ಬೇಲೂರು: ಪಟ್ಟಣದಲ್ಲಿ ಸಿಎನ್ಜಿ ಮತ್ತು ಆಟೊ ಗ್ಯಾಸ್ (ಕಂಪ್ರೆಸ್ಸ್ಡ್ ನ್ಯಾಚುರಲ್ ಗ್ಯಾಸ್) ದರದಲ್ಲಿ ನಿರಂತರ ಏರಿಕೆಯಾಗುತ್ತಿದೆ ಎಂದು ಆಟೊ ಚಾಲಕರು ಹಾಗೂ ಖಾಸಗಿ ಗ್ಯಾಸ್ ಬಂಕ್ ಸಿಬ್ಬಂದಿ ನಡುವೆ ತೀವ್ರ ವಾಗ್ವಾದ ನಡೆದು, ಆಟೊ ಚಾಲಕರು ಪ್ರತಿಭಟನೆ ನಡೆಸಿದರು. ಶಾಸಕ ಎಚ್.ಕೆ.ಸುರೇಶ್ ಮಧ್ಯಸ್ಥಿಕೆಯಿಂದ ದರ ಇಳಿಸಿದ ಪ್ರಸಂಗ ನಡೆಯಿತು.

ಹೊಯ್ಸಳ ಆಟೊ ಚಾಲಕರು ಮತ್ತು ಮಾಲೀಕರ ಸಂಘ ಅಧ್ಯಕ್ಷ ದೀಪು ಮಾತನಾಡಿ, ‘ಸಿಎನ್ಜಿ ಒಂದು ತಿಂಗಳಲ್ಲಿ ಆರು ಭಾರಿ ಹೆಚ್ಚಿಸಲಾಗಿದೆ. ಆಟೊ ಚಾಲಕರ ಜೀವನವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹಾಗೂ ಕಂಪನಿಗಳು ತಕ್ಷಣ ದರ ಇಳಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಘಟನಾ ಸ್ಥಳಕ್ಕೆ ಆಗಮಿಸಿದ್ದ ಶಾಸಕ ಎಚ್ .ಕೆ. ಸುರೇಶ್ ಕಂಪನಿಯ ಪ್ರಮುಖರ ಜೊತೆ ಚರ್ಚಿಸಿ, ‘ಈ ಹಿಂದೆ ನೀಡುತ್ತಿದ್ದ ದರವನ್ನು ನಿಗದಿಪಡಿಸಬೇಕು. ಸರ್ಕಾರದ ಹೊಸ ಸುತ್ತೋಲೆ ಬಂದ ನಂತರ ಹೊಸ ದರ ನಿಗದಿಪಡಿಸಿ ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ಹೊಸದರ ತೆಗೆದುಕೊಳ್ಳಬಾರದು’ ಎಂದು ಎಚ್ಚರಿಕೆ ನೀಡಿ, ಹಳೆ ದರವನ್ನು ನಿಗದಿಪಡಿಸಿದರು.

ಆಟೊ ಸಂಘದ ಉಪಾಧ್ಯಕ್ಷ ಶೌಕತ್, ಗೌರವಾಧ್ಯಕ್ಷ ಪುಟ್ಟರಾಜು, ಸದಸ್ಯರಾದ ರಘು, ಮಂಜುನಾಥ್, ಚಂದ್ರು, ಅರುಣ, ಆಲಿ, ಯೋಗೇಶ್, ಮಲ್ಲೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-36-314984461

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.