ಬೇಲೂರು: ಇಲ್ಲಿನ ಪುರಸಭೆಯಲ್ಲಿ 25 ವರ್ಷಗಳ ನಂತರ ಅಧಿಕಾರ ಹಿಡಿದ ಕಾಂಗ್ರೆಸ್, ಇದೀಗ ಗೆದ್ದು ಸೋತಂತಾಗಿದೆ. ಕಾಂಗ್ರೆಸ್ ಸದಸ್ಯ ಎ.ಆರ್. ಅಶೋಕ್, ಪಕ್ಷದ ವಿಪ್ ಉಲ್ಲಂಘನೆ ಮಾಡಿರುವುದು ದೃಢವಾಗಿದ್ದರಿಂದ ಅವರನ್ನು ಪುರಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.

ಎ.ಆರ್.ಅಶೋಕ್ ಕಾಂಗ್ರೆಸ್ ಪಕ್ಷದ ವಿಪ್ ಉಲ್ಲಂಘನೆ ಮಾಡಿರುವ ಬಗ್ಗೆ ಸ್ವಪಕ್ಷದ ಪುರಸಭೆ ಸದಸ್ಯ ಬಿ.ಗಿರೀಶ್, ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.

ಪುರಸಭೆಯು ಒಟ್ಟು 23 ಸದಸ್ಯರನ್ನು ಹೊಂದಿದ್ದು, ಅದರಲ್ಲಿ 17 ಕಾಂಗ್ರೆಸ್, 5 ಜೆಡಿಎಸ್, 1 ಬಿಜೆಪಿ ಸದಸ್ಯರನ್ನು ಹೊಂದಿವೆ. ಮೊದಲ ಅವಧಿಯಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಕಾಂಗ್ರೆಸ್ನ ಸಿ.ಎನ್. ದಾನಿ, ತೀರ್ಥಕುಮಾರಿ ಅಧ್ಯಕ್ಷರಾಗಿದ್ದರು. ಎರಡನೇ ಅವಧಿಯಲ್ಲಿ ಸಾಮಾನ್ಯ ಮಿಸಲಾತಿಯಲ್ಲಿ ಎ.ಆರ್.ಅಶೋಕ್, 2024ರ ಆಗಸ್ಟ್ 18 ರಂದು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಒಪ್ಪಂದದಂತೆ ಆರು ತಿಂಗಳ ನಂತರ ರಾಜೀನಾಮೆ ನೀಡಲಿಲ್ಲ ಎಂಬ ಗೊಂದಲಗಳು ಸೃಷ್ಟಿಯಾಗಿ ಅವಿಶ್ವಾಸ ನಿರ್ಣಯದವರೆಗೆ ತಲುಪಿತು.

2025ರ ಮೇ 2 ರಂದು ಪುರಸಭೆ ಉಪಾಧ್ಯಕ್ಷೆ ಉಷಾ ಸತೀಶ್ ಅಧ್ಯಕ್ಷತೆಯಲ್ಲಿ ಆಗಿನ ಪುರಸಭೆ ಅಧ್ಯಕ್ಷ ಎ.ಆರ್. ಅಶೋಕ್ ವಿರುದ್ಧ ಅವಿಶ್ವಾಸ ನಿರ್ಣಯ ಸಭೆ ಕರೆಯಲಾಗಿತ್ತು. ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜೆ. ನಿಶಾಂತ್, ಪಕ್ಷದ 17 ಸದಸ್ಯರಿಗೆ ವಿಪ್ ನೀಡಿದರು. ಅಂದು ಸಭೆಯಲ್ಲಿ ಗಲಭೆ ನಡೆದಿದ್ದರಿಂದ ಸಭೆ ಮೂಂದೂಡಿ, 2025ರ ಜೂನ್ 4 ರಂದು ಮತ್ತೆ ಅವಿಶ್ವಾಸ ನಿರ್ಣಯ ಸಭೆ ಕರೆಯಲಾಗಿತ್ತು. ಆಗಲೂ ವಿಪ್ ನೀಡಲಾಗಿತ್ತು. ಆದರೆ, ಈ ಸಭೆಗೆ ಎ.ಆರ್.ಅಶೋಕ್ ಗೈರು ಹಾಜರಾಗಿದ್ದರು.

ಪ್ರಕರಣದ ವಿಚಾರಣೆ ವೇಳೆ, ಎ.ಆರ್.ಅಶೋಕ್ ಅವರು ಆರೋಗ್ಯ ಸಮಸ್ಯೆಯಿಂದ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ವಾದಿಸಿದರು. ಆದರೆ, ಸಭೆಗೆ ಗೈರು ಹಾಜರಾಗಲು ಪಕ್ಷದಿಂದ ಪೂರ್ವಾನುಮತಿ ಪಡೆದಿಲ್ಲ. 15 ದಿನಗಳೊಳಗೆ ಗೈರು ಹಾಜರಾತಿಯನ್ನು ಪಕ್ಷ ಮನ್ನಿಸಿಲ್ಲ ಎಂಬುದು ದಾಖಲೆಗಳಿಂದ ದೃಢಪಟ್ಟಿದೆ. ಕಾಂಗ್ರೆಸ್ ಪಕ್ಷ ನೀಡಿದ ಸಚೇತಕ ಆದೇಶ ಕ್ರಮಬದ್ಧವಾಗಿದ್ದು, ಅದನ್ನು ಉಲ್ಲಂಘಿಸಿರುವುದು ಸಾಬೀತಾಗಿದೆ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ದೂರು ಸಲ್ಲಿಕೆ ಮತ್ತು ವಿಚಾರಣೆಯ ಎಲ್ಲ ಕ್ರಮಗಳು ಕಾನೂನುಬದ್ಧವಾಗಿವೆ. ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿನಿಯಮ 1987ರ ವಿಧಿಗಳ ಅನ್ವಯ, ಎ.ಆರ್. ಅಶೋಕ್ ಅವರನ್ನು ತಕ್ಷಣದಿಂದಲೇ ಪುರಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಕ್ಷದ ಚಿನ್ಹೆಯಡಿಯಲ್ಲಿ ಗೆದ್ದವರು ಪಕ್ಷಕ್ಕೆ ನಿಷ್ಠರಾಗಿ ಇರಬೇಕು. ಪಕ್ಷದ ಮುಂದೆ ಯಾರು ದೊಡ್ಡವರಲ್ಲ
ಎಂ.ಜೆ.ನಿಶಾಂತ್, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ

ರಾಜಕೀಯ ಪ್ರಭಾವದಿಂದ ತೀರ್ಪು ಬಂದಿದ್ದು, ಕಾನೂನು ಹೋರಾಟ ಮುಂದುವರಿಸಲಾಗುವುದು
ಎ.ಆರ್.ಅಶೋಕ್, ಅನರ್ಹಗೊಂಡ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.