ಬೇಲೂರು: ಇತಿಹಾಸ ಪ್ರಸಿದ್ಧ ಇಲ್ಲಿನ ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ನಡೆದಿವೆ. ಮಂಗಳವಾರ ದಿವ್ಯ ಬ್ರಹ್ಮರಥೋತ್ಸವ ಹಾಗೂ ಬುಧವಾರ ನಾಡಿನ ದಿವ್ಯರಥೋತ್ಸವ ಜರುಗಲಿವೆ.

ಶಾಸಕ ಎಚ್.ಕೆ.ಸುರೇಶ್, ಉಪ ವಿಭಾಗಾಧಿಕಾರಿ ಮಂಜುನಾಥ್, ತಹಶೀಲ್ದಾರ್ ಶ್ರೀಧರ್ ಕಂಕಣವಾಡಿ ನೇತೃತ್ವದಲ್ಲಿ, ದೇಗುಲದ ಅಧಿಕಾರಿಗಳು ಹಾಗೂ ಅರ್ಚಕರ ಸಹಭಾಗಿತ್ವದಲ್ಲಿ ಈ ಬಾರಿಯ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಮಂದಾಗಿದ್ದು, ಯಾವುದೇ ಸಮಸ್ಯೆ ಆಗದಂತೆ ನಿಗಾ ವಹಿಸಲಾಗಿದೆ.

ಪಟ್ಟಣದಲ್ಲೆಡೆ ಹಾಗೂ ಚನ್ನಕೇಶವ ದೇಗುಲಕ್ಕೆ ವಿದ್ಯುತ್ ಅಲಂಕಾರ ಮಾಡಲಾಗಿದೆ. ದೇಗುಲಕ್ಕೆ ಆಕರ್ಷಣಿಯವಾದ ಹೂವಿನ ಅಲಂಕಾರ ಮಾಡಲಾಗಿದೆ. ರಥವನ್ನು

ಕಲ್ಯಾಣಿಯನ್ನು ಸ್ಚಚ್ಛಗೊಳಿಸಿ ಶುದ್ಧ ಮಾಡಲಾಗಿದ್ದು, ಕಲ್ಯಾಣಿ ಬಳಿ ಸ್ನಾನಘಟ್ಟ ನಿರ್ಮಿಸಲಾಗಿದೆ. ಮಹಿಳೆಯರು ಉಡುಪು ಬದಲಾವಣೆ ಗೃಹಗಳನ್ನು ನಿರ್ಮಿಸಲಾಗಿದೆ. ವಿವಿಧ ಕಡೆಗಳಲ್ಲಿ ಮೊಬೈಲ್ ಶೌಚಾಲಯಗಳನ್ನು ಹಾಕಲಾಗಿದೆ. ಮೂಲಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ.

ಸೋಮವಾರದಿಂದ ಬುಧವಾರದವರೆಗೆ ದೇಗುಲದ ಹಿಂಭಾಗದ ಜಾಗದಲ್ಲಿ ಉಚಿತ ಪಾರ್ಕಿಂಗ್ ಮಾಡಲಾಗಿದೆ. ವಿಶೇಷ ದರ್ಶನಕ್ಕೆ ₹200 ಟಿಕೆಟ್ ನಿಗದಿಪಡಿಸಲಾಗಿದ್ದು, ಸಾಮಾನ್ಯ ದರ್ಶನ ಮತ್ತು ವಿಐಪಿ ದರ್ಶನಕ್ಕೆ ತೊಂದರೆ ಆಗದಂತೆ ಶಿಷ್ಟಾಚಾರ ಸಿಬ್ಬಂದಿ ನೇಮಿಸಲಾಗಿದೆ. ಕಲ್ಯಾಣಿಯಲ್ಲಿ ಸ್ನಾನ ಮಾಡಲು ಹೋಗುವವರು, ನೀರಿಗೆ ಜಿಗಿಯಬಾರದು ಎಂದು ತಹಶೀಲ್ದಾರ್ ಶ್ರೀಧರ್ ಕಂಕಣವಾಡಿ ಮನವಿ ಮಾಡಿದರು.

ಬಂದೋಬಸ್ತ್ಗಾಗಿ ಸುಮಾರು 350 ಪೊಲೀಸ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. 48 ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪಟ್ಟಣದ ವಿವಿಧ ಭಾಗಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ರಥ ಸಾಗುವ ನಾಲ್ಕು ಹಾಗೂ ಉತ್ಸವಗಳು ಸಾಗುವ ಎಂಟು ಬೀದಿಗಳಲ್ಲಿ ಸುಗಮ ಸಂಚಾರಕ್ಕಾಗಿ ವಾಹನಗಳ ಸಂಚಾರ, ಪಾರ್ಕಿಂಗ್ ಹಾಗೂ ಜಾತ್ರೆ ಸಮಯದಲ್ಲಿ ಹಾಕುವ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ರೇವಣ್ಣ ತಿಳಿಸಿದರು.

ಖಾಜಿಗಳ ಮುಜುರೆ (ವಂದನೆ)

ದೊಡ್ಡಮೆದೂರಿನ ಖಾಜಿಯವರುಬ್ರಹ್ಮ ರಥೋತ್ಸವದಂದು ದೇಗುಲದ ಆವರಣದಲ್ಲಿ ಚನ್ನಕೇಶವನಿಗೆ ಉರ್ದು ಭಾಷೆಯಲ್ಲಿ ವಂದನೆ ಸಲ್ಲಿಸುವ ವಾಡಿಕೆ ಇರುವ ಬಗ್ಗೆ ದೇಗುಲದ ಕೈಪಿಡಿಯಲ್ಲಿದೆ ಎನ್ನಲಾಗುತ್ತದೆ.

‘ಕಳೆದ ಬಾರಿಯಂತೆ ಈ ಬಾರಿಯೂ ದೇಗುಲದ ಆವರಣದಲ್ಲಿ ವಂದನೆ ಸಲ್ಲಿಸಲು ದೇಗುಲದ ಆಡಳಿತದಿಂದ ಆಹ್ವಾನ ಬಂದಿದ್ದು, ಮಂಗಳವಾರ ದೇವಸ್ಥಾನಕ್ಕೆ ಬಂದು ವಂದನೆ ಸಲ್ಲಿಸ ಲಾಗುತ್ತದೆ’ ಎಂದು ದೊಡ್ಡಮೆದೂರಿನ ಸೈಯ್ಯದ್ ಸಜ್ಜಾದ್ ಬಾಷಾ ಖಾದ್ರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.