ಅರಸೀಕೆರೆ: ‘ಅಭಿವೃದ್ಧಿ ಕೆಲಸ ಮಾಡಿದರೆ ಪ್ರಚಾರ ಸಿಗುತ್ತದೆ. ಅದೇ ರೀತಿ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುವುದು ಹಾಗೂ ಮಾಹಿತಿ ಇಲ್ಲದೇ ಟೀಕೆ– ಟಿಪ್ಪಣಿ ಮಾಡುತ್ತ ಪ್ರಚಾರ ಪಡೆಯುತ್ತೇವೆ ಎಂದರೆ ಕ್ಷೇತ್ರದ ಮತದಾರರು ದಡ್ಡರಲ್ಲ’ ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಸುದ್ದಿಗೋಷ್ಠಿ ನಡೆಸಿ, ಕ್ಷೇತ್ರದ ಗ್ರಾಮೀಣ ಜನತೆಗೆ ಮೂಲಸೌಕರ್ಯ ಸರಿಯಾಗಿಲ್ಲ. ರೈತರಿಗೆ ಟಿಸಿ ಸಮಸ್ಯೆ ಕಾಡುತ್ತಿದೆ. ನಾಫೆಡ್ ಮೂಲಕ ಖರೀದಿಸಿದ ರಾಗಿಯಲ್ಲಿ ಅವ್ಯವಹಾರವಾಗಿದೆ, ಗಂಡಸಿ ಹ್ಯಾಂಡ್ ಪೋಸ್ಟ್ ವೃತ್ತದಲ್ಲಿ ದೇವೇಗೌಡರ ಪ್ರತಿಮೆ ಸ್ಥಾಪಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ. ಆದರೆ ನಮ್ಮ ಶಾಸಕರು ಕ್ಷೇತ್ರದ ಜನತೆಯ ಬೇಕು– ಬೇಡಗಳಿಗೆ ಸ್ಪಂದಿಸುತ್ತ ಕೆಲಸ ಮಾಡುತ್ತಿದ್ದು, ಜನತೆ ಕೂಡ ಅವರನ್ನು ನಿರಂತರವಾಗಿ ಬೆಂಬಲಿಸುತ್ತ ಬಂದಿದ್ದಾರೆ’ ಎಂದರು.

‘ಅದೇ ರೀತಿ ದೇವೇಗೌಡರ ಬಗ್ಗೆಯೂ ಶಾಸಕರಿಗೆ ಹಾಗೂ ನಮಗೆ ಅಪಾರವಾದ ಗೌರವವಿದೆ. ದೇವೇಗೌಡರ ಪ್ರತಿಮೆ ಎಲ್ಲಿ ಸ್ಥಾಪಿಸಬೇಕು? ಯಾವ ಸಂದರ್ಭದಲ್ಲಿ ಸ್ಥಾಪಿಸಬೇಕು ಅದನ್ನು ಇವರಿಂದ ತಿಳಿದುಕೊಳ್ಳುವ ಅಗತ್ಯವಿಲ್ಲ’ ಎಂದರು.

ಶಿವಲಿಂಗೇಗೌಡರು ಕ್ಷೇತ್ರದ ಶಾಸಕರಾಗಿ ಆಯ್ಕೆ ಆದ ಬಳಿಕ ಕ್ಷೇತ್ರದ ಅಭಿವೃದ್ಧಿ ಚಿತ್ರಣವೇ ಬದಲಾಗಿದೆ. ಸಾವಿರಾರು ಕೋಟಿ ವೆಚ್ಚದಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳು ಅವರ ಹೆಸರನ್ನು ಅಜರಾಮರವನ್ನಾಗಿಸಿದೆ. ನಿರಾಧಾರ ಆರೋಪಕ್ಕೆ ಹತಾಶೆ, ಟೀಕೆ ಮನೋಭಾವಕ್ಕೆ ಈಗಾಗಲೇ ಜನ ಉತ್ತರಿಸಿದ್ದಾರೆ. ಇನ್ನಾದರೂ ಅನವಶ್ಯಕ ಟೀಕೆ–ಟಿಪ್ಪಣಿ ಮಾಡುತ್ತ ಶಾಸಕರ ವಿರುದ್ಧ ಅಪಪ್ರಚಾರ ಮಾಡಿ ತಾವು ಪ್ರಚಾರ ಪಡಿಯಬಹುದೆಂಬ ಮನಸ್ಥಿತಿಯನ್ನು ಬದಲಿಸಿಕೊಂಡು ಜನರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಕಿವಿಮಾತು ಹೇಳಿದರು.

ಹೇಮಾವತಿ ಏತ ನೀರಾವರಿ, ಎತ್ತಿನಹೊಳೆ ಕಾಮಗಾರಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳು ಗ್ರಾಮೀಣ ಭಾಗದ ರೈತರ ಬದುಕನ್ನು ಹಸನಗೊಳಿಸುವ ಯೋಜನೆಗಳಲ್ಲವೇ?.ಶಾಸಕರ ವಿರುದ್ಧ ಅಪಪ್ರಚಾರ ಮಾಡುವುದನ್ನು ಬಿಟ್ಟು, ಮನೆ ಒಂದು ಮೂರು ಬಾಗಿಲಂತಾಗಿರುವ ನಿಮ್ಮ ಪಕ್ಷದಲ್ಲಿ ನಿಮ್ಮ ಸ್ಥಾನವನ್ನು ಅರಿತು ಮಾತನಾಡಿ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಮುಖಂಡರಾದ ಯಳವಾರೆ ನಾಗರಾಜ್, ಜಾಜೂರು ಸಿದ್ದೇಶ್, ಲಕ್ಷ್ಮಣ್, ಪ್ರದೀಪ್, ನಗರಸಭೆ ಮಾಜಿ ಸದಸ್ಯ ರಾಜು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-36-1280919747

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.