ಬೇಲೂರು: ಗೆಂಡೇಹಳ್ಳಿ ವಿದ್ಯುತ್ ಉಪಕೇಂದ್ರ ಉನ್ನತಿಕರಣವಾಗುತ್ತಿರುವುದಕ್ಕೆ ಎಐಸಿಸಿ ಸದಸ್ಯ ಬಿ.ಶಿವರಾಂ ಅವರೇ ಕಾರಣ. ಈ ಬಗ್ಗೆ ರೈತ ಸಂಘದ ಪ್ರಮುಖರು ಅರಿಯಬೇಕು ಎಂದು ಕೆಡಿಪಿ ಸದಸ್ಯ ನಂದೀಶ್ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಒಬ್ಬ ರೈತನಾಗಿ, ರೈತಸಂಘ ಹಾಗೂ ಮುಖಂಡರ ಮೇಲೆ ನನಗೆ ಗೌರವವಿದೆ. ಆದರೆ, ರೈತ ಸಂಘದವರು ಕೆಲ ದಿನಗಳ ಹಿಂದೆ ಸೆಸ್ಕ್ ಕಚೇರಿ ಆವರಣದಲ್ಲಿ ನಡೆಸಿದ ಪ್ರತಿಭಟನೆಯ ಸಂದರ್ಭ ಗೆಂಡೇಹಳ್ಳಿ ವಿದ್ಯುತ್ ಉಪಕೇಂದ್ರ ಉನ್ನತಿಕರಣವಾಗುತ್ತಿರುವುದರಲ್ಲಿ ಬಿ.ಶಿವರಾಂ ಪಾತ್ರವಿಲ್ಲ ಎಂದು ಹೇಳಿಕೆ ನೀಡಿರುವುದು ಬೇಸರದ ಸಂಗತಿ. 8 ಮೆಗಾವಾಟ್ ಸಾಮರ್ಥ್ಯ ಹೊಂದಿದ್ದ ಗೆಂಡೇಹಳ್ಳಿ ವಿದ್ಯುತ್ ಕೇಂದ್ರವನ್ನು ₹4.75 ಕೋಟಿ ಅನುದಾನದಲ್ಲಿ 20 ಮೆಗಾವಾಟ್ ಸಾಮರ್ಥ್ಯಕ್ಕೆ ಹೆಚ್ಚಿಸಲು ಬಿ.ಶಿವರಾಂ ಶ್ರಮಿಸಿದ್ದು, ಇದಕ್ಕೆ ಕಾರ್ಯಾದೇಶ ಸಿಕ್ಕಿದೆ. ಟೆಂಡರ್ ಆಗಬೇಕಿದೆ. ಬಿಕ್ಕೋಡಿನಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಲು ₹12.50 ಕೋಟಿ ಅನುದಾನ ತರಲಾಗಿದೆ’ ಎಂದರು.

ಪುರಸಭೆಯಲ್ಲಿ ಸ್ಥಳೀಯ ನಾಯಕರು ಮತ್ತು ಕಾಂಗ್ರೆಸ್ ಸದಸ್ಯರ ನಡುವಿನ ವೈಯಕ್ತಿಕ ಪ್ರತಿಷ್ಠೆಯಿಂದ, ಪಕ್ಷ ಸರಿಯಾಗಿ ಅಧಿಕಾರ ನಡೆಸಲು ಕಷ್ಟವಾಗುತ್ತಿದೆ ಎಂದು ನಂದೀಶ್ ದೂರಿದರು.

ಕೆಡಿಪಿ ಸದಸ್ಯೆ ಜ್ಯೋತಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ನಿಶ್ಚಲ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-36-1831639530

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.