ಮಲ್ಲೇಶ

ಬೇಲೂರು: ಇಲ್ಲಿನ ಚನ್ನಕೇಶವಸ್ವಾಮಿ ತೆಪ್ಪೋತ್ಸವವು ಗುರುವಾರ ರಾತ್ರಿ, ಸಕಲ ವೈಭವಗಳೊಂದಿಗೆ ಜರುಗಿತು.

ನಾಡ ರಥೋತ್ಸವದ ಮರುದಿನ ರಾತ್ರಿ ನಿಗದಿತ ಶುಭ ಮುಹೂರ್ತದಲ್ಲಿ ನಡೆಯುವ ತೆಪ್ಪೋತ್ಸವವು ಮನಮೋಹಕ ಹಾಗೂ ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಆಚರಣೆಯಾಗಿದ್ದು, ವಿಷ್ಣು ಸಮುದ್ರದ ಕಲ್ಯಾಣಿಯಲ್ಲಿ ನಡೆಯುತ್ತದೆ.

ಬಹಳ ಹಿಂದಿನಿಂದಲೂ ನಡೆಯುತ್ತಿದ್ದ ಈ ಆಚರಣೆಯು, 40 ವರ್ಷಗಳ ಕಾಲ ಸ್ಥಗಿತವಾಗಿತ್ತು. ನಂತರ 2012ರಿಂದ ಶಿಕ್ಷಕ ಬಾಳೆಹಣ್ಣು ರಮೇಶ್ ಅವರು ಸೇವಾರ್ಥವಾಗಿ ತೆಪ್ಪೋತ್ಸವ ನಡೆಸುತ್ತಿದ್ದಾರೆ.

ಸಂಜೆ ವೇಳೆಗೆ ಚನ್ನಕೇಶವ ಸ್ವಾಮಿ ಮತ್ತು ಶ್ರೀದೇವಿ-ಭೂದೇವಿ ಅಮ್ಮನವರ ಉತ್ಸವ ಮೂರ್ತಿಗಳಿಗೆ ವಿಶೇಷ ಪುಷ್ಪಾಲಂಕಾರ ಮಾಡಿ, ಮಂಗಲ ವಾದ್ಯಗಳು, ವೇದಘೋಷಗಳೊಂದಿಗೆ ದೇವರನ್ನು ದೇಗುಲದ ಅಷ್ಟಬೀದಿಗಳಲ್ಲಿ ಅಡ್ಡೆಯಲ್ಲಿ ಮೆರವಣಿಗೆ ನಡೆಸಿ, ಕಲ್ಯಾಣಿಗೆ ಕರೆದೊಯ್ಯಲಾಗುತ್ತದೆ.

ಅಡ್ಡೆ ಮೇಲಿರುವ ದೇವರ ಉತ್ಸವ ಮೂರ್ತಿಯನ್ನು ತೆಪ್ಪದ ಮಂಟಪದ ಒಳಗೆ ಕುಳ್ಳರಿಸಿ, ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸಭಟ್ ಮತ್ತು ನರಸಿಂಹಪ್ರೀಯ ಭಟ್ ಪೂಜೆ ಸಲ್ಲಿಸಿದರು. ಕಲ್ಯಾಣಿಯಲ್ಲಿ ತೆಪ್ಪವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿ, ನಂತರ ಕಲ್ಯಾಣಿಯ ಮಂಟಪದಲ್ಲಿ ದೇವರನ್ನು ಅಡ್ಡೆಯ ಜೊತೆ ಕುಳ್ಳಿರಿಸಿ, ಮೂಜೆ ಸಲ್ಲಿಸಿದ ನಂತರ ದೇವರನ್ನು ಪುನಃ ಮಂಟಪಕ್ಕೆ ಕುಳ್ಳಿರಿಸಿ, ದಡಕ್ಕೆ ತರಲಾಗುತ್ತದೆ.

ಕಲ್ಯಾಣಿಯಲ್ಲಿ ಕಬ್ಬಿಣದ 30 ಆಯಿಲ್ ಡ್ರಮ್ಗಳನ್ನು ಬಳಸಿ, ತೇಲುವಂತೆ ದೊಡ್ಡದಾದ ತೆಪ್ಪವನ್ನು ನಿರ್ಮಿಸಿ, ಅದರ ಮೇಲೆ ಸುಂದರವಾದ ಮಂಟಪವನ್ನು ನಿರ್ಮಿಸಿ, ವಿವಿಧ ಬಣ್ಣದ ಹೂವುಗಳು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ.

ಹಾಸನದ ಮೀನುಗಾರರಾದ ಬಸವರಾಜು ಮತ್ತು ಚಂದ್ರಪ್ಪ, ತೆಪ್ಪ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-36-1340582797

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.