ಅರಸೀಕೆರೆ: ಅರಸೀಕೆರೆ ರೈಲ್ವೆ ರಕ್ಷಣಾ ಪಡೆ ಹಾಗೂ ರೈಲ್ವೆ ಪೊಲೀಸ್ ತಂಡವು ಪ್ರಯಾಣಿಕರ ವಸ್ತುಗಳ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ದಾವಣಗೆರೆಯ ಸಂಗಮೇಶ್ ಎಂಬಾತನನ್ನು ಬಂಧಿಸಿದ್ದು, ಆತನಿಂದ ₹1,15,970 ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾರ್ಚ್ 4ರಂದು ಚಂಡೀಗಢ–ಯಶವಂತಪುರ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ತಮ್ಮ ಲ್ಯಾಪ್ಟಾಪ್ ಬ್ಯಾಗ್ ಕಳುವಾಗಿದೆ ಎಂದು ಹಾವೇರಿ ಜಿಲ್ಲೆಯ ನಿವಾಸಿ ಚಂದ್ರಗೌಡ ಪಾಟೀಲ ದೂರು ಸಲ್ಲಿಸಿದ್ದರು. ರೈಲು ಯಶವಂತಪುರ ನಿಲ್ದಾಣಕ್ಕೆ ಸಮೀಪಿಸುತ್ತಿದ್ದಾಗ ಎಸ್-2 ಕೋಚ್ನಲ್ಲಿದ್ದ ಅವರ ಬ್ಯಾಗ್ ಕಾಣೆಯಾಗಿರುವುದನ್ನು ಗಮನಿಸಿದರು. ಆ ಬ್ಯಾಗ್ನಲ್ಲಿ ಡೆಲ್ ಲ್ಯಾಪ್ಟಾಪ್, ವಿವೋಗಾರ್ ಫೋಕಸ್ ಬ್ಲೂಟೂತ್ ಹೆಡ್ಫೋನ್ ಹಾಗೂ ಕಂಪನಿಯ ಐಡಿ ಕಾರ್ಡ್ ಇದ್ದವು.

ಅರಸೀಕೆರೆ ಆರ್ಟಿಎಫ್ ಇನ್ಸ್ಪೆಕ್ಟರ್ ಹಾಗೂ ಸಿಪಿಡಿಎಸ್ ಮೈಸೂರು ಪ್ರಭಾರಿ ರಾಕೇಶ್ ಕುಮಾರ್ ನಿರ್ದೇಶನದ ಮೇರೆಗೆ ವಿಶೇಷ ತಂಡವನ್ನು ರಚಿಸಲಾಗಿದ್ದು, ತಂಡವು ಘಟನೆ ನಡೆದ ದಿನದ ಎಸ್-2 ಕೋಚ್ನ ಸಿಸಿಟಿವಿ ದೃಶ್ಯಾವಳಿಯನ್ನು ಸಮಗ್ರವಾಗಿ ಪರಿಶೀಲಿಸಿತು. ಒಬ್ಬ ಸಂಶಯಾಸ್ಪದ ವ್ಯಕ್ತಿ ಪ್ರಯಾಣಿಕರ ಬ್ಯಾಗ್ ತೆಗೆದುಕೊಂಡು ಹೋಗುತ್ತಿರುವುದು ದೃಶ್ಯಗಳಲ್ಲಿ ಪತ್ತೆಯಾಯಿತು.

ಮಾರ್ಚ್ 10 ರಂದು ಲಭಿಸಿದ ಖಚಿತ ಮಾಹಿತಿಯ ಆಧಾರದ ಮೇಲೆ ಸಂಯುಕ್ತ ತಂಡವು ಅರಸೀಕೆರೆ ರೈಲು ನಿಲ್ದಾಣದಲ್ಲಿ ನಿಗಾ ವಹಿಸಿತ್ತು. ಬೆಳಿಗ್ಗೆ 9.45ಕ್ಕೆ ವಾಸ್ಕೊ ಡಿ ಗಾಮಾ–ಯಶವಂತಪುರ ಎಕ್ಸ್ಪ್ರೆಸ್ ನಿಲ್ದಾಣಕ್ಕೆ ಬಂದಾಗ ಸಂಶಯಾಸ್ಪದ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತನನ್ನು ಸಂಗಮೇಶ್ ಜಿ. ಎಂದು ಗುರುತಿಸಲಾಗಿದ್ದು, ಈತ ದಾವಣಗೆರೆ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿದೆ. ವಿಚಾರಣೆಯ ವೇಳೆ ಆರೋಪಿಯು ತಪ್ಪು ಒಪ್ಪಿಕೊಂಡಿದ್ದು, ಡೆಲ್ ಲ್ಯಾಪ್ಟಾಪ್, ವಿವೋಗಾರ್ ಫೋಕಸ್ ಬ್ಲೂಟೂತ್ ಹೆಡ್ಫೋನ್, ಕಂಪನಿ ಐಡಿ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಯನ್ನು ಚನ್ನರಾಯಪಟ್ಟಣದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.