ಆರ್ಥಿಕ ವಿಜ್ಞಾನದ ಮಾಹಿತಿ ನೀಡಿ

7
ಉಪವಿಭಾಗಾಧಿಕಾರಿ ಎಚ್.ಎಲ್. ನಾಗರಾಜ್ ಅಭಿಮತ

ಆರ್ಥಿಕ ವಿಜ್ಞಾನದ ಮಾಹಿತಿ ನೀಡಿ

Published:
Updated:
Deccan Herald

ಹಾಸನ : ಇಂದಿನ ಸ್ಪರ್ಧಾತ್ಮಾಕ ಯುಗದಲ್ಲಿ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರು ಅರ್ಥಶಾಸ್ತ್ರಜ್ಞರಾಗಲೇಬೇಕು ಎಂದು ಉಪವಿಭಾಗಾಧಿಕಾರಿ ಎಚ್.ಎಲ್. ನಾಗರಾಜ್‌ ಹೇಳಿದರು.

ನಗರದ ಶ್ರೀಗಂಧದ ಕೋಠಿ ಆವರಣದಲ್ಲಿರುವ ಸರ್ಕಾರಿ ಬಾಲಕಿಯರ ವಿಭಜಿತ ಶಾಲೆ ಸಭಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅರ್ಥಶಾಸ್ತ್ರ ವಿಷಯಾಧರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಕ್ಷೇತ್ರಕ್ಕೆ ಹೋದರೂ ಅರ್ಥಶಾಸ್ತ್ರ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಪಂಚಕ್ಕೆ ಆರ್ಥಿಕ ವಿಜ್ಞಾನದ ಬಗ್ಗೆ ತಿಳಿಸುವುದು ಅವಶ್ಯಕವಾಗಿದೆ. ಜಾಗತೀಕರಣ ಮತ್ತು ಉದಾರೀಕರಣಕ್ಕೆ ತೊಡಗಿಸಿಕೊಂಡ ಮೇಲೆ ಸ್ಪರ್ಧೆ ಹೆಚ್ಚಾಗಿದೆ. ಸಣ್ಣ ಸಣ್ಣ ರಾಜ್ಯಗಳು ಕೂಡ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರಕ್ಕೆ ಇಳಿದಿದೆ ಎಂದು ಅಭಿಪ್ರಾಯಪಟ್ಟರು.

ಅಭಿವೃದ್ಧಿ ವಿಚಾರದಲ್ಲಿ ಅರ್ಥಶಾಸ್ತ್ರ ಮಹತ್ವದ ಸ್ಥಾನ ಹೊಂದಿದೆ. ವಿದ್ಯಾರ್ಥಿಗಳಿಗೆ ಕಲಿಸಬೇಕಾದರೇ ಬೋಧಕರೂ ಪರಿಣತರಾಗಿರಬೇಕು. ಶ್ರದ್ಧೆ, ಪರಿಕಲ್ಪನೆ ಇಲ್ಲವಾದರೇ ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಅರ್ಥಶಾಸ್ತ್ರವನ್ನು ಅರ್ಥ ಮಾಡಿಸಲು ಆಗುವುದಿಲ್ಲ. ಬಾಹ್ಯ ಒತ್ತಡ, ವಸ್ತುಗಳ ಬೆಲೆ ಬಗ್ಗೆ ಆಳವಾಗಿ ತಿಳಿಯುವ ಜ್ಞಾನ ಇರಬೇಕು ಎಂದು ಉಪನ್ಯಾಸಕರಿಗೆ ಕಿವಿ ಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಸುರೇಶ್, ಉಪನ್ಯಾಸಕರಾದ ಕೃಷ್ಣೇಗೌಡ, ಜಗದೀಶ್, ಪ್ರಕಾಶ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !