ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಜಯಂತಿಗೆ ಕೆರೆಯಲ್ಲಿ ಶ್ರಮದಾನ

ಹಲವೆಡೆ ಭಕ್ತರಿಗೆ ಅನ್ನ ಸಂತರ್ಪಣೆ, ಮಜ್ಜಿಗೆ ವಿತರಣೆ
Last Updated 7 ಮೇ 2019, 14:23 IST
ಅಕ್ಷರ ಗಾತ್ರ

ಹಾಸನ: ಬಸವ ಜಯಂತಿ ಅಂಗವಾಗಿ ನಗರದಲ್ಲಿ ಅನ್ನಸಂತರ್ಪಣೆ, ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಕೆರೆಯಲ್ಲಿ ಶ್ರಮದಾನ ಮಾಡಲಾಯಿತು.

ಅರಳೇಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ರುದ್ರಾಭಿಷೇಕ, ಪೂಜಾ ಕಾರ್ಯಕ್ರಮಗಳು ನಡೆದವು.

ಬಸವೇಶ್ವರ ಭಾವಚಿತ್ರವನ್ನು ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ನಂದಿ ಕೋಲು, ವೀರಗಾಸೆ ಕುಣಿತ, ಡೋಲು ಕುಣಿತ, ಮಂಗಳ ವಾದ್ಯ ತಂಡಗಳು ಪಾಲ್ಗೊಂಡು ಮೆರವಣಿಗೆ ಮೆರುಗು ಹೆಚ್ಚಿಸಿದವು. ಈ ವೇಳೆ ಭಕ್ತರಿಗೆ ಮಜ್ಜಿಗೆ ವಿತರಿಸಲಾಯಿತು.

ವೀರಶೈವ ಸಮಾಜದ ಅಧ್ಯಕ್ಷ ಬಿ.ಪಿ. ಐಸಾಮಿಗೌಡ, ಕಾರ್ಯದರ್ಶಿ ಭುವನಾಕ್ಷ, ಉಪಾಧ್ಯಕ್ಷ ದೊಡ್ಡವೀರೇಗೌಡ,
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್,ಮುಖಂಡರಾದ ಸಂಗಂ, ನಿರ್ದೇಶಕ ಮಲ್ಲಿಕ್,ಗಣಪತಿ ಸೇವಾ ಸಮಿತಿ ಅಧ್ಯಕ್ಷ ಎಚ್. ನಾಗರಾಜು, ಬಸವರಾಜೇಂದ್ರ ಶಿಕ್ಷಣ ಸಂಸ್ಥೆಯ ಲೋಕೇಶ್,ಕೀರ್ತಿಕುಮಾರ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎನ್. ನಾಗೇಶ್, ಸಾಮಾಜಿಕ ಕಾರ್ಯಕರ್ತ ಜಿ.ಓ. ಮಹಾಂತಪ್ಪ, ಆನಂದ್ ಪಟೇಲ್‌, ಕಿರಣ್, ಶೋಭನ್ ಬಾಬು ಭಾಗವಹಿಸಿದ್ದರು.

ನಗರದ ಹೇಮಾವತಿ ಪ್ರತಿಮೆ ಬಳಿ ಎಚ್.ಎಸ್‌.ಪ್ರಕಾಶ್‌ ಅಭಿಮಾನಿಗಳ ಸಂಘದ ವತಿಯಿಂದ ಬಸವೇಶ್ವರ ಜಯಂತಿ ಆಚರಿಸಲಾಯಿತು.

ಜೆಡಿಎಸ್ ಕಾರ್ಯಕರ್ತರು ಬಸವೇಶ್ವರ ಭಾವ ಚಿತ್ರಕ್ಕೆ ನಮನ ಸಲ್ಲಿಸಿ, ನಂತರ ಅನ್ನದಾಸೋಹ ಮಾಡಿದರು.
ಜಿಲ್ಲಾ ಪಂಚಾಯಿತಿ ‌ಸದಸ್ಯ ಎಚ್.ಎಸ್.ಸ್ವರೂಪ್, ವಕ್ತಾರ ಹೊಂಗೆರೆ ರಘು, ಮುಖಂಡರಾದ ಸುಮುಖ ರಘು, ಸಂಗಮ್, ಶಿವಣ್ಣ, ಅಗಿಲೆ ರಂಗೇಗೌಡ, ರಾಜಣ್ಣ, ಕಾಟಿಹಳ್ಳಿ ಶಿವಪ್ಪ, ವೆಂಕಟೇಶ್, ಸಂತೋಷ, ರವಿ, ಹರೀಶ, ಸೋಮು ಪಾಲ್ಗೊಂಡಿದ್ದರು.

ಹಸಿರು ಭೂಮಿ ಪ್ರತಿಷ್ಠಾನದ ವತಿಯಿಂದ ಬಸವ ಜಯಂತಿ ಅಂಗವಾಗಿ ದೊಡ್ಡಕೊಂಡಗೊಳದ ಕೆರೆಯಲ್ಲಿ ಶ್ರಮದಾನ ಮಾಡಲಾಯಿತು.

ಪ್ರತಿಷ್ಠಾನದ ಗೌರವಾಧ್ಯಕ್ಷ ಎಚ್.ಎಲ್‌.ನಾಗರಾಜು, ಸದಸ್ಯರು ಹಾಗೂ ಗ್ರಾಮಸ್ಥರೆಲ್ಲರೂ ಮಧ್ಯಾಹ್ನದವರೆಗೂ ಕೆರೆ ಸುತ್ತಲೂ ಬೆಳೆದಿದ್ದ ಪಾರ್ಥೇನಿಯಂ ಕಳೆಯನ್ನು ಕಿತ್ತು ಹಾಕಿ ಸ್ವಚ್ಛಗೊಳಿಸಿದರು. ಪ್ಲಾಸ್ಟಿಕ್‌, ಬಾಟಲ್‌ಗಳನ್ನು ಸಂಗ್ರಹಿಸಿ ಬೇರೆಡೆ ಸಾಗಿಸಿದರು. ಇದೇ ವೇಳೆ ಕೆರೆ ಏರಿ ಮೇಲೆ ಗಿಡ ನೆಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT