ಬೇಲೂರು: ಪಟ್ಟಣದ ಹೊಸನಗರದಲ್ಲಿ ಒತ್ತುವರಿಯಾಗಿರುವ ತನ್ನ ಜಾಗವನ್ನು ಬಿಡಿಸಿಕೊಡಬೇಕೆಂದು ಆಗ್ರಹಿಸಿ ಮಧು ಹಾಗೂ ಅವರ ಕುಟುಂಬಸ್ಥರು ಕೆಆರ್ಎಸ್ ಪಕ್ಷದ ನೇತೃತ್ವದಲ್ಲಿ ಬುಧವಾರ ಇಲ್ಲಿನ ಪುರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು.

ಮಧು ಮಾತನಾಡಿ, ನಮ್ಮ ತಾಯಿ ಪದ್ಮ ಅವರಿಗೆ ಆಶ್ರಯ ಯೋಜನೆಯಡಿ ಹೊಸನಗರದಲ್ಲಿ 422ನೇ ನಿವೇಶನ ಮಂಜೂರಾಗಿತ್ತು. ಆ ಜಾಗದಲ್ಲಿ ಸಣ್ಣ ಮನೆ ನಿರ್ಮಿಸಿಕೊಂಡು ಕೆಲಕಾಲ ವಾಸವಾಗಿದ್ದು, ನಂತರ 2012ರಲ್ಲಿ ಹೊಸ ಮನೆ ನಿರ್ಮಿಸುವ ಉದ್ದೇಶದಿಂದ ಹಳೆಯ ಮನೆಯನ್ನು ತೆರವುಗೊಳಿಸಿ ಫೌಂಡೇಶನ್ ಹಾಕಲಾಗಿದೆ. ಆದರೆ ಪಕ್ಕದ ನಿವೇಶನದ ಮಾಲೀಕರು ನಮ್ಮ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ , ಕಳೆದ ಒಂದು ವರ್ಷದಿಂದ ಈ ಬಗ್ಗೆ ಪುರಸಭೆಗೆ ದೂರು ನೀಡಿದ್ದರೂ ಸಹ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಕೆಆರ್ಎಸ್ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಆದೇಶ್ ಮಾತನಾಡಿ, ಯಾರೇ ಪ್ರಭಾವಿಗಳಾಗಿರಲಿ, ಮತ್ತೊಬ್ಬರ ಜಾಗವನ್ನು ಒತ್ತುವರಿ ಮಾಡುವ ಹಕ್ಕಿಲ್ಲ. ಪುರಸಭೆ ಕಂದಾಯ ವಸೂಲಿ ಮಾಡುತ್ತಿರುವುದರಿಂದ, ಜನರ ಜಾಗ ರಕ್ಷಣೆ ಮಾಡುವ ಜವಾಬ್ದಾರಿಯೂ ಅವರದ್ದೇ ಅಗಿದೆ. ಒಂದು ವರ್ಷದಿಂದ ಜಾಗ ಕಳೆದುಕೊಂಡವರು ಪುರಸಭೆ ಕಚೇರಿಗೆ ಅಲೆದಾಡುತ್ತಿದ್ದರೂ ಸಮಸ್ಯೆ ಬಗೆಹರಿಸದಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಡವರು ನ್ಯಾಯ ಕೇಳಿಕೊಂಡು ಬಂದಾಗ ಸಹಾಯ ಮಾಡಲಾಗದಿದ್ದರೆ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಏಕೆ ಬೇಕು ಎಂದು ಪ್ರಶ್ನಿಸಿದರು. ಕೆಆರ್ಎಸ್ ಪಕ್ಷದ ಜಿಲ್ಲಾಘಟಕದ ಕಾರ್ಯದರ್ಶಿ ಸಚಿನ್, ಸಾಮಾಜಿಕ ಹೋರಾಟಗಾರ ಡಿ.ಕೆ.ವೆಂಕಟೇಶ್, ಮಾನವ ಹಕ್ಕುಗಳ ಹೋರಾಟ ಸಮಿತಿಯ ತಾಲ್ಲೂಕು ಘಟಕದ ಅದ್ಯಕ್ಷ ಐ.ಎನ್.ಅರುಣ್ ಕುಮಾರ್, ಮಂಜು, ಪದ್ಮ, ರಂಜಿತಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-36-1577385510

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.