ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್‌ಗೆ ಬೆಂಕಿ ಹಚ್ಚಿ ಪರಾರಿಯಾದ ಭೂಪ

ವಿದ್ಯಾರ್ಥಿನಿಯರ ಬಟ್ಟೆ ಧರಿಸಿದ ವಿಕೃತ ಕಾಮಿ
Last Updated 7 ಡಿಸೆಂಬರ್ 2018, 12:09 IST
ಅಕ್ಷರ ಗಾತ್ರ

ಹಾಸನ: ಇಲ್ಲಿನ ವಿದ್ಯಾನಗರದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ವಿಕೃತ ಕಾಮುಕನೊಬ್ಬ ಪ್ರವೇಶಿಸಿ ಆತಂಕ ಸೃಷ್ಟಿಸಿದ್ದಾನೆ.

ಶುಕ್ರವಾರ ಮಧ್ಯರಾತ್ರಿ 2.40ರ ಸುಮಾರಿಗೆ ಹಾಸ್ಟೆಲ್ ನ ಟೆರೇಸ್ ಪ್ರವೇಶಿಸಿ ಅಲೆದಾಡುವ ಈತ, ಹೆಚ್ಚು ಕಡಿಮೆ ಅರ್ಧ ಗಂಟೆ ಅಲ್ಲೇ ಕಾಲ ಕಳೆಯುತ್ತಾನೆ. ಹಾಸ್ಟೆಲ್ ಒಳ ಹೋಗಲು ಸಾಧ್ಯವಾಗದೇ ಇದ್ದಾಗ ವಿದ್ಯಾರ್ಥಿನಿಯರ ಬಟ್ಟೆ ಧರಿಸಿ ಪರಾರಿಯಾಗಿದ್ದಾನೆ.

ಬಳಿಕ ಕೆಳಗಿಳಿದು ಹಾಸ್ಟೆಲ್ ಕಟ್ಟಡದ ಪಕ್ಕದ ಮನೆ ಮುಂದೆ ನಿಲ್ಲಿಸಿದ್ದ ಸುನಿಲ್‌ ಎಂಬುವರ ಬೈಕ್ ಕಳವಿಗೂ ಯತ್ನಿಸಿ ಅದು, ಸ್ಟಾರ್ಟ್ ಆಗದೇ ಇದ್ದಾಗ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಈ ಎಲ್ಲಾ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬಡಾವಣೆ ಪೊಲೀಸರು ಹಾಗೂ ಎಸ್ಪಿ ಎ.ಎನ್‌.ಪ್ರಕಾಶ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದೇ ರೀತಿ 2017ರ ಡಿ. 7ರ ಮುಂಜಾನೆ ಹಾಸನ ಹೊರವಲಯದಲ್ಲಿರುವ ಪಶು ವೈದ್ಯಕೀಯ ಮಹಿಳಾ ಹಾಸ್ಟೆಲ್ ಗೆ ಕಾಮುಕನೊಬ್ಬ ನುಗ್ಗಿ ಆತಂಕ ಸೃಷ್ಟಿಸಿದ್ದ. ಆತ ಯಾರೆಂಬುದು ಎಂಬುದು ಈವರೆಗೂ ಗೊತ್ತಾಗಿಲ್ಲ. ಈ ನಡುವೆ ಮತ್ತೊಬ್ಬ ಅಪರಿಚಿತ ಅದೇ ರೀತಿಯ ಕಾಟ ನೀಡಿರುವುದು ಸಹಜವಾಗಿಯೇ ಕಳವಳ ಹೆಚ್ಚು ಮಾಡಿದೆ.

‘ಈ ಹಿಂದೆ ನಡೆದ ಹಾಗೂ ಇಂದು ನಡೆದಿರುವ ಘಟನೆಗೂ ಸಾಮ್ಯತೆ ಇದ್ದು, ಅದೇ ವ್ಯಕ್ತಿ ಇರಬಹುದು ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಹೆಣ್ಣು ಮಕ್ಕಳ ಒಳ ಉಡುಪುಗಳನ್ನು ಧರಿಸುವುದರ ಜತೆಗೆ ಬೈಕ್‌ ಸಹ ಸುಟ್ಟು ಹಾಕಿದ್ದಾನೆ. ಇದೆಲ್ಲಾ ಗಮನಿಸಿದರೆ ಆತ ಮಾನಸಿಕ ಅಸ್ವಸ್ಥನಂತೆ ಕಾಣುತ್ತಾನೆ. ಸದ್ಯದಲ್ಲೇ ಆರೋಪಿಯನ್ನು ಬಂಧಿಸಲಾಗುವುದು’ ಎಂದು ಎಸ್‌ಪಿ ಪ್ರಕಾಶ್‌ ಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT