ಹಿರೀಸಾವೆ: ಇಲ್ಲಿನ ಚೌಡೇಶ್ವರಿ ಆಟೊ ಚಾಲಕರು ಮತ್ತು ಮಾಲೀಕರ ಸಂಘದಿಂದ ಶುಕ್ರವಾರ ಶ್ರೀಕಂಠಯ್ಯ ವೃತ್ತದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ರಕ್ತ ದಾನ ಮತ್ತು ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಹಿರೀಸಾವೆಯ ಸಮುದಾಯ ಆರೋಗ್ಯ ಕೇಂದ್ರ, ಹಾಸನ ಚಾಮರಾಜೇಂದ್ರ ಆಸ್ಪತ್ರೆ, ಜಿಲ್ಲಾ ಎನ್ಸಿಡಿ ಘಟಕದ ಸಿಬ್ಬಂದಿ, ಆಟೊ ಸಂಘದವರು ಸೇರಿದಂತೆ ನೂರಾರು ಮಂದಿ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಪಾರ್ಶ್ವವಾಯು ತಪಾಸಣೆಗೊಳಗಾದರು. ಶಿಬಿರಲ್ಲಿ 21 ಜನರು ರಕ್ತದಾನ ಮಾಡಿದರು.

ಶ್ರವಣಬೆಳಗೊಳ ಎಸ್ಐ ಸುಬ್ರಹ್ಮಣ್ಯ ಧ್ವಜಾರೋಹಣ ಮಾಡಿ ಮಾತನಾಡಿ, ರಾಜ್ಯದಲ್ಲಿರುವ ಎಲ್ಲಾ ಆಟೊ ಸಂಘದವರು ನಮ್ಮ ನಾಡಿನ ಗಡಿ, ನೆಲ–ಜಲ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಾರೆ ಮತ್ತು ರಾಜ್ಯೋತ್ಸವ ಆಚರಣೆಯಲ್ಲಿಯೂ ಮುಂಚೂಣಿಯಲ್ಲಿ ಇರುತ್ತಾರೆ. ಇವರಿಗೆ ರಾಜ್ಯದ ಜನರು ಚಿರಋಣಿಯಾಗಿರಬೇಕು ಎಂದರು.

ಕಾಂಗ್ರೆಸ್ ಮುಖಂಡ ಕೆ.ಬಿ. ಉದಯಕುಮಾರ್ ಮಾತನಾಡಿ, ಆಟೊ ಚಾಲಕರ ಎಲ್ಲಾ ಕಾರ್ಯಕ್ರಮಗಳಿಗೆ ಚಲನಚಿತ್ರ ನಟರಾದ ದಿವಂಗತ ಶಂಕರ್ ನಾಗ್ ಮತ್ತು ವಿಷ್ಣುವರ್ಧನ್ ಅವರು ಸ್ಫೂರ್ತಿ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಪ್ರಮೋದ್. ಸೆಸ್ಕ್ ಶಾಖಾಧಿಕಾರಿ ವೆಂಕಟೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬೋರಣ್ಣ, ಮುಖಂಡರಾದ ಶ್ರೀಧರ್, ಮಹೇಶ್, ಆರ.ಕೆ. ಮಂಜುನಾಥ್ ಮಾತನಾಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಮಾರುತಿ ಮಂಜುನಾಥ್, ಪ್ರಮುಖರಾದ ಎಚ್.ಕೆ. ವೆಂಕಟೇಶ್, ಪ್ರಗತಿವಾಸು, ಜಿ.ವಿ. ಗೋವಿಂದರಾಜ್, ನಾಗರಾಜು, ರೈತ ಸಂಘದ ಬಾಲಕೃಷ್ಣ, ಆಟೊ ಚಾಲಕರ ಸಂಘದ ಹೊಸಮನೆ ಚಂದ್ರು, ಸಂದೀಪ್, ಮಂಜುನಾಥ ಮೌರ್ಯ, ಮದನ್, ಸುರೇಶ್, ಶಂಕರ್, ಪಾಪಣ್ಣ, ತ್ಯಾಗರಾಜು ಸೇರಿದಂತೆ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.