ಹಾಸನ: ಎ.ಮಂಜು ಭರ್ಜರಿ ರೋಡ್‌ ಶೋ, ಕಲಾತಂಡಗಳ ವೈಭವ

ಗುರುವಾರ , ಏಪ್ರಿಲ್ 25, 2019
33 °C

ಹಾಸನ: ಎ.ಮಂಜು ಭರ್ಜರಿ ರೋಡ್‌ ಶೋ, ಕಲಾತಂಡಗಳ ವೈಭವ

Published:
Updated:
Prajavani

ಹಾಸನ: ಎತ್ತ ನೋಡಿದರೂ ಜನಸಾಗರ, ಮೋದಿಗೆ ಜೈ, ಯಡಿಯೂರಪ್ಪಗೆ ಜೈ, ಮಂಜು ಗೆ ಜೈ ಎಂಬ ಘೋಷ ವಾಕ್ಯ, ಜಾನಪದ ಕಲಾತಂಡಗಳ ವೈಭವ, ಬಿಜೆಪಿ ಬಾವುಟಗಳ ಹಾರಾಟ...

ಹಾಸನದಲ್ಲಿ ಮಂಜು ನಡೆಸಿದ ರೋಡ್‌ ಶೋ ವೇಳೆ ಕಂಡ ಬಂದ ದೃಶ್ಯಗಳು.

ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ಮಂಜು ಅವರನ್ನು ಬೆಂಬಲಿಸಲು ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರ ದಂಡೇ ಹರಿದು ಬಂದಿತ್ತು. ಮಹಾವೀರ ವೃತ್ತದಿಂದ ಟ್ರ್ಯಾಕ್ಟರ್‌, ಬೈಕ್‌ನಲ್ಲಿ ಮೆರವಣಿಗೆಯಲ್ಲಿ ಸಾಗಿದರು.

ಈ ವೇಳೆ ಕಣ್ಣು ಹಾಯಿಸಿದಷ್ಟು ದೂರ ಜನಸಾಗರ ಕಂಡು ಬಂತು. ರಸ್ತೆಯ ಇಕ್ಕೆಲಗಳ್ಳಲಿ ಸೇರಿದ ಜನಸ್ತೋಮ ಮೋದಿಗೆ ಜೈಕಾರ ಕೂಗಿದರು. ತೆರೆದ ವಾಹನದಲ್ಲಿ ಮಂಜು, ಪ್ರೀತಂ ಗೌಡ ಹಾಗೂ ಇತರೆ ನಾಯಕರು ಎನ್‌.ಆರ್‌.ವೃತ್ತದವರೆಗೆ ಮೆರವಣಿಗೆಯಲ್ಲಿ ಬಂದರು.

ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹರಿದು ಬಂದಿದ್ದರಿಂದ ನಿಯಂತ್ರಿಸಲು ಪೊಲೀಸರಿಗೆ ಹರಸಾಹಸವಾಗಿತ್ತು.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !