ಬೇಲೂರು: ಇಲ್ಲಿನ ಹರ್ಡೀಕರ್ ವೃತ್ತದಲ್ಲಿ ತಾಲ್ಲೂಕು ಪಂಚಾಯಿತಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಗೂಡಂಗಡಿಗಳನ್ನು ಮಂಗಳವಾರ ತೆರವುಗೊಳಿಸಲಾಯಿತು.

ಪೋಲಿಸ್ ಬಂದೋಬಸ್ತ್ನಲ್ಲಿ ತಾಲ್ಲೂಕು ಪಂಚಾಯಿತಿ ನೌಕರರು ಹಾಗೂ ಜೆಸಿಬಿ ಯಂತ್ರ ಬಳಸಿ 8 ಅಂಗಡಿ ತೆರವುಗೊಳಿಸಲಾಯಿತು.

ಈ ವೇಳೆ ಕೆಲ ಅಂಗಡಿ ಮಾಲೀಕರು ‘ನಾವು ಪುರಸಭೆಯವರಿಗೆ ಹಣ ನೀಡಿ ಶೆಡ್ ನಿರ್ಮಿಸಿಕೊಂಡಿದ್ದೇವೆ, ನಮ್ಮ ಜೀವನಕ್ಕೆ ಆಧಾರವಾಗಿರುವ ಅಂಗಡಿಗಳನ್ನು ತೆಗೆಯುವುದಿಲ್ಲ, ನೀವು ನಮಗೆ ಯಾವುದೇ ನೋಟಿಸ್ ನೀಡದೇ ಏಕಾಏಕಿ ಬಂದಿದ್ದೀರಿ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕುಮಾರ್ ಜೊತೆ ವಾಗ್ವಾದ ನಡೆಸಿದರು.

‘ತಾಲ್ಲೂಕು ಪಂಚಾಯಿತಿಗೆ ಸೇರಿದ ಜಾಗದಲ್ಲಿ ಯಾವುದೇ ದಾಖಲಾತಿ ಇಲ್ಲದೆ, ನೆಲ ಬಾಡಿಗೆ ಇಲ್ಲದೆ ಪೆಟ್ಟಿಗೆ ಅಂಗಡಿಗಳನ್ನು ನಿರ್ಮಿಸಿಕೊಂಡವರಿಗೆ ತೆರವು ಮಾಡಿಕೊಡುವಂತೆ ಸಾಕಷ್ಟು ಬಾರಿ ಹೇಳಲಾಗಿತ್ತು, ತೆರವು ಮಾಡದ ಕಾರಣ, ಪ್ರಕಟಣೆ ನೀಡಿ 8 ಅಂಗಡಿಗಳನ್ನು ತೆರವುಗೊಳಿಸಲಾಗಿದ್ದು, ಉಳಿದ ನಾಲ್ಕು ಅಂಗಡಿ ಯವರು ಜಿಲ್ಲಾ ನ್ಯಾಯಾಲಯದಲ್ಲಿ ತಡೆಯಾಜ್ಙೆ ತಂದಿದ್ದು, ಜೂನ್ 4ರಂದು ನ್ಯಾಯಾಲಯಕ್ಕೆ ತೆರಳಿ ಮಾಹಿತಿ ನೀಡಿ ಉಳಿದ 4 ಶೆಡ್ಗಳನ್ನು ತೆರವುಗೊಳಿಸಿ, ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುವುದು’ ಎಂದು ತಾ.ಪಂ ಇಒ ಸತೀಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ತಾ.ಪಂ ನೌಕರರಾದ ತೋಪೇಗೌಡ, ನಂದಕುಮಾರ್, ಪಿಡಿಒಗಳಾದ ಸಂತೋಷ್, ನಾಗಭೂಷಣ್, ಅವಿನಾಷ್, ಹರ್ಷ, ರಘುನಾಥ್, ಸಬ್ ಇನ್ಸ್ಪೆಕ್ಟರ್ ಶಿವನಗೌಡ ಪಾಟೀಲ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-36-178247817

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.