ಬೇಲೂರು (ಹಾಸನ ಜಿಲ್ಲೆ): ಇಲ್ಲಿನ ಚನ್ನಕೇಶವ ದೇಗುಲದಲ್ಲಿ ಬುಧವಾರ ಸೂರ್ಯರಶ್ಮಿ ಚನ್ನಕೇಶವ ಮೂರ್ತಿಯ ಮೇಲೆ ಗೋಚರಿಸಿತು.

ಬೆಳಿಗ್ಗೆ 6.15ರಿಂದ 6.20ರವರೆಗೆ ಸೂರ್ಯನ ಕಿರಣಗಳು ಮಹಾದ್ವಾರದ ಮೂಲಕ ನೇರವಾಗಿ ಗರ್ಭಗುಡಿ ಪ್ರವೇಶಿಸಿ, ಮೂಲವಿಗ್ರಹವನ್ನು ಸ್ಪರ್ಶಿಸಿದವು. 6.42ಕ್ಕೆ ಕಿರಣಗಳು ನವರಂಗ ದ್ವಾರ ದಾಟಿ ಸಾಗಿದವು.

ಕಿರಣಗಳು ಸ್ಪರ್ಶಿಸಿದಾಗ ಮೂರ್ತಿ ಆಭರಣಗಳು ಕೆಂಪು ಬಣ್ಣದಲ್ಲಿ ಕಂಗೊಳಿಸಿದವು. ರಥೋತ್ಸವ ಮತ್ತು ನರಸಿಂಹ ಜಯಂತಿಯ ಕಾರಣಕ್ಕೆ ಉತ್ಸವಮೂರ್ತಿಯನ್ನು ಮೂಲ ವಿಗ್ರಹದ ಮುಂಭಾಗ ಇರಿಸಲಾಗಿತ್ತು. ಇದರಿಂದ ಸೂರ್ಯರಶ್ಮಿ ಉತ್ಸವ ಮೂರ್ತಿಯ ಪಾದಗಳ ಮೇಲೆ ಬಿದ್ದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-51-1426798260

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.