ಬೇಲೂರು: ತಾಲ್ಲೂಕಿನ ಮಾದಿಹಳ್ಳಿಯ ಋಗ್ವೇದ ರೆಸಾರ್ಟ್ನಲ್ಲಿ ನಿರ್ಮಿಸಿರುವ ಗ್ರಂಥಾಲಯವನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಗುರುವಾರ ಉದ್ಘಾಟಿಸಿದರು.

ಋಗ್ವೇದ ರೆಸಾರ್ಟ್ ಮಾಲೀಕ ಡಿಶಾಂತ್ ಕುಮಾರ್, 15 ಬಡ ಕುಟುಂಬ ಗಳಿಗೆ ಉಚಿತವಾಗಿ ನೀಡುತ್ತಿರುವ ನಿವೇಶನ ದಾಖಲಾತಿ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಶಾಸಕ ಎಚ್.ಕೆ. ಸುರೇಶ್ ಮಾತನಾಡಿ, ಪುನೀತ್ ರಾಜ್ಕುಮಾರ್ ನಿಧನದ ದಿನವೇ ಕ್ಷೇತ್ರದಲ್ಲಿ ನಡೆಯಬೇಕಿದ್ದ ₹127 ಕೋಟಿ ರಣಘಟ್ಟ ಯೋಜ ನೆಯ ಕಾರ್ಯಕ್ರಮವನ್ನು ಮುಂದೂಡಲಾಗಯಿತು. ಅವರ ಅಗಲಿಕೆ ನಾಡನ್ನು ದುಃಖದಲ್ಲಿ ಮುಳು ಗಿಸಿತ್ತು. ಕ್ಷೇತ್ರದಲ್ಲೂ ಅಪಾರ ಅಭಿಮಾನಿಗಳಿದ್ದಾರೆ ಎಂದರು.

ಋಗ್ವೇದ ರೆಸಾರ್ಟ್ ಕೇವಲ ರೆಸಾರ್ಟ್ ಅಲ್ಲ. ಗ್ರಂಥಾಲಯ ಹಾಗೂ ಆರೋಗ್ಯ ಸೇವೆಗಳನ್ನು ಒಳಗೊಂಡ ಸಾಮಾಜಿಕ ಸೇವಾ ಕೇಂದ್ರವಾಗಲಿದೆ ಎಂದು ತಿಳಿಸಿದರು.

ಋಗ್ವೇದ ರೆಸಾರ್ಟ್ ಮಾಲೀಕ ಡಿಶಾಂತ್ ಕುಮಾರ್, ಸಾಹಿತಿ ಚಟ್ನಳ್ಳಿ ಮಹೇಶ್, ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜು, ಬ್ಯಾಂಕ್ ವ್ಯವಸ್ಥಾಪಕಿ ಮಮತಾ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-36-1573488611

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.