ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡೇಶ್ವರಿಯಲ್ಲಿ ಕೊನೆಯ ಮತ ಬೇಟೆ

ವಿವಿಧೆಡೆ ಚುನಾವಣಾ ಪ್ರಚಾರ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Last Updated 26 ಏಪ್ರಿಲ್ 2018, 12:54 IST
ಅಕ್ಷರ ಗಾತ್ರ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬುಧವಾರ ಬಿರುಸಿನ ಪ್ರಚಾರ ಕೈಗೊಂಡರು. 5 ದಿನಗಳ ಕಾಲ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿರುವ ಅವರು, ಇದು ಕೊನೆಯ ದಿನದ ಪ್ರಚಾರ ಎಂದೂ ತಿಳಿಸಿದರು.

ಕ್ಷೇತ್ರದ 10ಕ್ಕೂ ಹೆಚ್ಚು ಹಳ್ಳಿಗಳಿಗೆ ಬುಧವಾರ ಭೇಟಿ ಕೊಟ್ಟರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಿನಕಲ್‌ ಅನ್ನು ಕೇಂದ್ರೀಕರಿಸಿಕೊಂಡು ಪ್ರಚಾರ ಮಾಡುತ್ತಿದ್ದ ಮುಖ್ಯಮಂತ್ರಿ ಬುಧವಾರ ಅಲ್ಲಿಯೇ ಪ್ರಚಾರವನ್ನು ಮುಕ್ತಾಯಗೊಳಿಸಿದರು.

ಬೆಳಿಗ್ಗೆ 11ಕ್ಕೆ ಕಾಮನಕೆರೆಹುಂಡಿಯಿಂದ ಪ್ರಚಾರ ಆರಂಭಿಸಿದ ಅವರು, ಮತದಾನ ಮಾಡಿ ಕಾಂಗ್ರೆಸ್‌ ಗೆಲ್ಲಿಸುವಂತೆ ಕೋರಿದರು.

ಬುಧವಾರವೇ ಕೊನೆಯ ದಿನ: ‘ಚಾಮುಂಡೇಶ್ವರಿಯಲ್ಲಿ 5 ದಿನ ಪ್ರಚಾರ ಮಾಡಿದ್ದೇನೆ. ಇದೇ ನನ್ನ ಕೊನೆಯ ಪ್ರಚಾರದ ದಿನ. ನನ್ನನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು. ನನ್ನನ್ನು ಮತ್ತೆ ಮುಖ್ಯಮಂತ್ರಿ ಮಾಡಿರಿ. ಜನಪರವಾಗಿ ಕೆಲಸ ಮಾಡಲು ಬೆಂಬಲಿಸಿ’ ಎಂದು ಮನವಿ ಮಾಡಿದರು.

‘ಒಂದು ದಿನ ಬಾದಾಮಿಯಲ್ಲಿ ಪ್ರಚಾರಕ್ಕೆ ಹೋಗಲಿದ್ದೇನೆ. ನಂತರ, ರಾಜ್ಯದ ವಿವಿಧೆಡೆ ಪಕ್ಷದ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ. ಕಾಂಗ್ರೆಸ್‌ ಬಹುಸಂಖ್ಯಾತರ ಪರವಾಗಿದೆ. ಬಡವರಿಗೆ, ದಲಿತರ ಏಳಿಗೆಗೆ ಸಾಕಷ್ಟು ಶ್ರಮಿಸಿದೆ. ಇದು ಭವಿಷ್ಯದಲ್ಲೂ ಮುಂದುವರಿಯಲಿದ್ದು, ನನ್ನನ್ನು ದೊಡ್ಡ ಅಂತರದಿಂದ ಗೆಲ್ಲಿಸಿ’ ಎಂದು ಕೋರಿದರು.

ಕ್ಷೇತ್ರದ ಹಳೆಕೆಸರೆ, ಜಯದೇವನಗರ, ಏಕಲವ್ಯನಗರ, ಶ್ಯಾದನಹಳ್ಳಿ, ಸಿದ್ದಲಿಂಗಪುರ, ಬೆಲವತ್ತ ಗ್ರಾಮ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT