ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸೀಕೆರೆ: ಚುನಾವಣೆ ನ.2ಕ್ಕೆ ಮುಂದೂಡಿಕೆ

ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ಕೋರಂ ಕೊರತೆ
Last Updated 31 ಅಕ್ಟೋಬರ್ 2020, 4:46 IST
ಅಕ್ಷರ ಗಾತ್ರ

ಅರಸೀಕೆರೆ: ಕೋರಂ ಕೊರತೆಯಿಂದಾಗಿ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯನ್ನು ನ.2ರಂದು ಮಧ್ಯಾಹ್ನ 12ಕ್ಕೆ ಮುಂದೂಡಲಾಗಿದೆ.

ನಗರದ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಶುಕ್ರವಾರ ಆರಂಭವಾಯಿತು. ಆದರೆ, ಜೆಡಿಎಸ್ ಸದಸ್ಯರು ಮತದಾನದಿಂದ ದೂರ ಉಳಿದರು. ಕೇವಲ 6 ಸದಸ್ಯರು ಹಾಜರಿದ್ದು, ಚುನಾವಣಾ ಪ್ರಕ್ರಿಯೆಗೆ ಕೋರಂ ಕೊರತೆ ಎದುರಾಯಿತು. ಚುನಾವಣಾ ಪ್ರಕ್ರಿಯೆಗೆ ಮೂರನೇ ಒಂದರಷ್ಟು ಸದಸ್ಯರ ಹಾಜರಾತಿ ಕಡ್ಡಾಯ. ಹೀಗಾಗಿ, ಚುನಾವಣಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಜಗದೀಶ್ ಅವರು 30 ನಿಮಿಷ ಕಾಲಾವಕಾಶ ನೀಡಿದರು. ಈ ಅವಧಿಯಲ್ಲಿ ಯಾವುದೇ ಹೊಸ ಸದಸ್ಯರ ಹಾಜರಾತಿ ಕಂಡುಬರಲಿಲ್ಲ. ಹೀಗಾಗಿ, ಚುನಾವಣೆಯನ್ನು ಮುಂದೂಡಿದರು.

ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಗಿರೀಶ್ 2 ನಾಮಪತ್ರ ಸಲ್ಲಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ 20ನೇ ವಾರ್ಡ್‌ನ ಕಾಂತೇಶ್, 15ನೇ ವಾರ್ಡ್‌ನ ಪುಟ್ಟಸ್ವಾಮಿ, 19ನೇ ವಾರ್ಡ್‌ನ ಸಿ.ದರ್ಶನ್ ನಾಮಪತ್ರ ಸಲ್ಲಿಸಿದರೆ, ಗೀತಾ ಹೇಮಂತ್ ಎಂಬುವರು ಎರಡು ನಾಮಪತ್ರ
ಸಲ್ಲಿಸಿದ್ದಾರೆ.

ನ.2ರಂದು ಜರುಗಲಿರುವ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಗೆ ಕೋರಂ ಅಗತ್ಯ ಇರುವುದಿಲ್ಲ. ಎಷ್ಟು ಸದಸ್ಯರು ಹಾಜರಿರುತ್ತಾರೋ ಅವರನ್ನೇ ಪರಿಗಣಿಸಿ ಚುನಾವಣಾ ಪ್ರಕ್ರಿಯೆ ನಡೆಸಲಾಗುವುದು ಎಂದು ಜಗದೀಶ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎರಡು ವರ್ಷಗಳ ಹಿಂದೆ ನಡೆದಿದ್ದ ನಗರಸಭೆ ಚುನಾವಣೆಯಲ್ಲಿ ಅರಸೀಕೆರೆ ನಗರಸಭೆಗೆ ಆಯ್ಕೆಯಾಗಿರುವ ಒಟ್ಟು 31 ಸದಸ್ಯರಲ್ಲಿ ಜೆಡಿಎಸ್ 21, ಬಿಜೆಪಿ 5, ಕಾಂಗ್ರೆಸ್ 1, ಪಕ್ಷೇತರರು ನಾಲ್ವರು ಸದಸ್ಯರಿದ್ದಾರೆ.

ತಹಶೀಲ್ದಾರ್ ಸಂತೋಷ್ ಕುಮಾರ್, ನಗರಸಭೆ ಪೌರಾಯುಕ್ತ ಕಾಂತರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT