಭದಲ್ಲಿ ಉಂಟಾದ ಮಾತಿನ ಚಕಮಕಿಯ ನಂತರ ಸಂಬಂಧಪಟ್ಟ ಎರಡು ಕುಟುಂಬಗಳೂ ಸಂಜೆಯೊಳಗೆ ರಾಜಿ ಮಾಡಿಕೊಂಡು, ಲಿಖಿತವಾಗಿ ಒಪ್ಪಂದ ಮಾಡಿಕೊಂಡಿರುವ ಮಾಹಿತಿ ಇದೆ. ಆದರೆ, ಈ ವಿಚಾರವನ್ನು ಕೆಲವರು ರಾಜಕೀಯ ಲಾಭಕ್ಕಾಗಿ ದೊಡ್ಡದಾಗಿ ಬಿಂಬಿಸಿ ನಗರದಲ್ಲಿ ಬಂದ್ ಕರೆ ನೀಡುವ ಮೂಲಕ ಕೋಮು ಸೌಹಾರ್ದವನ್ನು ಕದಡುವ ಪ್ರಯತ್ನ ನಡೆಸಿದ್ದಾರೆ ಎಂದು ದೂರಿದರು.

ಗಲಾಟೆಯಲ್ಲಿ ನೇರವಾಗಿ ಭಾಗಿಯಾಗಿದ್ದವರೇ ಸಮಾಧಾನದಿಂದ ವಿಷಯವನ್ನು ಮುಕ್ತಾಯಗೊಳಿಸಲು ಮುಂದಾಗಿರುವಾಗ, ಹೊರಗಿನವರು ಅಥವಾ ರಾಜಕೀಯ ಪ್ರೇರಿತ ವ್ಯಕ್ತಿಗಳು ಇದನ್ನು ಮತ್ತಷ್ಟು ಪ್ರಚೋದಿಸುವುದು ಸರಿಯಲ್ಲ. ಅರಸೀಕೆರೆಯ ಜನರು ಶಾಂತಿ, ಸಹಿಷ್ಣುತೆ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಅಂಥ ನಗರದಲ್ಲಿ ದ್ವೇಷದ ಬೀಜ ಬಿತ್ತಲು ಯಾರಿಗೂ ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.

ಸಮಿವುಲ್ಲಾ ಜವಾಬ್ದಾರಿಯುತ ಸಾರ್ವಜನಿಕ ವ್ಯಕ್ತಿಯಾಗಿದ್ದು, ನಗರಸಭೆಯ ಮಾಜಿ ಅಧ್ಯಕ್ಷರಾಗಿದ್ದಾರೆ. ಅವರ ಮಗ ಸುಫೀಯಾಜ್ ವಕೀಲ ಆಗಿರುವುದರಿಂದ ಸಾರ್ವಜನಿಕರೊಂದಿಗೆ ನಡೆಯುವ ಪ್ರತಿಯೊಂದು ವರ್ತನೆಯೂ ಜವಾಬ್ದಾರಿಯುತ ಆಗಿರಬೇಕು. ಯಾವುದೇ ವ್ಯಕ್ತಿಯ ನಡೆ–ನುಡಿಗಳು ಸಮಾಜದಲ್ಲಿ ತಪ್ಪು ಸಂದೇಶ ನೀಡಬಾರದು ಎಂದು ಖಂಡಿಸಿದರು. ಘಟನೆ ನಡೆದಿರುವುದೇ ವಿಷಾದನೀಯ. ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳುವುದು, ರಸ್ತೆಗೆ ಇಳಿದು ಉದ್ವಿಗ್ನತೆ ಸೃಷ್ಟಿಸುವುದು ಅಥವಾ ಸಮುದಾಯಗಳ ನಡುವೆ ಅವಿಶ್ವಾಸ ಹುಟ್ಟಿಸುವ ಪ್ರಯತ್ನ ಮಾಡುವುದು ಅಕ್ಷಮ್ಯ. ಆದರೆ ಶಾಂತಿಯುತ ನಗರಕ್ಕೆ ರಾಜಕೀಯ ಬಣ್ಣ ಹಚ್ಚುವುದು ಮಾತ್ರ ಒಪ್ಪಲಾಗದು ಎಂದು ಹೇಳಿದರು.

ನಗರದ ಶಾಂತಿ, ನೆಮ್ಮದಿ ಮತ್ತು ಕೋಮು ಸೌಹಾರ್ದ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಸಣ್ಣ ಘಟನೆಗಳನ್ನು ದೊಡ್ಡ ವಿವಾದವನ್ನಾಗಿ ಮಾಡಿ ಸಮಾಜದಲ್ಲಿ ಭಿನ್ನಾಭಿಪ್ರಾಯ ಉಂಟು ಮಾಡುವ ಬದಲು, ಜನರು ಸಂಯಮದಿಂದ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ಮುಖಂಡರಾದ ಮಂಗಳಾಪುರ ನಾಗರಾಜ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ನಿರ್ದೇಶಕ ರಾಮಚಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-36-1501800401

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.