ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಬಿ.ಟೆಕ್‌ ಪದವೀಧರ ಗ್ರಾ.ಪಂ ಅಧ್ಯಕ್ಷ

ಗ್ರಾಮದ ಅಭಿವೃದ್ಧಿ, ಶಿಕ್ಷಣಕ್ಕೆ ಒತ್ತು ನನ್ನ ಗುರಿ: ಲೋಕೇಶ್
Last Updated 4 ಫೆಬ್ರುವರಿ 2021, 5:24 IST
ಅಕ್ಷರ ಗಾತ್ರ

ಹಾಸನ: ಹೊಳೆನರಸೀಪುರ ವಿಧಾನ ಸಭಾಕ್ಷೇತ್ರ ವ್ಯಾಪ್ತಿಯ ಹಾಸನ ತಾಲ್ಲೂಕು ದುದ್ದ ಹೋಬಳಿ ಮೆಳಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿ.ಟೆಕ್‌ ಪದವೀಧರಎಂ.ಎಚ್‌. ಲೋಕೇಶ್‌ ಮತ್ತು ಉಪಾಧ್ಯಕ್ಷೆಯಾಗಿ ಮಣಿ ಆಯ್ಕೆಯಾದರು.

ಒಟ್ಟು 11 ಸದಸ್ಯರಲ್ಲಿ 6 ಮತ ಪಡೆದ ಎಂ.ಎಚ್‌. ಲೋಕೇಶ್‌ ಆಯ್ಕೆಯಾದರು. ಅಜಯ್‌ ಕುಮಾರ್‌ ಚುನಾವಣೆ ಅಧಿಕಾರಿಯಾಗಿದ್ದರು.

‘ಬಿ.ಇ, ಬಿ.ಟೆಕ್‌ ಮುಗಿಸಿ ಹಾಸನದಲ್ಲಿ ಸ್ವಂತ ಉದ್ಯೋಗ ಮಾಡಿಕೊಂಡಿದ್ದ ನನಗೆ ಗ್ರಾಮಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಎನಿಸಿತು. ಚುನಾವಣೆ ಸ್ಪರ್ಧಿಸಿದಾಗ ಉತ್ತಮ ಬೆಂಬಲಸಿಕ್ಕು ಗೆಲುವು ಸಾಧಿಸಿದೆ. ಈಗ ಗ್ರಾಮ ಪಂಚಾಯಿತಿ
ಅಧ್ಯಕ್ಷನಾಗಿ ಆಯ್ಕೆಯಾಗಿದ್ದು, ನನ್ನ ಅಧಿಕಾರ ಅವಧಿಯಲ್ಲಿ ಏನಾದರೂ ಹೊಸ ಬದಲಾವಣೆ ತರಬೇಕು ಎಂಬ ಹಂಬಲವಿದೆ’ ಎಂದು ಎಂ.ಎಚ್‌. ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದೆ ಮೆಳಗೋಡು ಗ್ರಾಮ ಪಂಚಾಯಿತಿ ‘ಎ’ ಗ್ರೇಡ್‌ ಪಡೆದಿತ್ತು. ಆದರೆ, ಬರುಬರುತ್ತಾ ಅಭಿವೃದ್ಧಿ ಕುಂಠಿತವಾಗಿ ಹಿನ್ನಡೆ ಉಂಟಾಗಿತ್ತು. ಸರ್ಕಾರದಿಂದ ಪಂಚಾಯಿತಿಗೆ ಬರುವ ಅನುದಾನವನ್ನುಸಮರ್ಪಕವಾಗಿ ಮತ್ತು ಕ್ರಮಬದ್ಧವಾಗಿ ಬಳಕೆ ಮಾಡಿಕೊಂಡು ಗ್ರಾಮವನ್ನು
ಅಭಿವೃದ್ಧಿ ಮಾಡುವ ಗುರಿ ಇದೆ’ ಎಂದರು.

‘ಮೆಳಗೋಡಿನಲ್ಲಿ 1 ರಿಂದ 10ನೇ ತರಗತಿ ವರೆಗಿನ ಶಾಲೆ ಇದೆ. ಮೊದಲು ಈ ಶಾಲೆಗೆ ಒಳ್ಳೆಯ ಹೆಸರಿತ್ತು. ಆದರೆ, ಈಗ ಇಲ್ಲ. ಆದ್ದರಿಂದ ಗ್ರಾಮದಲ್ಲಿ ಶಿಕ್ಷಣಾಭಿವೃದ್ಧಿಗೆಒತ್ತು ನೀಡ ಲಾಗುವುದು. ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ಆಶ್ರಯ ಯೋಜನೆಯಡಿ ಮನೆ ನಿರ್ಮಾಣ ಇತ್ಯಾದಿ ಸಮರ್ಪಕವಾಗಿ ನಿಭಾಯಿಸಿಗ್ರಾಮದಲ್ಲಿ ಏನಾದರೂ ಬದಲಾವಣೆ ಮಾಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT