ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಕರೆ

7
573 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಕರೆ

Published:
Updated:
Deccan Herald

ಹಾಸನ: ವಿದ್ಯಾರ್ಥಿಗಳು ಜೀವನದಲ್ಲಿ ಸವಾಲುಗಳನ್ನು ಎದುರಿಸಿ ಗುರಿ ಸಾಧಿಸಬೇಕು ಎಂದು ಬೆಳಗಾವಿ ವಿಶ್ವವಿದ್ಯಾಲಯದ ಕುಲಪತಿ ಕರಿಸಿದ್ದಪ್ಪ ಹೇಳಿದರು.

ಮಲೆನಾಡು ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ  ಆಯೋಜಿಸಿದ್ದ ಅಂತಿಮ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

‘ಯುವ ಪೀಳಿಗೆ ತಾಂತ್ರಿಕ ಕೌಶಲ ಮೈಗೂಡಿಸಿಕೊಂಡು ವಿವಿಧ ಕ್ಷೇತ್ರಗಳಾದ ಕೈಗಾರಿಕೆ, ವ್ಯವಸಾಯ, ತಂತ್ರಜ್ಞಾನ ಹಾಗೂ ಮತ್ತಿತರ ಸೇವೆಗಳಲ್ಲಿ ತಮ್ಮ ನೈಪುಣ್ಯತೆ ತೋರಿಸಬೇಕು’ ಎಂದರು.

‘ವಿದ್ಯಾರ್ಥಿಗಳು ಮೌಲ್ಯಗಳಿಗೆ ಆದ್ಯತೆ ನೀಡಿ ಜೀವನದಲ್ಲಿ ಪ್ರಗತಿ ಕಾಣಬೇಕು. ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ನಾನು, ಉನ್ನತ ಹುದ್ದೆಗೇರಿದ್ದೇನೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು’ ಎಂದು ಕಿವಿಮಾತು ಹೇಳಿದರು.

ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಮಾತನಾಡಿ, ‘ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಆಗಬೇಕು. ಎಂಜಿನಿಯರಿಂಗ್ ಶಿಕ್ಷಣ ಪಡೆದವರು ತಮ್ಮ ವೃತ್ತಿಗೆ ಗೌರವ ತರುವ ರೀತಿಯಲ್ಲಿ ಕೆಲಸ ಮಾಡಬೇಕು. ಕೆಲಸದಲ್ಲಿ ಪ್ರಾಮಾಣಿಕತೆ ಇರಬೇಕು’ ಎಂದು ತಿಳಿಸಿದರು.

9 ವಿಭಾಗಗಳ 534 ಪದವಿ ಹಾಗೂ 39 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 9 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಯಿತು.

ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಿ. ಜಿ. ಗುರಪ್ಪ, ಹಾರನಹಳ್ಳಿ ರಾಮಸ್ವಾಮಿ, ಚಂದಪ್ಪ ಪಾಟೀಲ್, ಬಿ. ಎನ್. ಬೋರಣ್ಣಗೌಡ, ಡಿ. ಎ. ಚಂದ್ರೇಗೌಡ, ಬಿ. ಎಸ್. ವೆಂಕಟೇಶ್ ಮೂರ್ತಿ, ವೈ. ಧರಣಪ್ಪ ಹಾಗೂ ಕೆ. ಎ. ನಂಜಪ್ಪಗೌಡ ಹೆಸರಿನಲ್ಲಿ ಚಿನ್ನದ ಪದಕ ಪ್ರದಾನ ಮಾಡಲಾಯಿತು.

ಭಾರತ್‌ ಬಿಲ್ಡರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಜಿಯಾವುಲ್ಲಾ ಷರೀಫ್‌, ಸಂಸ್ಥೆಯ ಕಾರ್ಯದರ್ಶಿ ಆರ್. ಟಿ. ದೇವೇಗೌಡ, ಖಜಾಂಚಿ ಆರ್. ಶೇಷಗಿರಿ, ಸಹ ಕಾರ್ಯದರ್ಶಿ ಡಿ. ಸಿ. ಅರವಿಂದ್, ನಿರ್ದೇಶಕರಾದ ಜಿ. ಎಲ್. ಮುದ್ದೇಗೌಡ, ಚೌಡುವಳ್ಳಿ ಪುಟ್ಟರಾಜ್, ಬಿ. ಕೆ. ಮಂಜುನಾಥ್, ಎಚ್. ಎ. ವೆಂಕಟರಾಮು, ಎಚ್. ಡಿ. ಪಾರ್ಶ್ವನಾಥ್‌, ಜಿ. ಟಿ. ಕುಮಾರ್, ಚೌಡುವಳ್ಳಿ ಜಗದೀಶ, ಡಿ. ಬಿ. ಹೇಮಂತ್ ಕುಮಾರ್, ಕೆ. ಎಂ. ಶಿವಣ್ಣ, ಬಿ. ಚಂದ್ರಶೇಖರಯ್ಯ, ಬಿ. ಎಸ್. ಗುರುನಾಥ್, ನಾಗೇಂದ್ರಯ್ಯ, ಸುರೇಶ್, ಶಿವರಾಂ ಕೃಷ್ಣಯ್ಯ, ಕಾಲೇಜಿನ ಪ್ರಾಂಶುಪಾಲ ಕೆ. ಎಸ್. ಜಯಂತ್, ಉಪಪ್ರಾಂಶುಪಾಲ ಎಂ. ಎಸ್. ರವಿ ಪ್ರಕಾಶ್ ಭಾಗವಹಿಸಿದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !