ಕೊಣನೂರು: ಕೆಲ ದಿನಗಳಿಂದ ಹದ ಮಳೆ ಸುರಿಯತ್ತಿರುವುದರಿಂದ ಹೊಗೆಸೊಪ್ಪು ನಾಟಿಯು ಉತ್ಸಾಹದಿಂದ ಸಾಗಿದೆ.

ಅರಕಲಗೂಡು ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕಿನ ಬೆಲೆ ಕುಸಿದಿದ್ದರೂ, ಈ ವರ್ಷ ಹೊಗೆಸೊಪ್ಪು ಕೃಷಿಗಾಗಿ ನಾಟಿಯು ಉತ್ಸಾಹದಿಂದ ಸಾಗಿರುವುದು ವಿಶೇಷ ಎನಿಸಿದೆ.

ಹೆಚ್ಚು ತಂಬಾಕು ಉತ್ಪಾದಿಸುವ ಕೊಣನೂರು ಮತ್ತು ರಾಮನಾಥಪುರ ಹೋಬಳಿಯ ವ್ಯಾಪ್ತಿಯಲ್ಲಿ ಒಂದು ವಾರದಿಂದ ಹದಮಳೆಯು ಸುರಿಯುತ್ತಿರುವುದರಿಂದ ಮಳೆಯಾಶ್ರಿತ ಜಮೀನಿನ ಹೊಗೆಸೊಪ್ಪು ಬೆಳೆಗಾರರು ನಾಟಿಯಲ್ಲಿ ನಿರತರಾಗಿದ್ದಾರೆ.

ನೀರಾವರಿ ವ್ಯವಸ್ಥೆಯಿರುವ ಬೆಳೆಗಾರರು ಈಗಾಗಲೇ ಹೊಗೆಸೊಪ್ಪು ನಾಟಿ ಮುಗಿಸಿ, ಸಸಿಗಳ ಆರೈಕೆಯಲ್ಲಿ ನಿರತರಾಗಿದ್ದಾರೆ. ಹದ ಮಳೆಗೆ ಕಾಯುತ್ತಿದ್ದ ಜಮೀನಿನಲ್ಲಿ ನಾಟಿಯು ವಾರದಿಂದ ಭರದಿಂದ ಸಾಗಿದೆ.

ತಂಬಾಕು ಖರೀದಿಯ ದರವು ಗಣನೀಯವಾಗಿ ಇಳಿಕೆಯಾಗಿದ್ದರೂ ಲೆಕ್ಕಿಸದ ಬೆಳೆಗಾರರು ಪ್ರತಿ ವರ್ಷದಂತೆ ಕಳೆದೆರಡು ತಿಂಗಳಿಂದ ಬೆಳೆಸಿದ್ದ ಸಸಿಗಳ ನಾಟಿ ಮಾಡುವಲ್ಲಿ ಮಗ್ನರಾಗಿದ್ದಾರೆ.

ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ 2024–25 ನೇ ಸಾಲಿನ ತಂಬಾಕು ಖರೀದಿಯು ಪ್ರಾರಂಭದ ದಿನಗಳಲ್ಲಿ ಪ್ರತಿ ಉತ್ಕೃಷ್ಟ ದರ್ಜೆಯ ಹೊಗೆಸೊಪ್ಪು ಪ್ರತಿ ಕೆ.ಜಿ.ಗೆ ಗರಿಷ್ಠ ₹322 ದೊರಕಿತ್ತು. ಕೇಂದ್ರ ಸರ್ಕಾರವು ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕವನ್ನು ವಿಧಿಸಿದ ನಂತರ ದಿಢೀರ್ ಇಳಿಕೆಯಾಗಿ ₹270 ತಲುಪಿತು.

ನಂತರದ ದಿನಗಳಲ್ಲಿ ಬೆರಣಿಕೆಯಷ್ಟು ಬೇಲ್ಗಳನ್ನು ಮಾತ್ರ ₹300 ಕ್ಕೂ ಹೆಚ್ಚಿನ ಬೆಲೆಗೆ ಕೊಳ್ಳುತ್ತಿದ್ದು, ಕಡಿಮೆ ದರ್ಜೆಯ ಹೊಗೆಸೊಪ್ಪನ್ನು ಪ್ರತಿ ಕೆ.ಜಿ.ಗೆ ₹100 ದರದಲ್ಲಿ ಖರೀದಿಸಲಾಗುತ್ತಿದೆ. ಇದರಿಂದ ಸರಾಸರಿ ಬೆಲೆ ಕುಸಿದಿದ್ದು, ಬೆಳೆಗಾರರಿಗೆ ಹೆಚ್ಚಿನ ನಷ್ಟವಾಗುತ್ತಿದೆ. ತಂಬಾಕು ಮಂಡಳಿಯು ನೀಡಿರುವ ತಂಬಾಕು ಬೆಳೆಯ ಪರವಾನಗಿಯನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ತಂಬಾಕು ಬೆಳೆಯಲು ಮುಂದಾಗಿದ್ದೇವೆ ಎನ್ನುತ್ತಿದ್ದಾರೆ ಬೆಳೆಗಾರರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-36-235605230

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.