ಹೊಳೆನರಸೀಪುರ: ತಾಲ್ಲೂಕಿನ ದೇವರಗುಡ್ಡೇನಹಳ್ಳಿ ಗ್ರಾಮದಲ್ಲಿ ಅ. 29ರಂದು ಅಭಿಲಾಷ್ (28) ಎಂಬ ಯುವಕ ರಾತ್ರಿ ವೇಳೆ ಜಮೀನಿಗೆ ನೀರು ಹಾಯಿಸಲು ಹೋದಾಗ ಹಾವು ಕಡಿದು ಮೃತಪಟ್ಟಿದ್ದರು.
ಈತನ ಗಳೆಯರು ಇತ್ತೀಚೆಗೆ ಅಭಿಲಾಷ್ ಮೊಬೈಲ್ ಫೋನ್ ಪರಿಶೀಲಿಸಿದಾಗ ಒಂದೂವರೆ ತಿಂಗಳ ಹಿಂದೆ ಅಭಿಲಾಷ್ ತನ್ನ ಜಮೀನಿನಲ್ಲಿ ನಾಗರಹಾವನ್ನು ಕೆಣಕುತ್ತಿರುವುದು, ನೀರಿನ ಪೈಪ್‍ನಲ್ಲಿ ಹಾವಿಗೆ ತಿವಿಯುತ್ತಿರುವ ವಿಡಿಯೊ ಸಿಕ್ಕಿದೆ. ಈ ಘಟನೆ ನಡೆದು 45 ದಿನಗಳ ನಂತರ ಅಭಿಲಾಷ್ ಹಾವು ಕಡಿದು ಮೃತಪಟ್ಟಿದ್ದಾರೆ. ಹಾವು ದ್ವೇಷಕ್ಕೆ ಕಚ್ಚಿದೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅಭಿಲಾಷ್ ಕೆಣಕಿದ ಹಾವೇ ಕಚ್ಚಿದೆಯೋ ಅಥವಾ ಬೇರೆ ಯಾವುದಾದರು ಹಾವು ಕಚ್ಚಿತೋ ಎಂಬುದು ದೃಢಪಟ್ಟಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.