ಬೇಲೂರು: ಮಂಗಳವಾರ ಅಂಬೇಡ್ಕರ್ ಜಯಂತಿ ಅಂಗವಾಗಿ ತಾಲ್ಲೂಕು ಕಚೇರಿ ಆವರಣದ ಅಂಬೇಡ್ಕರ್ ಪುತ್ಥಳಿಗೆ ಅಚ್ಚುಕಟ್ಟಾಗಿ ಅಲಂಕಾರ ಮಾಡದೇ ತಹಶೀಲ್ದಾರ್ ಅವಮಾನ ಮಾಡಿದ್ದು, ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಛಲವಾದಿ ಮಹಾಸಭಾ ತಾಲ್ಲೂಕು ಘಟಕ ಹಾಗೂ ದಲಿತ ಪರ ಸಂಘಟನೆಗಳ ವತಿಯಿಂದ ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟಿಸಲಾಯಿತು.

ಮಂಗಳವಾರ ಪ್ರತಿಭಟನೆ ನಡೆಸಿದ್ದ ಪ್ರತಿಭಟನಕಾರರು ಬುಧವಾರ ಪ್ರತಿಭಟನೆ ಮುಂದುವರಿಸಿ, ತಹಶೀಲ್ದಾರ್ ವಿರುದ್ಧ ಧಿಕ್ಕಾರ ಕೂಗಿದರು.

ಛಲವಾದಿ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ತೆಂಡೇಕೆರೆ ರಮೇಶ್ ಮಾತನಾಡಿ, ಅಂಬೇಡ್ಕರ್ ಜಯಂತಿಯಂದು ಅಂಬೇಡ್ಕರ್ ಅವರಿಗೆ ಅಗೌರವ ತೋರಿರುವ ಅಧಿಕಾರಿಗಳು ಕೂಡಲೇ ಇಲ್ಲಿಂದ ಹೋಗಿ. ನ್ಯಾಯ ದೊರಕಿಸಿ ಕೊಡಬೇಕು ಎಂದರು.

ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ತಹಶೀಲ್ದಾರ್ ಅವರು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿ, ತಾಲ್ಲೂಕಿನ 70ಸಾವಿರ ದಲಿತರಿಗೆ ಅವಮಾನ ಮಾಡಿದ್ದಾರೆ. ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಮುಖಂಡ ಎಂ.ಆರ್.ವೆಂಕಟೇಶ್ ಮಾತನಾಡಿ, ಮಂಗಳವಾರ ನಡೆದಿರುವ ಘಟನೆ ತಾಲ್ಲೂಕಿನ ಜನತೆ ತಲೆತಗ್ಗಿಸುವ ವಿಚಾರ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಸರಿಯಾಗಿ ಆಯೋಜನೆ ಆಗಿದೆಯೇ ಎಂಬುದನ್ನು ಶಾಸಕರು ತಮ್ಮ ಆಪ್ತಸಹಾಯಕರ ಮೂಲಕ ತಿಳಿದುಕೊಳ್ಳಬಹುದಾಗಿತ್ತು. ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ, ದಂಧೆ ನಡೆಯುತ್ತಿದೆ ಎಂದು ಶಾಸಕರು ಹೇಳಿದ್ದಾರೆ. ಅದನ್ನು ನಿಲ್ಲಿಸುವ ಶಕ್ತಿ ಯಾರಿಗಿದೆ? ಭ್ರಷ್ಟಾಚಾರ ಮಾಡುತ್ತಿರುವವರನ್ನು ಅಮಾನತು ಮಾಡಿಸಿ. ಅದನ್ನು ಬಿಟ್ಟು ನೀವು ಪ್ರತಿಭಟನೆಗೆ ಕೂರುವುದು ನಿಮ್ಮ ಸಾಮರ್ಥ್ಯ ತೋರುತ್ತಿದ್ದು, ಅಸಮರ್ಥ ಶಾಸಕರು ಎಂಬುದನ್ನು ಎತ್ತಿ ತೋರುತ್ತದೆ ಎಂದರು.

ಬಿಜೆಪಿ ಮುಖಂಡ ಪರ್ವತಯ್ಯ ಮಾತನಾಡಿ, ಪೂರ್ವಭಾವಿ ಸಭೆಯಲ್ಲಿ ಬಂದಿದ್ದವರಿಗೆ ವಿಚಾರ ಗೊತ್ತಿರುತ್ತದೆ. ಬಂದಿಲ್ಲದವರಿಗೆ ಗೊತ್ತಿರುವುದಿಲ್ಲ. ಶಾಸಕರು ಮತ್ತು ಪಕ್ಷದ ವಿಚಾರವಾಗಿ ಮಾತನಾಡುವ ವೇದಿಕೆ ಇದಲ್ಲ. ಇದು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದವರ ವಿರುದ್ದ ನಡೆಯುತ್ತಿರುವ ಪ್ರತಿಭಟನೆಯಾಗಿದ್ದು, ಇದು ಪಕ್ಷಾತೀತವಾಗಿರಬೇಕು. ಇಲ್ಲವಾದಲ್ಲಿ ನಾವು ಸಹ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದಂತಾಗುತ್ತದೆ ಎಂದರು.

ದಲಿತ ಮುಖಂಡ ಎಂ.ಜಿ. ನಿಂಗರಾಜು ಮಾತನಾಡಿ, ಪೂರ್ವಭಾವಿ ಸಭೆಯಲ್ಲಿ ಅಂಬೇಡ್ಕರ್ ಪ್ರತಿಮೆಗಳಿಗೆ ಅದ್ದೂರಿ ಅಲಂಕಾರ ಮಾಡುವಂತೆ ಶಾಸಕರು ತಿಳಿಸಿದ್ದರು. ಹಿಂದಿನ ತಹಶೀಲ್ದಾರರು ಅದ್ದೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದರು. ಆದರೆ ಈ ತಹಶೀಲ್ದಾರ್ ಆಯೋಜನೆಯಲ್ಲಿ ವಿಫಲರಾಗಿದ್ದಾರೆ. ಇದರಲ್ಲಿ ಶಾಸಕರು ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ನ್ಯೂನತೆ ಸಹ ಇದೆ. ತಹಶೀಲ್ದಾರ್ ಅವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದರು.

ನಂತರ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಿ ಪ್ರತಿಭಟನೆ ಕೈಬಿಡಲಾಯಿತು. ಹಿಮ್ಸ್ ಆಸ್ಪತ್ರೆಯ ಸಮಿತಿ ಸದಸ್ಯ ರವೀಶ್, ಜೆಡಿಎಸ್ ನಾಯಕಿ ಇಂದಿರಾ ಧರ್ಮಪ್ಪ, ಮುಖಂಡರಾದ ದೊರೆಸ್ವಾಮಿ, ಲೊಕೇಶ್, ದೇವರಾಜ್, ಅಶೋಕ್, ಎಂ.ಜಿ. ನಿಂಗರಾಜು, ವಸಂತ, ಮಧು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-36-1840720515

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.