ಬೇಲೂರು: ಪುರಸಭೆ ವ್ಯಾಪ್ತಿಯ ದಿನವಹಿ ಸುಂಕ ವಸೂಲಿ ಮಾಡಲು ಈಗಾಗಲೇ ನಡೆದಿರುವ ಹರಾಜನ್ನು ಒಪ್ಪುವ ವಿಚಾರದಲ್ಲಿ ಪುರಸಭೆ ಸದಸ್ಯರ ನಡುವೆ ಪರ, ವಿರೋಧದ ಚರ್ಚೆ ನಡೆಯಿತು.

ಇಲ್ಲಿನ ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷೆ ಉಷಾ ಸತೀಶ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಮುಖ್ಯಾಧಿಕಾರಿ ಬಸವರಾಜು ಟಾಕಪ್ಪ ಶಿಗ್ಗಾವಿ, ‘ಪುರಸಭೆಯ 2026-27 ನೇ ಸಾಲಿನ ದಿನವಹಿ ಸುಂಕ ವಸೂಲಿ ಈ ಬಾರಿ ₹4.96 ಲಕ್ಷಕ್ಕೆ ಹರಾಜಾಗಿದೆ. 2023-24 ರಲ್ಲಿ ₹11 ಲಕ್ಷ, 2024–25 ರಲ್ಲಿ ₹18 ಲಕ್ಷಕ್ಕೆ ಹರಾಜಾಗಿತ್ತು. ಆದರೆ ಈ ಬಾರಿ ಅತ್ಯಂತ ಕಡಿಮೆಗೆ ಬಿಡ್ ಆಗಿರುವುದರಿಂದ ಇದನ್ನು ರದ್ದು ಮಾಡಿ ಮರು ಟೆಂಡರ್ ಕರೆಯಬೇಕು’ ಎಂದು ತಿಳಿಸಿದರು.

ಇದಕ್ಕೆ ಜಗದೀಶ್, ಶ್ರೀನಿವಾಸ್ ಸೇರಿದಂತೆ ಬಹುತೇಕ ಸದಸ್ಯರು ವಿರೋಧ ವ್ಯಕ್ತಪಡಿಸಿ, ₹4.90ಲಕ್ಷಕ್ಕೆ ಟೆಂಡರ್ ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿದರು.

ಸದಸ್ಯೆ ತೀರ್ಥಕುಮಾರಿ ಮಾತನಾಡಿ, ‘2 ವರ್ಷಗಳಲ್ಲಿ ದಿನವಹಿ ಸುಂಕ ಹೆಚ್ಚಿನ ದರಕ್ಕೆ ಬಿಡ್ ಆಗಿದ್ದು, ಈ ಕಡಿಮೆಗೆ ಬಿಡ್ ಅಗಿದೆ. ಪುರಸಭೆ ಆದಾಯಕ್ಕೆ ನಷ್ಟ ಉಂಟಾಗುತ್ತದೆ. ಟೆಂಡರ್ ಅನ್ನು ರದ್ದುಪಡಿಸಿ ಮರು ಟೆಂಡರ್ ಮಾಡಬೇಕು’ ಎಂದು ಆಗ್ರಹಿಸಿದರು.

ಹಾಜರಿದ್ದ 14 ಸದಸ್ಯರಲ್ಲಿ 12 ಸದಸ್ಯರು ಒಪ್ಪಿಗೆ ಸೂಚಿಸಿದ್ದು, ಇಬ್ಬರು ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಸದಸ್ಯ ಅಶೋಕ್ ಮಾತನಾಡಿ, ‘25 ವರ್ಷಗಳಿಂದ ಆಶ್ರಯ ನಿವೇಶನ ನೀಡಲು ಸಾಧ್ಯವಾಗುತ್ತಿಲ್ಲ. ಆದರೆ ಇತ್ತೀಚೆಗೆ ರಾಯಾಪುರ ಗ್ರಾಮದಲ್ಲಿ 5 ಎಕರೆ, ಬಂಟೇನಹಳ್ಳಿ ಗ್ರಾಮದಲ್ಲಿ 3 ಎಕರೆ 18 ಗುಂಟೆ ಸರ್ಕಾರಿ ಜಮೀನಿನಲ್ಲಿ ನೂರಾರು ನಿವೇಶನಗಳನ್ನು ಅಭಿವೃದ್ದಿ ಪಡಿಸಲಾಗಿದೆ. ಇದಕ್ಕೆ ಕೆಲವು ಪುರಸಭೆ ಮಾಜಿ ಅಧ್ಯಕ್ಷರೇ ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಸಂಬಂಧಪಟ್ಟ ಅಧಿಕಾರಿಗಳಿಂದ ಪುರಸಭೆ ದಾಖಲೆಗಳನ್ನು ಅವರಿಗೆ ಒದಗಿಸಿ, ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಇದನ್ನು ತೆರವುಗೊಳಿಸುವಲ್ಲಿ ಮುಖ್ಯಾಧಿಕಾರಿ ಶಿಗ್ಗಾವಿ ವಿಫಲರಾಗಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು’ ಎಂದರು.

ಕೆಲವೇ ದಿನಗಳಲ್ಲಿ ರಥೋತ್ಸವ ಇದೆ. ಆದರೆ ದೇಗುಲ ಮುಂಭಾಗದಲ್ಲೇ ಹಳೆಯ ಮನೆ ಕೆಡವಿದ್ದರಿಂದ ಅಲ್ಲಿನ ಸ್ಥಳ ಕೊಳಕಾಗಿ ಕಾಣುತ್ತಿದೆ. ರಥೋತ್ಸವದ ಸಂದರ್ಭ ಅದನ್ನು ಮುಚ್ಚಲು ತಿಳಿಸಿ ಎಂದು ಸದಸ್ಯ ಆರ್. ಅಶೋಕ್ ಹೇಳಿದರು.

ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಬಸವರಾಜು ಟಾಕಪ್ಪ ಶಿಗ್ಗಾವಿ, ಮನೆ ಕೆಡುವುತ್ತಿರುವುದಕ್ಕೆ ಅನುಮತಿ ಪಡೆಯದ ಕಟ್ಟಡದ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಪುರಸಭೆ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-36-283103950

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.