ಬೇಲೂರು: ತಾಲ್ಲೂಕಿನ ಕಾನಳ್ಳಿ ಅರಣ್ಯ ಪ್ರದೇಶದಲ್ಲಿದ್ದ ಒಂಟಿ ಕೋರೆ ಕಾಡಾನೆಯನ್ನು ಶನಿವಾರ ಸೆರೆ ಹಿಡಿಯಲಾಯಿತು. ಜಿಲ್ಲೆಯಲ್ಲಿ ಇದೇ ಮೊದಲಿಗೆ ಕಾರ್ಯಾಚರಣೆಗೆ ಶ್ವಾನದಳ ಬಳಕೆ ಮಾಡಲಾಗಿದೆ.

ಏ.12ರಂದು ಕಣಗುಪ್ಪೆಯಲ್ಲಿ ರಾಜಶೆಟ್ಟಿ ಅವರನ್ನು ಬಲಿ ಪಡೆದಿದ್ದ ಕಾಡಾನೆ, ಏ.15ರಂದು ಸೆರೆ ಸಿಕ್ಕಿತ್ತಾದರೂ, ಮತ್ತೆ ಪರಾರಿಯಾಗಿತ್ತು. ಶುಕ್ರವಾರ ಕಾರ್ಯಾಚರಣೆ ನಡೆಸಿದರೂ ಪತ್ತೆ ಆಗಿರಲಿಲ್ಲ.

ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆ ಪತ್ತೆಗೆ, ವಿಶೇಷ ತರಬೇತಿ ಪಡೆದಿದ್ದ ಬಂಡಿಪುರ ‘ಈಶ’ ಹೆಸರಿನ ಶ್ವಾನದ ನೆರವು ಪಡೆದರು. ಶನಿವಾರ ಬೆಳಿಗ್ಗೆ ಕಾಡಾನೆ ನೆಲೆಯನ್ನು ಶ್ವಾನದ ಸಹಾಯದಿಂದ ಪತ್ತೆ ಮಾಡಿದರು.

ಒಂಟಿ ಕೋರೆ ಆನೆ, ಇನ್ನೊಂದು ದೈತ್ಯ ಕಾಡಾನೆ ‘ಕ್ಯಾಪ್ಟನ್’ ಜೊತೆಯಲ್ಲಿಯೇ ಇತ್ತು. ಕುಮ್ಕಿ ಆನೆಗಳೊಂದಿಗೆ ತೆರಳಿದ ಪಶು ವೈದ್ಯರು ಅರಿವಳಿಕೆ ಚುಚ್ಚುಮದ್ದು ನೀಡಿದರು.

ನಂತರ ಎರಡೂ ಕಾಡಾನೆಗಳನ್ನು ಬೇರೆ ಮಾಡಲಾಯಿತು. ಒಂಟಿ ಕೋರೆ ಕಾಡಾನೆ ಸ್ವಲ್ಪ ದೂರ ಓಡಿ, ಪ್ರಜ್ಞೆ ತಪ್ಪಿತ್ತು. ಕುಮ್ಕಿ ಆನೆಗಳು ಕಾಡಾನೆಯನ್ನು ಸುತ್ತುವರಿದವು. ಇಟಿಎಫ್ ಹಾಗೂ ಅರಣ್ಯ ಸಿಬ್ಬಂದಿ ಬಳಿಕ ಸೆರೆ ಹಿಡಿದ ಕಾಡಾನೆಯನ್ನು ಲಾರಿ ಮೂಲಕ ಸ್ಥಳಾಂತರಿಸಿದರು.

‘ಡಿಸಿಎಫ್ ಸೌರಭ್ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು ಭಾನುವಾರ ಎರಡು ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲಾಗುವುದು’ ಎಂದು ಆರ್ಎಫ್ಒ ಯತೀಶ್ ಅವರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-51-1378761416

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.