ಬಟ್ಟೆ ಅಂಗಡಿ ಎದುರು ಶವವಿಟ್ಟು ಪ್ರತಿಭಟನೆ

7
ನೌಕರ ಅನುಮಾನಾಸ್ಪದ ಸಾವು; ತನಿಖೆಗೆ ಆಗ್ರಹ

ಬಟ್ಟೆ ಅಂಗಡಿ ಎದುರು ಶವವಿಟ್ಟು ಪ್ರತಿಭಟನೆ

Published:
Updated:
Deccan Herald

ಹಾಸನ : ನಗರದ ಬಿ.ಎಂ ರಸ್ತೆಯಲ್ಲಿರುವ ಮಾಂಗಲ್ಯ ಸಿಲ್ಕ್ಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಪ್ರಕರಣ ಸಂಬಂಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮೃತನ ಸಂಬಂಧಿಕರು ಅಂಗಡಿ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು.

ನಗರದ ಹಾಲುವಾಗಿಲು ರಸ್ತೆಯ ಅಶೋಕ್ (32) ಮೃತ ನೌಕರ. ‘ಐದು ತಿಂಗಳಿಂದ ಮಾಂಗಲ್ಯ ಸಿಲ್ಕ್ಸ್ ನಲ್ಲಿ ರಾತ್ರಿ ಪಾಳಿ ಭದ್ರತಾ ಕೆಲಸ ಮಾಡುತ್ತಿದ್ದ ಅಶೋಕ್ ಶವ ಭಾನುವಾರ ಅಂಗಡಿ ಮುಂದೆ ಪತ್ತೆಯಾಗಿದೆ. ಇದನ್ನು ಕಂಡ ಸಾರ್ವಜನಿಕರು ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ.

‘ಕಿವಿ ಹಾಗೂ ಬಾಯಿಯಿಂದ ರಕ್ತ ಸೋರುತ್ತಿತ್ತು. ಬಲವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಅಂಗಡಿಯಲ್ಲಿನ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದರೆ ಶನಿವಾರ ರಾತ್ರಿ ಏನು ನಡೆದಿದೆ ಎಂಬುದು ತಿಳಿಯುತ್ತದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಪತ್ನಿ ರೂಪಾ, ಸಂಬಂಧಿಕರಾದ ಅನಿಲ್ ಹಾಗೂ ದಿನೇಶ್ ಆಗ್ರಹಿಸಿದರು.

ಪ್ರಕರಣದ ತನಿಖೆ ನಡೆಸುವುದಾಗಿ ನಗರ ಠಾಣೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಸುರೇಶ್ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !