ಹಾಸನ: ಬಿಜೆಪಿಗೆ ಸೇರಿದ ₹2ಲಕ್ಷ ನಗದು ವಶ

ಮಂಗಳವಾರ, ಏಪ್ರಿಲ್ 23, 2019
33 °C

ಹಾಸನ: ಬಿಜೆಪಿಗೆ ಸೇರಿದ ₹2ಲಕ್ಷ ನಗದು ವಶ

Published:
Updated:

ಹಾಸನ: ಬಿಜೆಪಿ ಬೆಂಬಲಿಗರ ಬಳಿ ದಾಖಲೆ ಇಲ್ಲದ ₹ 2 ಲಕ್ಷ ನಗದು ಪತ್ತೆಯಾಗಿದೆ.

ಈ ಸಂಬಂಧ ಬಿಜೆಪಿ ಅಭ್ಯರ್ಥಿ ಮಂಜು ಬೆಂಬಲಿಗರಾದ ಕಾಂಗ್ರೆಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ ನಾರಾಯಣಗೌಡ ಹಾಗೂ ಹೇಮಂತ್ ಇಬ್ಬರನ್ನೂ ಸ್ಯಾಂಟ್ರೋ ಕಾರು ಸಮೇತ ಹಾಸನದ ಬಡಾವಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಾಸನ ಹೊರ ವಲಯದ ಕೆ.ಕೆ.ರೆಸಿಡೆನ್ಸಿಯಲ್ಲಿ ನಾರಾಯಣಗೌಡ ಮತ್ತು ಹೇಮಂತ್ ಎಂಬುವರು ತಲಾ ₹ 500 ಮುಖಬೆಲೆಯ ₹ 2 ಲಕ್ಷಕ್ಕೂ ಅಧಿಕ ಹಣ ಇಟ್ಟುಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಕೆ‌.ಆರ್.ಪುರಂ ಪೋಲೀಸರು ದಾಳಿ ನಡೆಸಿ, ಹಣ, ಬಿಜೆಪಿ ಪಕ್ಷಕ್ಕೆ ಸಂಬಂಧಪಟ್ಟ ಕರಪತ್ರಗಳು, ದೇವರ ಫೋಟೋಗಳನ್ನು ವಶಕ್ಕೆ ಪಡೆದರು.

ಮತದಾರರಿಗೆ ಹಂಚಲು ಈ ಹಣ ಕೊಂಡೊಯ್ಯಲಾಗುತ್ತಿತ್ತು ಎಂದು ಜೆಡಿಎಸ್ ಕಾರ್ಯಕರ್ತ ಚಿದಂಬರ್‌ ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !