ಅರ್ಚಕರ ಮನೇಲಿ ದ್ರಾಕ್ಷಿ,ಗೋಡಂಬಿ ಸಿಕ್ಕಿರಬೇಕು: ಐಟಿ ದಾಳಿಗೆ ಸಚಿವ ರೇವಣ್ಣ ಲೇವಡಿ

ಬುಧವಾರ, ಏಪ್ರಿಲ್ 24, 2019
27 °C

ಅರ್ಚಕರ ಮನೇಲಿ ದ್ರಾಕ್ಷಿ,ಗೋಡಂಬಿ ಸಿಕ್ಕಿರಬೇಕು: ಐಟಿ ದಾಳಿಗೆ ಸಚಿವ ರೇವಣ್ಣ ಲೇವಡಿ

Published:
Updated:

ಹಾಸನ: ಹರದನಹಳ್ಳಿ ಈಶ್ವರ ದೇವಾಲಯದ ಅರ್ಚಕರ ಮನೆ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳಿಗೆ ದ್ರಾಕ್ಷಿ, ಗೋಡಂಬಿ ಸಿಕ್ಕಿರಬೇಕು ಎಂದು ಸಚಿವ ಎಚ್.ಡಿ.ರೇವಣ್ಣ ಲೇವಡಿ ಮಾಡಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಐಟಿ ದಾಳಿ ಮಾಡಲಿ ಬಿಡಿ. ಅವರ ಕೆಲಸ ಮಾಡುತ್ತಿದ್ದಾರೆ. ಈಶ್ವರನ ಮೇಲಾದರೂ ಮಾಡಲಿ, ಅರ್ಚಕರ ಮೇಲಾದರೂ ದಾಳಿ ಮಾಡಲಿ. ಅರ್ಚಕರ ಮನೆಯಲ್ಲಿ ಏನು ಮಹಾ ಸಿಕ್ಕಿರಲು ಸಾಧ್ಯ. ಗೋಡಂಬಿ, ದ್ರಾಕ್ಷಿ ಸಿಕ್ಕಿರಬೇಕು ಅಷ್ಟೇ ಎಂದು ಅಪಹಾಸ್ಯ ಮಾಡಿದರು.

ದೇವೇಗೌಡರಿಗೆ ಮಕ್ಕಳು, ಸೊಸೆಯಂದಿರು ಊಟ ಹಾಕಿಲ್ಲ ಎಂಬ ಎ.ಮಂಜು ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರ ಅಪ್ಪ, ಅವ್ವನನ್ನ ಸರಿಯಾಗಿ ನೋಡಿಕೊಳ್ಳಲಿ. ನಮ್ಮ ತಂದೆ, ತಾಯಿ ನೋಡಿಕೊಳ್ಳುವುದು ಗೊತ್ತು. ನನ್ನ ಬಾಯಲ್ಲಿ ಅವನ ಹೆಸರು ಏಕೆ ಹೇಳುಸುತ್ತೀರಾ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಬರಹ ಇಷ್ಟವಾಯಿತೆ?

  • 9

    Happy
  • 1

    Amused
  • 0

    Sad
  • 0

    Frustrated
  • 8

    Angry

Comments:

0 comments

Write the first review for this !