ಹಾಸನ: ‘ಅಯ್ಯ ಎಂದರೆ’ ಎಂಬುದು ಸ್ವರ್ಗ, ಪ್ರೀತಿ ಮತ್ತು ಮೌಲ್ಯಗಳ ಸಂಕೇತವಾಗಿದ್ದು, ಈ ಕೃತಿಯ ಹೆಸರೇ ಅರ್ಥಪೂರ್ಣವಾಗಿದೆ. ಆರ್.ಎಸ್. ನಿಂಗೇಗೌಡರ ಜೀವನಚರಿತ್ರೆ ಮತ್ತು ಅವರು ನಡೆದು ಬಂದ ಆದರ್ಶಮಯ ಹಾದಿಯ ಚಿತ್ರಣ ಈ ಪುಸ್ತಕದಲ್ಲಿ ಅಡಕವಾಗಿದೆ ಎಂದು ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ಹೇಳಿದರು.

ನಗರದ ಎನ್.ಸಿ.ಸಿ. ಕಚೇರಿ ಹಿಂಭಾಗದ ಕುರುಹಿನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಭವಾನಿ ಲೋಕೇಶ್ ರಚಿತ ‘ಅಯ್ಯ ಎಂದರೆ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನಿಂಗೇಗೌಡರು ತಮ್ಮ ಜೀವನದಲ್ಲಿ ಅನುಸರಿಸಿದ ಸರಳತೆ, ಸೇವಾಭಾವ ಮತ್ತು ಮಾನವೀಯತೆ ಅವರ ಕುಟುಂಬದಲ್ಲಿಯೂ ಮುಂದಿನ ತಲೆಮಾರಿನಲ್ಲಿಯೂ ಮುಂದುವರಿಯುತ್ತಿರುವುದು ಶ್ಲಾಘನೀಯ ಎಂದರು.

ಸಮಾಜದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವ ವ್ಯಕ್ತಿತ್ವಗಳು ಅಪರೂಪವಾಗಿದ್ದು, ಅಂತಹ ಆದರ್ಶ ವ್ಯಕ್ತಿಗಳ ಜೀವನವನ್ನು ಪುಸ್ತಕ ರೂಪದಲ್ಲಿ ಪರಿಚಯಿಸುವುದು ಸಮಾಜಕ್ಕೆ ಪ್ರೇರಣೆ ಎಂದರು.

ಹಿಂದಿನ ಕಾಲದಲ್ಲಿ ಜಾನಪದ ಕವಿಗಳು ಹಾಗೂ ಸಮಾಜಮುಖಿ ವ್ಯಕ್ತಿಗಳು ಕೆರೆ ನಿರ್ಮಾಣ, ದೇವಾಲಯ ನಿರ್ಮಾಣ, ಬಡವರಿಗೆ ಸಹಾಯ ಹಾಗೂ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸುವ ಕಾರ್ಯಗಳಿಗೆ ಮಹತ್ವ ನೀಡುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆದು ದೊಡ್ಡ ಉದ್ಯೋಗ ಮಾಡು, ವೈದ್ಯನಾಗು, ಎಂಜಿನಿಯರ್ ಆಗು ಹಾಗೂ ಹೆಚ್ಚು ಹಣ ಸಂಪಾದಿಸು ಎಂಬ ದಿಕ್ಕಿನಲ್ಲೇ ಒತ್ತಡ ಹೆಚ್ಚಾಗಿದೆ. ಆದರೆ ನಿಂಗೇಗೌಡರು ತಮ್ಮ ಮಕ್ಕಳಿಗೆ ಕೇವಲ ಶಿಕ್ಷಣ ಮಾತ್ರವಲ್ಲ, ಸಮಾಜ ಸೇವೆ ಮಾಡುವ ಗುಣವನ್ನೂ ಬೆಳೆಸಿದ್ದಾರೆ ಎಂದರು.

ಪ್ರಕೃತಿಯ ಸಮತೋಲನ ಕಾಪಾಡಿಕೊಳ್ಳಲು ಭೂಮಿಯ ಮೇಲೆ ವಿವಿಧ ಜೀವಿಗಳು ಹುಟ್ಟಿದ್ದು, ಯಾವುದೇ ಜೀವಿಯನ್ನು ತಿರಸ್ಕರಿಸದೇ ಪ್ರಕೃತಿಯೊಂದಿಗೆ ಸಮನ್ವಯವಾಗಿ ಬದುಕಬೇಕು ಎಂಬ ಸಂದೇಶವೂ ನಿಂಗೇಗೌಡರ ಜೀವನದಲ್ಲಿ ಕಾಣಿಸುತ್ತದೆ ಎಂದು ಹೇಳಿದರು.

ಲೇಖಕಿ ಭವಾನಿ ಲೋಕೇಶ್ ಅವರು ನಿಂಗೇಗೌಡರ ಜೀವನದ ವಿವಿಧ ಹಂತಗಳು, ಸಮಾಜ ಸೇವೆಯ ಪಯಣ ಹಾಗೂ ಅವರ ಆದರ್ಶಗಳನ್ನು ಕೃತಿಯಲ್ಲಿ ವಿವರವಾಗಿ ದಾಖಲಿಸಿದ್ದಾರೆ. ಈ ಪುಸ್ತಕ ಯುವಜನತೆಗೆ ಪ್ರೇರಣೆಯಾಗಲಿದೆ ಎಂದರು.

ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ, ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಸಮಿತಿ ಸಭಾಪತಿ ಡಾ. ಎಚ್.ಪಿ. ಮೋಹನ್, ಡಾ. ಎನ್.ಎಸ್. ನಾಗೇಶ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಆರ್.ಎನ್. ರಂಗಲಕ್ಷ್ಮಿ, ಸಿ.ಎನ್. ಜಗದೀಶ್, ಬಿ.ಕೆ. ರಾಘವೇಂದ್ರ, ಆರ್.ಎನ್. ರಮೇಶ್, ಸುರೇಖಾ, ಶಿಲ್ಪಗೌಡ, ಬಸವರಾಜು, ವಿಜಯಲಕ್ಷ್ಮಿ, ಕೆ.ಟಿ. ಜಯಶ್ರೀ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.