ಭಾರಿ ಮಳೆ ಸುರಿಯುತ್ತಿದ್ದ ಕಾರಣ ಸವಾರರು ಕೆಂಕೆರೆಹಳ್ಳಿ ಗೇಟ್ ಸಮೀಪದ ಬಸ್ ನಿಲ್ದಾಣದ ಮುಂದೆ ರಸ್ತೆ ಬದಿ ಬೈಕ್‌ಗಳನ್ನು ನಿಲ್ಲಿಸಿ ನಿಲ್ದಾಣದೊಳಗೆ ನಿಂತಿದ್ದರು. ಆಗ ಬಾಣಾವರಕ್ಕೆ ಬರುತ್ತಿದ್ದ ಫಾರ್ಚುನರ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ಅಲ್ಲಿ ನಿಲ್ಲಿಸಿದ್ದ 17 ಬೈಕ್‌ಗಳನ್ನು ಜಖಂಡಗೊಳಿಸಿ, ಬಸ್ ನಿಲ್ದಾಣದ ಗೋಡೆಗೆ ಡಿಕ್ಕಿಹೊಡೆದಿದೆ. ಗೋಡೆ ಕುಸಿದು ಒಬ್ಬರಿಗೆ ಗಾಯವಾಗಿದೆ. ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.